ಗಗನ್ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಂಡು ಜುಹುದಿಂದ ಪುಣೆಗೆ ಹೆಲಿಕಾಪ್ಟರ್ ಹಾರಾಟಕ್ಕಾಗಿ ಕಾರ್ಯಕ್ಷಮತೆ ಆಧಾರಿತ ನ್ಯಾವಿಗೇಷನ್ ಗೆ ಸಂಬಂಧಿಸಿದ ಏಷ್ಯಾದ ಮೊದಲ ಪ್ರಾತ್ಯಕ್ಷಿಕೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಕೇಂದ್ರ ನಾಗರಿಕ ವಾಯುಯಾನ ಮತ್ತು ಉಕ್ಕು ಸಚಿವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು
"ಈ ವಲಯಕ್ಕೆ ಸಂಬಂಧಿಸಿ ಗಮನಾರ್ಹ ಮೈಲಿಗಲ್ಲು! ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ವಾಯು ಸಂಚಾರ ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ” ಎಂದು ಹೇಳಿದ್ದಾರೆ.
Noteworthy milestone for the sector! It underscores our commitment to embracing advanced technologies for a safer and more efficient air traffic management. https://t.co/CQsf357gjM
— Narendra Modi (@narendramodi) June 2, 2023