ದೇಶದ ಯುವ ಸಮುದಾಯ ಯುವ ಯೋಜನೆಯನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಮುಂದೆ ಬರಬೇಕು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಯುವ ಬರಹಗಾರರನ್ನು ಸಜ್ಜುಗೊಳಿಸಲು, ಅವರನ್ನು ಬರಹಕ್ಕೆ ಅಣಿಗೊಳಿಸಲು ಮಾರ್ಗದರ್ಶನ ನೀಡುವ ಕಾರ್ಯಕ್ರಮವೇ ಪ್ರಧಾನ ಮಂತ್ರಿಗಳ ಯುವ ಯೋಜನೆಯಾಗಿದೆ, ಭವಿಷ್ಯದ ನಾಯಕತ್ವ ಪಾತ್ರಗಳಿಗೆ ಯುವ ಪೀಳಿಗೆಯನ್ನು ಸಜ್ಜುಗೊಳಿಸುವ ರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಶ್ರೀ ಮೋದಿ ಅವರು,
“ಯುವ ಸಮುದಾಯಕ್ಕೆ ಆಸಕ್ತಿದಾಯಕ ಅವಕಾಶ ಇದಾಗಿದ್ದು, ದೇಶದ ಬೌದ್ಧಿಕ ಆಸ್ತಿ ವಲಯಕ್ಕೆ ಅದ್ಭುತ ಕೊಡುಗೆ ನೀಡಲು ತಮ್ಮ ಬರವಣಿಗೆ ಕೌಶಲ್ಯ ಹೆಚ್ಚಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಹೆಚ್ಚಿನ ಮಾಹಿತಿ ತಿಳಿಯಲು https://innovateindia.mygov.in/yuva/ ಈ ಲಿಂಕ್’ಗೆ ಭೇಟಿ ಕೊಡಿ”.
Here is an interesting opportunity for youngsters to harness their writing skills and also contribute to India's intellectual discourse. Know more... https://t.co/SNfJr7FJ0V pic.twitter.com/rKlGDeU39U
— Narendra Modi (@narendramodi) June 8, 2021
ದೇಶದ ಯುವ ಮನಸ್ಸುಗಳನ್ನು ಸಬಲೀಕರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ. ಅಲ್ಲದೆ, ಕಲಿಕಾ ಪರಿಸರವನ್ನು ಸೃಷ್ಟಿಸಿ, ಯುವ ಸಮುದಾಯವನ್ನು ಭವಿಷ್ಯದ ನಾಯಕತ್ವ ಪಾತ್ರಗಳಿಗೆ ಅಣಿಗೊಳಿಸಲು ಆದ್ಯತೆಯ ಗಮನ ನೀಡಲಾಗಿದೆ.
ಈ ಗುರಿ ಸಾಧಿಸಲು ಮತ್ತು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಯುವ ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಸಂಭ್ರಮದಿಂದ ಆಚರಿಸಲು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಯುವ ಯೋಜನೆಯನ್ನು ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಭವಿಷ್ಯದ ನಾಯಕರನ್ನು ಸೃಷ್ಟಿಸುವ ಗುರಿಗೆ ಭದ್ರ ಬುನಾದಿ ಹಾಕಲು ಬಲುದೂರ ಸಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಮೂಲಭೂತವಾಗಿ, ಈ ಯುವ ಯೋಜನೆಯು 75 ವರ್ಷಗಳ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಸಾಗುತ್ತಿರುವಾಗ ಭಾರತೀಯ ಸಾಹಿತ್ಯದ ಆಧುನಿಕ ರಾಯಭಾರಿಗಳನ್ನು ಬೆಳೆಸಲು ಕೇಂದ್ರ ಸರ್ಕಾರ ಯೋಜಿಸಿದೆ. ಪುಸ್ತಕಗಳ ಪ್ರಕಾಶನದಲ್ಲಿ ಭಾರತ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಮತ್ತಷ್ಟು ಸಮೃದ್ಧಗೊಳಿಸಬೇಕಾದರೆ, ಈ ಯೋಜನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ಕಡ್ಡಾಯವಾಗಿದೆ.