ನಾರಿ ಶಕ್ತಿ ಪುರಸ್ಕಾರ ಪಡೆದ ಸಾಧಕಿಯರ ಜತೆ ಪ್ರಧಾನಮಂತ್ರಿಗಳಾದ ಸನ್ಮಾಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು.
ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಇಂದು ನಾರಿ ಶಕ್ತಿ ಪುರಸ್ಕಾರಕ್ಕೆ ಪಾತ್ರರಾದ ಮಹಿಳೆಯರನ್ನು ಭೇಟಿ ಮಾಡಿ ಸಂವಾದವನ್ನು ನಡೆಸಿದರು.
ಸಂವಾದದ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳು ಸೇವೆ ಪರಮ ಧರ್ಮ ಎಂಬುದು ನಮ್ಮ ಸಂಸ್ಕೃತಿಯ ಅಂತರ್ಗತವಾದ ಭಾಗವಾಗಿದೆ ಎಂದು ತಿಳಿಸಿದರು.
ಇತರರಿಗೆ ಸೇವೆ ಸಲ್ಲಿಸುವ ಸಂಕಲ್ಪದಲ್ಲೇ ಪ್ರಶಸ್ತಿ ಪುರಸ್ಕೃತ ಮಹಿಳೆಯರು ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದಾರೆ ಎಂದು ಸನ್ಮಾನ್ಯ ಪ್ರಧಾನಮಂತ್ರಿಗಳು ಬಣ್ಣಿಸಿದರು. ಈ ಸಾಧಕಿಯರು ಶ್ರಮದಿಂದ ಯಾರು ಸೇವೆಯನ್ನು ಪಡೆದುಕೊಂಡಿದ್ದಾರೋ ಅವರ ಆಚೆಗೂ ಈ ಕೊಡುಗೆಯು ವಿಸ್ತರಿಸುತ್ತದೆ. ಈ ಸೇವೆಯು ಸಮಾಜಕ್ಕೆ ಒಂದು ಪ್ರೇರಕ ಶಕ್ತಿಯಾಗಿದೆ ಎಂದು ಸನ್ಮಾನ್ಯ ಪ್ರಧಾನ ಮಂತ್ರಿಗಳು ಹೇಳಿದರು. ದೇಶವು ಸ್ವಾರ್ಥ ರಹಿತ ಸೇವೆಯ ಮೂರ್ತಿರೂಪವಾದ ಸಿಸ್ಟರ್ ನಿವೇದಿತಾ ಅವರ 150ನೇ ಜನ್ಮಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದರು.
ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎನ್ನುವ ಪ್ರಯತ್ನಗಳು ಭಾರತೀಯ ತತ್ವಗಳ ಒಂದು ಭಾಗವೇ ಆಗಿದೆ. ಧರ್ಮಶಾಲಾಗಳು, ಗೋಶಾಲಾಗಳು ಮತ್ತು ದೇಶದ ಉದ್ದಗಲಕ್ಕೂ ಗೋಚರಿಸುತ್ತಿರುವ ಶೈಕ್ಷಣಿಕ ಉಪಕ್ರಮಗಳಲ್ಲಿ ಇದೆಲ್ಲವೂ ಪ್ರತಿಫಲವಾಗುತ್ತಿದೆ ಎಂದಯ ಪ್ರಧಾನಮಂತ್ರಿಗಳು ಹೇಳಿದರು.
ಈ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಶ್ರೀಮತಿ ಮನೇಕಾ ಗಾಂಧಿ ಅವರು ಉಪಸ್ಥಿತರಿದ್ದರು.