ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೀತಿ ಆಯೋಗವು ಆಯೋಜಿಸಿದ್ದ “ಆರ್ಥಿಕ ನೀತಿಗಳು-ಮುಂದಿರುವ ಹಾದಿ “ ವಿಷಯದ ಕುರಿತಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40 ಕ್ಕೂ ಅಧಿಕ ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರ ಜೊತೆ ಸಂವಾದ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ಆರ್ಥಿಕ ವಿಷಯಗಳಾದ ಬೃಹತ್ ಆರ್ಥಿಕತೆ ಮತ್ತು ಉದ್ಯೋಗ , ಕೃಷಿ ಮತ್ತು ಜಲ ಸಂಪನ್ಮೂಲಗಳು, ರಫ್ತು, ಶಿಕ್ಷಣ, ಮತ್ತು ಆರೋಗ್ಯ –ಹೀಗೆ ಐದು ಪ್ರತ್ಯೇಕ ಗುಂಪುಗಳಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಮಧ್ಯಪ್ರವೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಆರ್ಥಿಕತೆಯ ವಿವಿಧ ಆಯಾಮಗಳಿಗೆ ಸಂಬಂಧಿಸಿ ತಜ್ಞರ ಸಲಹೆಗಳಿಗೆ ಮತ್ತು ಅವರ ಅಭಿಪ್ರಾಯಗಳಿಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಪೀಯುಷ್ ಗೋಯಲ್ ಮತ್ತು ಶ್ರೀ ರಾವ್ ಇಂದ್ರಜೀತ್ ಸಿಂಗ್, ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ರಾಜೀವ್ ಕುಮಾರ್ ಹಾಗು ಕೇಂದ್ರ ಸರಕಾರದ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.