ಹವಾಮಾನ ಬದಲಾವಣೆ ವಿರುದ್ಧ ಹೋರಾಟ, ಹವಾಮಾನ ನ್ಯಾಯಕ್ಕೆ ಒತ್ತು
ಇಂಗಾಲ ಹೊರಸೂಸುವಿಕೆ ತೀವ್ರತೆಯ ಪ್ರಮಾಣ ಶೇ 35 ರಿಂದ ಶೇ 33ಕ್ಕೆ ಇಳಿಸಲು ನಾವು ಬದ್ಧ: ಪ್ರಧಾನಮಂತ್ರಿ

 

ವಿಶ್ವಸುಸ್ಥಿರ ಅಭಿವೃದ್ಧಿ ಶೃಂಗ ಸಭೆ-2021 ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

“ನಮ್ಮ ಸಾಮಾನ್ಯ ಭವಿಷ್ಯವನ್ನು ಮರು ವ್ಯಾಖ್ಯಾನಿಸುವುದು: ಎಲ್ಲರಿಗೂ ಸುರಕ್ಷಿತ ಭದ್ರತೆಯ ಪರಿಸರ” ಎಂಬುದು ಈ ಬಾರಿಯ ಶೃಂಗ ಸಭೆಯ ವಿಷಯವಾಗಿದೆ.

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂತಹ ಜಾಗತಿಕ ವೇದಿಕೆಗಳು ಪ್ರಸ್ತುತ ಮತ್ತು ಭವಿಷ್ಯಕ್ಕೆ ಮುಖ್ಯವಾಗಿದೆ. ಆವೇಗ ಕಾಯ್ದುಕೊಂಡ ಟೆರಿ ಸಂಸ್ಥೆಗೆ ಅವರು ಅಭಿನಂದನೆ ಸಲ್ಲಿಸಿದರು. ಬರುವ ದಿನಗಳಲ್ಲಿ ಮಾನವೀಯತೆಯ ಪ್ರಗತಿಯ ಯಾನ ಹೇಗಿರುತ್ತದೆ ಎಂಬುದನ್ನು ಎರಡು ವಿಷಯಗಳು ವ್ಯಾಖ್ಯಾನಿಸುತ್ತವೆ. ಮೊದಲು ನಮ್ಮ ಆರೋಗ್ಯ, ಎರಡನೆಯದು ನಮ್ಮ ಗ್ರಹದ ಆರೋಗ್ಯ. ಎರಡೂ ಪರಸ್ಪರ ಸಂಬಂಧ ಹೊಂದಿವೆ ಎಂದರು.

ನಮ್ಮ ಗ್ರಹದ ಆರೋಗ್ಯದ ಬಗ್ಗೆ ಮಾತನಾಡಲು, ನಾವು ಇಲ್ಲಿ ಸೇರಿದ್ದೇವೆ. ನಾವು ಎದುರಿಸುತ್ತಿರುವ ಸವಾಲಿನ ಪ್ರಮಾಣ ವ್ಯಾಪಕವಾಗಿ ತಿಳಿದಿದೆ. ಆದರೆ ಸಾಂಪ್ರದಾಯಿಕ ವಿಧಾನಗಳು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಯುವಕರಲ್ಲಿ ಹೂಡಿಕೆ ಮಾಡುವ ಪೆಟ್ಟಿಗೆಯಿಂದ ಯೋಚಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡುವುದು ಸಮಯದ ಅವಶ್ಯಕತೆಯಾಗಿದೆ. ಹವಾಮಾನ ಬದಲಾವಣೆ ವಿರುದ್ಧ ಹೋರಾಟ ಮಾಡುವುದು ಹವಾಮಾನ ನ್ಯಾಯವಾಗಿದೆ. ಹವಾಮಾನ ನ್ಯಾಯ ನಂಬಿಕೆಯ ದೃಷ್ಟಿಯಿಂದ ಮುಖ್ಯವಾಗಿದ್ದು, ಅಲ್ಲಿ ಬೆಳವಣಿಗೆ ಬಡವರಿಗೆ ಹೆಚ್ಚಿನ ಸಹಾನುಭೂತಿಯಿಂದ ಬರುತ್ತದೆ. ಹವಾಮಾನ ನ್ಯಾಯ ಎನ್ನುವುದು ಅಭಿವೃದ್ಧಿ ರಾಷ್ಟ್ರಗಳ ಬೆಳವಣಿಗೆಗೆ ಜಾಗ ಒದಗಿಸುತ್ತದೆ. ನಮ್ಮ ವ್ಯಕ್ತಿಗತ ಮತ್ತು ಸಾಮೂಹಿಕ ಕರ್ತವ್ಯಗಳು, ಹವಾಮಾನ ನ್ಯಾಯ ಸಾಧಿಸಲು ಪ್ರತಿಯೊಬ್ಬರಿಗೂ ಅರ್ಥಮಾಡಿಸುತ್ತದೆ ಎಂದು ಹೇಳಿದರು.

ತಳಮಟ್ಟದ ಕ್ರಮಗಳನ್ನು ಭಾರತ ಬೆಂಬಲಿಸುವ ಉದ್ದೇಶ ಹೊಂದಿದೆ. ಪ್ಯಾರಿಸ್ ನ ಗುರಿಗಳನ್ನು ತಲುಪಲು ಮತ್ತು ನಮ್ಮ ಬದ್ಧತೆಯನ್ನು ಸಾಕಾರಗೊಳಿಸಲು ಸಾರ್ವಜನಿಕ ಸ್ಪೂರ್ತಿಯ ಪ್ರಯತ್ನಗಳು ಸಾಗಿದೆ. ನಾವು ಜಿ.ಡಿ.ಪಿಯ ಇಂಗಾಲ ಹೊರ ಸೂಸುವ ಪ್ರಮಾಣವನ್ನು ಶೇ 35 ರಿಂದ 33 ಕ್ಕೆ ಅಂದರೆ 2005 ರ ಹಂತಕ್ಕೆ ಇಳಿಸಲು ನಾವು ಬದ್ಧರಾಗಿದ್ದೇವೆ. ಭೂಮಿಯ ಅವನತಿಯನ್ನು ತಟಸ್ಥತೆಗೆ ತರಲು ಭಾರತ ಸ್ಥಿರ ಪ್ರಗತಿ ಸಾಧಿಸುತ್ತಿದೆ. ಭಾರತದಲ್ಲಿ ನವೀಕೃತ ಇಂಧನದ ಬೆಳವಣಿಗೆ ತ್ವರಿತವಾಗುತ್ತಿದೆ. ಬರುವ 2030ರ ವೇಳೆಗೆ 450 ಗಿಗಾ ವ್ಯಾಟ್ ನಷ್ಟು ನವೀಕೃತ ಇಂಧನ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಸೂಕ್ತ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಸಮಾನತೆ ಇಲ್ಲದೇ ಇದ್ದರೆ ಸುಸ್ಥಿರ ಅಭಿವೃದ್ಧಿ ಅಪೂರ್ಣವಾಗುತ್ತದೆ. ಈ ದಿಸೆಯಲ್ಲೂ ನಾವು ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. 2019ರ ಮಾರ್ಚ್ ನಲ್ಲಿ ಭಾರತ ಶೇ 100 ರಷ್ಟು ವಿದ್ಯುದೀಕರಣವನ್ನು ಸಾಧಿಸಿದೆ. ಇದನ್ನು ಸುಸ್ಥಿರ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮಾದರಿಗಳ ಮೂಲಕ ಸಾಧಿಸಿದ್ದೇವೆ. ಉಜ್ವಲ ಯೋಜನೆಯ ಸಾಧನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜನರ ಜೀವನದಲ್ಲಿ 67 ದಶಲಕ್ಷ ಜನರ ಬದುಕಿನಲ್ಲಿ ಎಲ್.ಇ.ಡಿ ಬಲ್ಪ್ ಗಳು ಒಂದು ಭಾಗವಾಗಿವೆ. ಇದರಿಂದ ಪ್ರತಿ ವರ್ಷ 38 ದಶಲಕ್ಷ ಟನ್ ನಷ್ಟು ಕಾರ್ಬನ್ ಡೈ ಆಕ್ಸೈಡ್ ಹೊರ ಸೂಸುವುದು ಕಡಿಮೆಯಾಗಿದೆ. ಜಲ ಜೀವನ್ ಅಬಿಯಾನದಡಿ ಕಳೆದ 18 ತಿಂಗಳುಗಳಲ್ಲಿ 34 ದಶಲಕ್ಷ ಮನೆಗಳಿಗೆ ನಳದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಯಿಂದ ಕೆಳಗಿರುವ 80 ದಶಲಕ್ಷ ಕುಟುಂಬಗಳಿಗೆ ಸ್ವಚ್ಛ ಅಡುಗೆ ಅನಿಲ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಶೇ 6 ರಷ್ಟು ನೈಸರ್ಗಿಕ ಇಂಧನದ ಪಾಲಿದ್ದು, ಇದನ್ನು ಶೇ 15 ಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಸುಸ್ಥಿರತೆ ಕುರಿತಾದ ಚರ್ಚೆಗಳು ಹಸಿರು ಶಕ್ತಿಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಆದರೆ ಹಸಿರು ಶಕ್ತಿಯು ಕೇವಲ ಸಾಧನವಾಗಿದೆ. ನಾವು ಬಯಸುವ ಗಮ್ಯ ಸ್ಥಾನವು ಹಸಿರು ಗ್ರಹವಾಗಿದೆ. ಕಾಡುಗಳು ಮತ್ತು ಹಸಿರು ಹೊದಿಕೆಗಳ ಬಗ್ಗೆ ನಮ್ಮ ಸಂಸ್ಕೃತಿಯ ಆಳವಾದ ಗೌರವವು ಹೊರಗಿನ ಫಲಿತಾಂಶಗಳಿಗೆ ಸ್ಪಂದಿಸುತ್ತಿದೆ. ಪ್ರಾಣಿಗಳ ರಕ್ಷಣೆ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸಲು ವಿಶೇಷ ಗಮನಹರಿಸಲಾಗುತ್ತಿದೆ. ಕಳೆದ ಐದರಿಂದ ಏಳು ವರ್ಷಗಳಲ್ಲಿ ಸಿಂಹ, ಹುಲಿ, ಚಿರತೆಗಳು ಮತ್ತು ಡಾಲ್ಫಿನ್ ಸಂಖ್ಯೆಯೂ ಸಹ ಹೆಚ್ಚಾಗಿದೆ ಎಂದರು.

ಒಟ್ಟಿಗೆ ಸಾಗುವ ಮತ್ತು ನಾವೀನ್ಯತೆ ಎಂಬ ಎರಡು ಅಂಶಗಳ ಕುರಿತು ಶೃಂಗ ಸಭೆಯಲ್ಲಿ ಭಾಗವಹಿಸಿದ್ದವರ ಗಮನ ಸೆಳೆದ ಪ್ರಧಾನಮಂತ್ರಿಯವರು, ಸಾಮೂಹಿಕ ಪ್ರಯತ್ನಗಳ ಮೂಲಕ ನಾವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ರಾಷ್ಟ್ರ ಉತ್ತಮವಾಗಿರಬೇಕು ಎಂದು ಬಯಸುತ್ತಿದ್ದು, ಇದರ ಪರಿಣಾಮ ಸುಸ್ಥಿರ ಅಭಿವೃದ್ಧಿ ಇದೀಗ ವಾಸ್ತವವಾಗಿದೆ. ಭಾರತ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ನಿಟ್ಟಿನಲ್ಲಿ ಭಾರತ ಸಾಗುತ್ತದೆ. ಭಾಗವಹಿಸುವ ಎಲ್ಲರೂ ತಮ್ಮ ಮನಸ್ಸು ಮತ್ತು ರಾಷ್ಟ್ರಗಳು ಪ್ರಪಂಚದಾದ್ಯಂತ ಉತ್ತಮ ಅಭ್ಯಾಸಗಳಿಂದ ಗಮನ ಸೆಳೆಯಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಹೇಳಿದರು.

ನಾವೀನ್ಯತೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ನವೀಕೃತ ಇಂಧನ ವಲಯದಲ್ಲಿ ಹಲವಾರು ನವೋದ್ಯಮಗಳು ಪರಿಸರ ಸ್ನೇಹಿ ತಂತ್ರಜ್ಞಾನ, ನವೀಕೃತ ಇಂಧನ ಮತ್ತಿತರ ವಲಯ ಹಾಗೂ ಮತ್ತಿತರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ. ನೀತಿ ನಿರೂಪಕರು, ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಯುವ ಸಮೂಹದ ಶಕ್ತಿಯು ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಎಂದು ಹೇಳಿದರು.

ವಿಪತ್ತು ನಿರ್ವಹಣಾ ಸಾಮರ್ಥ್ಯದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತಂತ್ರಜ್ಞಾನದತ್ತ ಗಮನಹರಿಸುವ ಅಗತ್ಯವಿದೆ. ವಿಪತ್ತು ಸ್ಥಿತಿಸ್ಥಾಪಕತ್ವ ಮೂಲ ಸೌಕರ್ಯಕ್ಕಾಗಿ ನಾವು ಒಕ್ಕೂಟದ ಭಾಗವಾಗಬೇಕಿದ್ದು, ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮತ್ತಷ್ಟು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯತೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಮ್ಮ ಮಾನವ ಕೇಂದ್ರಿತ ವಿಧಾನವು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿದೆ ಎಂದು ಹೇಳಿದರು.

ಶೃಂಗ ಸಭೆಯಲ್ಲಿ ಗಯಾನ ಗಣರಾಜ್ಯದ ಅಧ್ಯಕ್ಷರಾದ ಡಾ, ಮೊಹಮದ್ ಇರ್ಫಾನ್ ಅಲಿ, ಪಪುವ ನ್ಯೂ ಜಿನೆವಾದ ಪ್ರಧಾನಿ ಶ್ರೀ ಜೇಮ್ಸ್ ಮರಪೆ, ಮಾಲ್ಡೀವ್ಸ್ ಗಣರಾಜ್ಯದ ಪೀಪಲ್ಸ್ ಮಜ್ಲಿಸ್ ನ ಸ್ಪೀಕರ್ ಶ್ರೀ ಮೊಹಮದ್ ನಶೀದ್, ವಿಶ್ವ ಸಂಸ್ಥೆಯ ಉಪ ಮಹಾ ಕಾರ್ಯದರ್ಶಿ ಶ್ರೀಮತಿ ಅಮಿನ ಜೆ ಮೊಹಮದ್, ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಪ್ರಕಾಶ್ ಜಾವ್ಡೇಕರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi govt created 17.19 crore jobs in 10 years compared to UPA's 2.9 crore

Media Coverage

PM Modi govt created 17.19 crore jobs in 10 years compared to UPA's 2.9 crore
NM on the go

Nm on the go

Always be the first to hear from the PM. Get the App Now!
...
Prime Minister greets on the occasion of Urs of Khwaja Moinuddin Chishti
January 02, 2025

The Prime Minister, Shri Narendra Modi today greeted on the occasion of Urs of Khwaja Moinuddin Chishti.

Responding to a post by Shri Kiren Rijiju on X, Shri Modi wrote:

“Greetings on the Urs of Khwaja Moinuddin Chishti. May this occasion bring happiness and peace into everyone’s lives.