ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗುಜರಾತಿನ ಕೇವಾಡಿಯಾದಲ್ಲಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ ನಿವೇಶನವನ್ನು ಉದ್ಘಾಟಿಸಿದರು.
ತಂತ್ರಜ್ಞಾನ ಪ್ರಾತ್ಯಕ್ಷಿಕೆ ನಿವೇಶನವು ಪೊಲೀಸ್ ಮತ್ತು ಅರೆ ಸೈನಿಕ ಪಡೆಗಳ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಮಾರಕ ಅಸ್ತ್ರಗಳು ಮತ್ತು ಮಾರಕವಲ್ಲದ ಅಸ್ತ್ರಗಳ ಸಹಿತ ವಿವಿಧ ಅಸ್ತ್ರಗಳ ಪ್ರದರ್ಶನವನ್ನು ಒಳಗೊಂಡಿದೆ.
ಸಿ.ಐ.ಎಸ್. ಎಫ್., ಸಿ.ಆರ್.ಪಿ.ಎಫ್., ಬಿ.ಎಸ್.ಎಫ್., ಎನ್.ಎಸ್.ಜಿ. ಮತ್ತು ಇತರ ವಿವಿಧ ರಾಜ್ಯ ಪೊಲೀಸ್ ತುಕಡಿಗಳು ವಾಯುಯಾನ ಭದ್ರತೆ, ಪಡೆಗಳ ಆಧುನೀಕರಣ. ಡಿಜಿಟಲ್ ಉಪಕ್ರಮಗಳು ಇತ್ಯಾದಿ ಶೀರ್ಷಿಕೆಗಳಡಿಯಲ್ಲಿ ತಮ್ಮ ಆಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸಿವೆ.
ಸಿ.ಐ.ಎಸ್.ಎಫ್. ಆಧುನಿಕ ತಂತ್ರಜ್ಞಾನವನ್ನು ವಿಮಾನ ನಿಲ್ದಾಣಗಳಲ್ಲಿ ತ್ವರಿತವಾಗಿ ಮತ್ತು ಯಶಸ್ವಿಯಾಗಿ ಮುಖ ಗುರುತಿಸುವುದಕ್ಕಾಗಿ ಬಳಸಿಕೊಂಡಿರುವುದನ್ನು ಪ್ರಧಾನ ಶೀರ್ಷಿಕೆಯಲ್ಲಿ ಪ್ರದರ್ಶಿಸಿದೆ. ಜತೆಗೆ ಡಿಜಿಟಲೀಕರಣ ಮತ್ತು ಪಡೆಗಳ ಆಧುನೀಕರಣ ಇತ್ಯಾದಿಗಳನ್ನು ಅದರಲ್ಲಿ ಸಮ್ಮಿಳಿತಗೊಳಿಸಿದೆ. ಎನ್.ಎಸ್.ಜಿ.ಯು ಭದ್ರತಾ ಕಿಟ್ ಗಳು, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ದೂರಸಂವೇದಿ ನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡ ವಾಹನಗಳು ಮತ್ತು ಸಲಕರಣೆಗಳನ್ನು ಪ್ರದರ್ಶಿಸಿದೆ.
ಗೃಹ ವ್ಯವಹಾರಗಳ ಸಚಿವಾಲಯವು “112” ಉಪಕ್ರಮಗಳನ್ನು ಪ್ರಧಾನವಾಗಿ ಪ್ರದರ್ಶಿಸಿದೆ, ಆ ಮೂಲಕ ಎಲ್ಲಾ ತುರ್ತು ಸಂದರ್ಭಗಳಲ್ಲಿ ಒಂದು ಸಂಖ್ಯೆಯ ಮಹತ್ವವನ್ನು ಅದು ಸಂಕೇತಿಸಿದೆ. ಈ ಸಚಿವಾಲಯದ ಪ್ರದರ್ಶನದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ರಾಷ್ಟ್ರೀಯ ದತ್ತಾಂಶ, ಇ-ಮುಲಾಕತ್ ಮತ್ತು ಇತರ ಡಿಜಿಟಲ್ ಉಪಕ್ರಮಗಳೂ ಪ್ರಮುಖವಾಗಿ ಪ್ರದರ್ಶಿಸಲ್ಪಟ್ಟಿವೆ.
ಸಿ.ಆರ್.ಪಿ.ಎಫ್. ಮಳಿಗೆಯಲ್ಲಿ ಸಿ.ಆರ್.ಪಿ.ಎಫ್. ಸಿಬ್ಬಂದಿಗಳು ಪಡೆದ ಶೌರ್ಯ ಪದಕಗಳು ಮತ್ತು ಗೌರವಗಳನ್ನು ಪ್ರದರ್ಶಿಸಲಾಗಿದೆ. 1939 ರಿಂದ ಶೌರ್ಯದ ಕಥೆಯನ್ನು ಹೇಳುವ ಮತ್ತು ಸಿ.ಆರ್.ಪಿ.ಎಫ್. ನಡೆಸಿದ ಸ್ಮರಣಾರ್ಹ ಕದನಗಳ ಕಥೆಯನ್ನೂ ಇಲ್ಲಿ ಪ್ರದರ್ಶಿಸಲಾಗಿದೆ.
ಪ್ರಧಾನ ಮಂತ್ರಿ ಅವರು ಗುಜರಾತ್ ಪೊಲೀಸರು ಆಯೋಜಿಸಿದ ವಸ್ತು ಪ್ರದರ್ಶನಕ್ಕೂ ಭೇಟಿ ನೀಡಿದರು. ಇದು ವಿಶ್ವಾಸ್ ಯೋಜನೆ ಮತ್ತು ಆಧುನಿಕ ತಂತ್ರಜ್ಞಾನದ ಪ್ರದರ್ಶನವಾಗಿತ್ತು. ದಿಲ್ಲಿ ಪೊಲೀಸರು ಪ್ರಮುಖವಾಗಿ ಡಿಜಿಟಲ್ ಉಪಕ್ರಮಗಳನ್ನು ಪ್ರದರ್ಶನಕ್ಕಿಟ್ಟಿದ್ದರೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ರಾಷ್ಟ್ರದ ಸುರಕ್ಷೆ ಮತ್ತು ಭದ್ರತೆ ಖಾತ್ರಿಪಡಿಸುವ ಭದ್ರತಾ ವಾಹನಗಳನ್ನು ಪ್ರದರ್ಶಿಸಿದ್ದರು.
At Kevadia, the Prime Minister attends an exhibition on integrating technology in policing. pic.twitter.com/RppdCjMxTX
— PMO India (@PMOIndia) October 31, 2019