PM Modi inaugurates Medical College at Vadnagar, Gujarat
PM Modi launches Mission Intensified Indradhanush, stresses on vitality of vaccination
Prices of stents have been brought down, we are constantly making efforts to so that healthcare becomes affordable for the poor: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತರುವಾಯ ಇದೇ ಮೊದಲಬಾರಿಗೆ ಇಂದು ತಮ್ಮ ಹುಟ್ಟೂರು ವಾದ್ ನಗರಕ್ಕೆ ಭೇಟಿ ನೀಡಿದರು.

ಪ್ರಧಾನಮಂತ್ರಿಯವರನ್ನು ಸ್ವಾಗತಿಸಲು ಪುರಜನರು ರಸ್ತೆಯ ಇಕ್ಕೆಲದಲ್ಲಿ ಜಮಾಯಿಸಿದ್ದರು. ಪ್ರಧಾನಿ ಹತ್ಕೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ತಾವು ಬಾಲ್ಯದಲ್ಲಿ ಓದಿದ ಶಾಲೆಗೆ ಕೂಡ ಕೆಲ ಕಾಲ ಭೇಟಿ ನೀಡಿದ್ದರು.

ಪ್ರಧಾನಮಂತ್ರಿಯವರು ವಾದ್ ನಗರದ ಜೆಎಂಇಆರ್.ಎಸ್. ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು ಮತ್ತು ಅದರ ಲೋಕಾರ್ಪಣೆ ಅಂಗವಾಗಿ ಫಲಕ ಅನಾವರಣ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.

ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿಯವರು, ಸಂಪೂರ್ಣ ರೋಗನಿರೋಧಕ ಶಕ್ತಿ ಒದಗಿಸುವ ಗುರಿಯನ್ನು ತ್ವರಿತವಾಗಿ ಸಾಧಿಸಲು ಕ್ಷಿಪ್ರ ಇಂದ್ರಧನುಷ್ ಅಭಿಯಾನ ಉದ್ಘಾಟಿಸಿದರು. ಇದು ನಗರ ಪ್ರದೇಶ ಮತ್ತು ರೋಗನಿರೋಧಕ ವ್ಯಾಪ್ತಿ ಕಡಿಮೆ ಇರುವ ಇತರ ಭಾಗಗಳತ್ತ ಹೆಚ್ಚಿನ ಗಮನ ಹರಿಸುತ್ತದೆ. ಪ್ರಧಾನಮಂತ್ರಿಯವರು ಆಶಾ ಕಾರ್ಯಕರ್ತರೆಯ ಕಾರ್ಯವನ್ನು ಸುಧಾರಿಸುವ ಟಿಇಸಿಎಚ್ಓ – ನಾವಿನ್ಯಪೂರ್ಣ ಮೊಬೈಲ್ ದೂರವಾಣಿಯ ಆನ್ವಯಿಕ ಉದ್ಘಾಟನೆ ಅಂಗವಾಗಿ ಇ ಟ್ಯಾಬ್ಲೆಟ್ ಗಳನ್ನು ಆರೋಗ್ಯ ಕಾರ್ಯಕರ್ತರಿಗೆ ವಿತರಣೆ ಮಾಡಿದರು. ಅವರು ಕೆಲವು ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿದರು.

ಉತ್ಸಾಹಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ಹುಟ್ಟೂರಿಗೆ ಮರಳಿ ಬರುವುದು ಮತ್ತು ಇಷ್ಟು ದೊಡ್ಡ ಆಪ್ತ ಸ್ವಾಗತ ಪಡೆಯವುದು ವಿಶೇಷ ಎಂದರು. ನಾನು ಇಂದು ಏನಾಗಿದ್ದೇನೋ ಅದಕ್ಕೆ ಈ ನೆಲದಲ್ಲಿ ನಾನು, ನಿಮ್ಮೆಲ್ಲರೊಂದಿಗೆ ಕಲಿತ ಮೌಲ್ಯಗಳೇ ಕಾರಣ ಎಂದು ಪ್ರಧಾನಿ ಹೇಳಿದರು.

ನಾನು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮರಳುತ್ತೇನೆ ಮತ್ತು ನಾನು ದೇಶಕ್ಕಾಗಿ ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ವಾದ್ ನಗರ್ ಜನತೆಗೆ ಭರವಸೆ ನೀಡಿದರು. ಆರೋಗ್ಯ ಕ್ಷೇತ್ರ ಅದರಲ್ಲೂ ಕ್ಷಿಪ್ರ ಇಂದ್ರ ಧನುಷ್ ಅಭಿಯಾನ ಉದ್ಘಾಟಿಸುವ ಅವಕಾಶ ಸಿಕ್ಕದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸರ್ಕಾರ ಹೇಗೆ ಸ್ಟಂಟ್ ಗಳ ಬೆಲೆ ಇಳಿಸಿದೆ ಎಂದು ತಿಳಿಸಿದ ಪ್ರಧಾನಿ, ಬಡವರಿಗೆ ಆರೋಗ್ಯಸೇವೆಗಳ ಕೈಗೆಟಕುವಂತೆ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದರು.

ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಸಮಾಜಕ್ಕೆ ಜನತೆಗೆ ಸೇವೆ ಸಲ್ಲಿಸುವ ಹೆಚ್ಚಿನ ವೈದ್ಯರ ಅಗತ್ಯವಿದೆ ಎಂದು ಹೇಳಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi