ಕೋಲ್ಕತ್ತಾದಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋಲ್ಕತ್ತಾ ಬಂದರು ಟ್ರಸ್ಟ್ ನ 150ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಕೋಲ್ಕತ್ತಾದ ರಬೀಂದ್ರ ಸೇತುವೆ (ಹೌರಾ ಸೇತುವೆ)ಯ ಸಂವಾದನಾತ್ಮಕ ಧ್ವನಿ ಮತ್ತು ಬೆಳಕಿನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಮುಂಬೆಳಕಿನ ಉದ್ಘಾಟನೆ ಅಂಗವಾಗಿ ಸಮಾರಂಭ ಸ್ಥಳದಲ್ಲಿ ಅವರು ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.
ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಜಗದೀಪ್ ಧನಕರ್, ಮುಖ್ಯಮಂತ್ರಿ ಕುಮಾರಿ ಮಮತಾ ಬ್ಯಾನರ್ಜಿ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ರಬೀಂದ್ರ ಸೇತುವೆಯ ನೂತನ ದೀಪಾಲಂಕಾರವು ಸಂಗೀತದೊಂದಿಗೆ ಮೇಳೈಸುವ ಪ್ರದರ್ಶನವನ್ನು ಒಳಗೊಂಡಂತೆ ಕಾರ್ಯಕ್ರಮರೂಪಿತ ಬಹು-ವರ್ಣದ ಬೆಳಕಿಗಾಗಿ 650 ವಿದ್ಯುತ್ ಕ್ಷಮತೆಯ ಎಲ್.ಇ.ಡಿ. ಮತ್ತು ಪ್ರಕಾಶಮಾನ ವಿದ್ಯುತ್ ದೀಪಗಳಿಂದ ಕೂಡಿದೆ. ಈ ದೀಪಗಳು ಎಂಜಿನಿಯರಿಂಗ್ ಕೌತಕ ಎನಿಸಿರುವ ಸೇತುವೆಗೆ ಹೆಚ್ಚಿನ ಪಾರಂಪರಿಕ ನೋಟವನ್ನು ನೀಡುತ್ತದೆ. ಹೊಸ ಸಂವಾದನಾತ್ಮಕ ಪ್ರದರ್ಶನವು ಸ್ಥಳೀಯರು, ಪ್ರವಾಸಿಗರನ್ನು ಸೆಳೆಯಲು ನೆರವಾಗಲಿದೆ.
ರಬೀಂದ್ರ ಸೇತುವೆಯನ್ನು 1943ರಲ್ಲಿ ನಿರ್ಮಿಸಲಾಗಿತ್ತು. ರಬೀಂದ್ರ ಸೇತುವೆಯ 75 ನೇ ವಾರ್ಷಿಕೋತ್ಸವವನ್ನು ಕಳೆದ ವರ್ಷ ಆಚರಿಸಲಾಗಿತ್ತು. ಇದು ಒಂದು ಎಂಜಿನಿಯರಿಂಗ್ ಕೌತುಕವಾಗಿದ್ದು, ಯಾವುದೇ ನಟ್ ಮತ್ತು ಬೋಲ್ಟ್ ಗಳಿಲ್ಲದೆ, ಕೇವಲ ರಿವಿಟ್ ಮೂಲಕ ಸಂಪೂರ್ಣ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣಕ್ಕೆ 26,500 ಟನ್ ಉಕ್ಕು ಬಳಸಲಾಗಿದೆ, ಈ ಪೈಕಿ 23ಸಾವಿರ ಟನ್ ಹೈ ಟೆನ್ಸಿಲ್ ಮಿಶ್ರ ಸ್ಟೀಲ್ ಬಳಕೆಯಾಗಿದೆ.
After the programmes in Kolkata, on the way to Belur Math by boat. Have a look at the beautiful Rabindra Setu! pic.twitter.com/vJsq8JSQ7J
— Narendra Modi (@narendramodi) January 11, 2020