Quoteನಮ್ಮ ಸರ್ಕಾರದ ಮಂತ್ರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್': ಪ್ರಧಾನಿ ಮೋದಿ
Quote"ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ದೇಶದ ಪ್ರತಿಯೊಂದು ನಾಗರಿಕರನ್ನು ಸಂಪರ್ಕಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ: ಪ್ರಧಾನಿ ಮೋದಿ "
Quote"ಲೆಹ್, ಲಡಾಖ್ ಮತ್ತು ಕಾರ್ಗಿಲ್ ಅಭಿವೃದ್ಧಿಗಾಗಿ ಯಾವುದೇ ಪ್ರಯತ್ನಗಳನ್ನು ಬಿಡಲಾಗುವುದಿಲ್ಲ: ಪ್ರಧಾನಿ ಮೋದಿ "

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಹ್ಹ್, ಜಮ್ಮು ಮತ್ತು ಶ್ರೀನಗರದ ಒಂದು ದಿನದ ಭೇಟಿಯ ಅಂಗವಾಗಿ ಪ್ರಥಮ ಚರಣದಲ್ಲಿ ಲಡಾಖ್ ನ ಲೆಹ್ಹ್ ಗೆ ಇಂದು ಆಗಮಿಸಿದರು. ಅಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ/ಶಂಕುಸ್ಥಾಪನೆ ನೆರವೇರಿಸಿದರು.

|

ಕೊರೆಯುವ ಚಳಿಗಾಲಕ್ಕೂ ಜಗ್ಗದೆ ನೆರದ ಸಭಿಕರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, “ಯಾರು ಕಠಿಣ ಪರಿಸ್ಥಿಯಲ್ಲಿ ಬದುಕುತ್ತಿರುತ್ತಾರೋ ಅವರು ಯಾವುದೇ ಕಾಠಿಣ್ಯಕ್ಕೂ ಸವಾಲು ಹಾಕುತ್ತಾರೆ. ನಿಮ್ಮ ಮಮತೆ ನನಗೆ ಶ್ರಮಪಟ್ಟು ದುಡಿಯಲು ದೊಡ್ಡ ಸ್ಫೂರ್ತಿ ನೀಡುತ್ತದೆ ಎಂದರು.”

|

ಲಡಾಖ್ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಲಡಾಖ್ ನಲ್ಲಿ ಜನಸಂಖ್ಯೆಯ ಶೇ.40ರಷ್ಟು ಯುವ ವಿದ್ಯಾರ್ಥಿಗಳಿದ್ದಾರೆ. ಈ ವಲಯದಲ್ಲಿ ವಿಶ್ವವಿದ್ಯಾಲಯ ಆಗಬೇಕು ಎಂಬುದು ದೀರ್ಘ ಕಾಲದ ಬೇಡಿಕೆಯಾಗಿತ್ತು. ಈಗ ಲಡಾಖ್ ವಿಶ್ವವಿದ್ಯಾಲಯದ ಆರಂಭದೊಂದಿಗೆ, ಈ ಬೇಡಿಕೆ ಈಡೇರಿದೆ.” ಎಂದರು. ಈ ವಿಶ್ವವಿದ್ಯಾಲಯವು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿದ್ದು, ಲೆಹ್ಹ್, ಕಾರ್ಗಿಲ್, ನುಬ್ರಾ, ಜನ್ಸ್ಕಾರ್, ಡ್ರಾಸ್ ಮತ್ತು ಕಾಲ್ತ್ಸಿಯ ಪದವಿ ಕಾಲೇಜುಗಳನ್ನು ಒಳಗೊಳ್ಳಲಿದೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲೆಹ್ಹ್ ಮತ್ತು ಕಾರ್ಗಿಲ್ ನಲ್ಲಿ ತನ್ನ ಆಡಳಿತಾತ್ಮಕ ಕಚೇರಿಯನ್ನು ಹೊಂದಲಿದೆ.

|

ಪ್ರಧಾನಮಂತ್ರಿಯವರು 9 ಎಂ.ಡಬ್ಲ್ಯು ದಹ್ ಜಲ ವಿದ್ಯುತ್ ಯೋಜನೆಯನ್ನು ದತಾಂಗ್ ಗ್ರಾಮದ ಬಳಿತ ದಹ್ ನಲ್ಲಿ ಮತ್ತು 220 ಕೆ.ವಿ. ಶ್ರೀನಗರ್ – ಅಲುಸ್ತೆಂಗ್ – ಡ್ರಾಸ್ – ಕಾರ್ಗಿಲ್ – ಲೆಹ್ಹ್ ಸರಬರಾಜು ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಯೋಜನೆಗಳನ್ನು ಉದ್ಘಾಟಿಸುವಾಗ ಪ್ರಧಾನಮಂತ್ರಿಯವರು, “ನಾವು ವಿಳಂಬ ಸಂಸ್ಕೃತಿಯನ್ನು ಬಿಟ್ಟು ಮುಂದೆ ಸಾಗಿದ್ದೇವೆ’’ ಎಂದರು. ತಾವು ಶಂಕುಸ್ಥಾಪನೆ ನೆರವೇರಿಸಿದ ಎಲ್ಲ ಯೋಜನೆಗಳನ್ನೂ ತಾವೇ ಉದ್ಘಾಟಿಸುವಂತೆ ಸರ್ಕಾರ ಭರವಸೆ ನೀಡುತ್ತದೆ ಎಂದರು.

|

ಲಡಾಖ್ ನಲ್ಲಿ ಐದು ಹೊಸ ಪ್ರವಾಸಿ ಮತ್ತು ಚಾರಣ ಮಾರ್ಗಗಳನ್ನು ತೆರೆಯಲಾಗಿದ್ದು, ಪ್ರಧಾನಮಂತ್ರಿಯವರು, ನಗರಗಳು ಉತ್ತಮವಾಗಿ ಸಂಪರ್ಕವಾಗುವುದರೆ, ಬದುಕು ಆರ್ಥಿಕವಾಗಿ ಸುಗಮವಾಗುತ್ತದೆ ಎಂದರು. ಬಿಲಾಸ್ ಪುರ – ಮನಾಲಿ – ಲೆಹ್ಹ್ ರೈಲು ಮಾರ್ಗ ಪೂರ್ಣಗೊಂಡ ಬಳಿಕ, ದೆಹಲಿ ಮತ್ತು ಲೆಹ್ಹ್ ನಡುವಿನ ದೂರ ಕಡಿಮೆಯಾಗಲಿದೆ ಎಂದರು.

|

ಫಲಕ ಅನಾವರಣ ಮಾಡುವ ಮೂಲಕ ಪ್ರಧಾನಮಂತ್ರಿಯವರು, ಲೆಹ್ಹ್ ನಲ್ಲಿ ಕುಶೋಕ್ ಬಕುಲಾ ರಿಂಪೊಚೆ (ಕೆಬಿಆರ್) ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಹೊಸ ಟರ್ಮಿನಲ್ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರ ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ.

|

ಈ ಯೋಜನೆಗಳೊಂದಿಗೆ ಈ ಪ್ರದೇಶದಲ್ಲಿ ಉತ್ತಮವಾದ ವಿದ್ಯುತ್ ಲಭ್ಯತೆ, ಸುಧಾರಿತ ಸಂಪರ್ಕಕ್ಕೆ ಯೋಜನೆಗಳು ಕಾರಣವಾಗಲಿವೆ ಮತ್ತು ಈ ಪ್ರದೇಶದಲ್ಲಿ ಪ್ರವಾಸಿಗಳ ಪುನರಾಗಮನವಾಗಲಿದೆ ಎಂದು ಅವರು ಹೇಳಿದರು. ಇದು ಹಲವು ಗ್ರಾಮಗಳಿಗೆ ಉತ್ತಮ ಜೀವನೋಪಾಯದ ಅವಕಾಶಗಳನ್ನು ತೆರೆಯಲಿದೆ ಎಂದರು.

ಇದರ ಜೊತೆಗೆ, ಸಂರಕ್ಷಿತ ಪ್ರದೇಶ ಪರವಾನಗಿ ಸಿಂಧುತ್ವವನ್ನು 15 ದಿನಗಳ ಕಾಲ ಹೆಚ್ಚಿಸಲಾಗಿದೆ. ಈಗ ಪ್ರವಾಸಿಗರು ಲೆಹ್ಹ್ ನಲ್ಲಿ ದೀರ್ಘ ಕಾಲ ತಮ್ಮ ಪ್ರಯಾಣವನ್ನು ಸಂತಸದಿಂದ ಅನುಭವಿಸಬಹುದು.

ಎಲ್.ಎ.ಎಚ್.ಡಿ.ಸಿ. ಕಾಯಿದೆಗೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ ಮತ್ತು ಮಂಡಳಿಗಳಿಗೆ ವೆಚ್ಚಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಕ್ಕು ನೀಡಲಾಗಿದೆ. ಈಗ ಸ್ವಾಯತ್ತ ಮಂಡಳಿಗಳು ವಲಯದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ಹೇಳಿದರು.

ಮಧ್ಯಂತರ ಬಜೆಟ್ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ, ಶೇಕಡ 30ರಷ್ಟು ಹೆಚ್ಚು ಹಣ ಹಂಚಿಕೆ ಮಾಡಲಾಗಿದೆ ಮತ್ತು ಸುಮಾರು ಶೇ.35ರಷ್ಟು ಹೆಚ್ಚು ಹಣವನ್ನು ದಲಿತರ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

Click here to read full text speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
New trade data shows significant widening of India's exports basket

Media Coverage

New trade data shows significant widening of India's exports basket
NM on the go

Nm on the go

Always be the first to hear from the PM. Get the App Now!
...
Prime Minister congratulates Neeraj Chopra for achieving his personal best throw
May 17, 2025

The Prime Minister, Shri Narendra Modi, has congratulated Neeraj Chopra for breaching the 90 m mark at Doha Diamond League 2025 and achieving his personal best throw. "This is the outcome of his relentless dedication, discipline and passion", Shri Modi added.

The Prime Minister posted on X;

"A spectacular feat! Congratulations to Neeraj Chopra for breaching the 90 m mark at Doha Diamond League 2025 and achieving his personal best throw. This is the outcome of his relentless dedication, discipline and passion. India is elated and proud."

@Neeraj_chopra1