ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು `ಇ-ಶ್ರಮ್’ ಪೋರ್ಟಲ್ನಲ್ಲಿ ನೋಂದಣಿಗಳ ಸಂಖ್ಯೆ 10 ಕೋಟಿ ತಲುಪಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಇದನ್ನು ಸಂಕಲ್ಪದಿಂದ ಸಾಧನೆಯವರೆಗಿನ ಪ್ರಯಾಣ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು,
“ಇದು ಸಂಕಲ್ಪದಿಂದ ಸಿದ್ಧಿಯವರೆಗಿನ ಪಯಣವಾಗಿದೆ. ದೇಶದ ಕೋಟ್ಯಂತರ ಶ್ರಮಿಕರು ಮತ್ತು ಕಾರ್ಮಿಕರ ಬಲವೇ ಇಂದು ನವ ಭಾರತದ ಆಧಾರಸ್ತಂಭವಾಗಿದೆ. ಅವರ ಸಾಮಾಜಿಕ ಭದ್ರತೆಯಲ್ಲಿ ದೇಶದ ಬಲವಾದ ಭವಿಷ್ಯ ಅಡಗಿದೆ,” ಎಂದಿದ್ದಾರೆ.
यही तो संकल्प से सिद्धि की यात्रा है। देश के करोड़ों श्रमिकों और कामगारों का सामर्थ्य आज नए भारत का आधारस्तंभ बन रहा है। उनकी सामाजिक सुरक्षा में ही देश का मजबूत भविष्य छिपा है। https://t.co/2NdVPsiiGO
— Narendra Modi (@narendramodi) December 1, 2021