ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ದ ಜನತೆಗೆ ಇಂದು ರಾಜ್ಯ ರೂಪೀಕಕರಣ ದಿನದ ಶುಭಾಶಯ ಕೋರಿದ್ದಾರೆ.
“ ಒಡಿಶಾದ ಶ್ರೇಷ್ಠ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ನಮ್ಮ ದೇಶ ಹೆಮ್ಮೆ ಪಡುತ್ತದೆ. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯ ಗರಿಮೆ ಮೂಲಕ ದೇಶದ ಅಭಿವೃದ್ಧಿಯ ಹಾದಿಯಲ್ಲಿ ಅವಿಸ್ಮರಣೀಯ ಮೈಲುಗಲ್ಲುಗಳನ್ನು ರಾಜ್ಯದ ಜನತೆ ಹಾಕಿದ್ದಾರೆ.
ಶ್ರೀ ಜಗನ್ನಾಥ ದೇವರು ಯಾವತ್ತೂ ನಮ್ಮನ್ನು ಹರಸುತ್ತಿರಲಿ ಮತ್ತು ಮುಂಬರುವ ದಿನಗಳಲ್ಲಿ ರಾಜ್ಯದ ಜನತೆಗೆ ಪ್ರಗತಿಯ ಅತ್ಯುನ್ನತ ಹಂತ ದಯಪಾಲಿಸಲಿ ಎಂದು ಆಶಿಸುತ್ತೇನೆ” ಎಂದು ಪ್ರಧಾನಿ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
Best wishes to my sisters and brothers of Odisha on Utkala Dibasa. pic.twitter.com/mspuBqMYQW
— Narendra Modi (@narendramodi) April 1, 2018