ದೇಶೀಯ ಕ್ರಯೋಜೆನಿಕ್ ವೇದಿಕೆಯಿಂದ ಜಿ.ಎಸ್.ಎಲ್.ವಿ.- ಎಫ್ 08 ಯಶಸ್ವೀ ಉಡ್ಡಯನ ಮಾಡಿದುದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ.
“ಇಸ್ರೋ ತಂಡಕ್ಕೆ ಮತ್ತು ಇತರ ಭಾಗೀದಾರರಿಗೆ ಜಿ.ಎಸ್.ಎಲ್.ವಿ.- ಎಫ್ 08 ಯಶಸ್ವೀ ಉಡ್ಡಯನವನ್ನು ದೇಶೀಯ ಕ್ರಯೋಜೆನಿಕ್ ವೇದಿಕೆಯಿಂದ ಮಾಡಿದುದಕ್ಕಾಗಿ ಅಭಿನಂದನೆಗಳು.
ಸಂಪರ್ಕ ಉಪಗ್ರಹವಾದ ಜಿ.ಎಸ್.ಎ.ಟಿ-6 ಎ (ಜಿಸ್ಯಾಟ್ -6 ಎ ) ಮೊಬೈಲ್ ಸೌಲಭ್ಯಗಳಲ್ಲಿ ಹೊಸ ಸಾಧ್ಯತೆಗಳನ್ನು ಅನಾವರಣ ಮಾಡಲಿದೆ. ದೇಶವನ್ನು ಹೊಸ ಎತ್ತರಕ್ಕೆ ಮತ್ತು ಭವ್ಯ ಭವಿತವ್ಯಕ್ಕೆ ಕೊಂಡೊಯ್ಯುತ್ತಿರುವುದಕ್ಕಾಗಿ ಇಸ್ರೋ ಬಗ್ಗೆ ಹೆಮ್ಮೆ ಪಡುತ್ತೇನೆ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
Congratulations to @isro and other stakeholders on the successful launch of GSLV-F08 with indigenous cryogenic stage.
— Narendra Modi (@narendramodi) March 29, 2018
GSAT-6A, a communication satellite, will provide new possibilities for mobile applications. Proud of @isro for taking the nation towards new heights and a brighter future.
— Narendra Modi (@narendramodi) March 29, 2018