ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು, ರಫ್ತುದಾರರನ್ನು ಶ್ಲಾಘಿಸಿದ್ದಾರೆ. ಏಕೆಂದರೆ ಭಾರತವು ನಿಗದಿತ ಸಮಯಕ್ಕಿಂತ 9 ದಿನಗಳ ಮುಂಚಿತವಾಗಿ 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ;
" ಭಾರತವು 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತುಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು ಮತ್ತು ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ. ಈ ಯಶಸ್ಸಿಗಾಗಿ ನಾನು ನಮ್ಮ ರೈತರು, ನೇಕಾರರು, MSMEಗಳು, ತಯಾರಕರು, ರಫ್ತುದಾರರನ್ನು ಅಭಿನಂದಿಸುತ್ತೇನೆ.
ಇದು ನಮ್ಮ ಆತ್ಮನಿರ್ಭರ ಭಾರತ ಪಯಣದಲ್ಲಿ ಪ್ರಮುಖ ಮೈಲಿಗಲ್ಲು. #ಲೋಕಲ್ ಗೋಸ್ ಗ್ಲೋಬಲ್" ಎಂದಿದ್ದಾರೆ.
India set an ambitious target of $400 Billion of goods exports & achieves this target for the first time ever. I congratulate our farmers, weavers, MSMEs, manufacturers, exporters for this success.
— Narendra Modi (@narendramodi) March 23, 2022
This is a key milestone in our Aatmanirbhar Bharat journey. #LocalGoesGlobal pic.twitter.com/zZIQgJuNeQ