ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಜೀವ ಹಾನಿಯಾಗಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದ ಈ ಅಪಘಾತದಲ್ಲಿ ಸಂತ್ರಸ್ತರಾದವರಿಗೆ ಶ್ರೀ ಮೋದಿ ಅವರು ಪ್ರಧಾನ ಮಂತ್ರಿಯವರ ಪರಿಹಾರ ನಿಧಿ (ಪಿ.ಎಂ.ಎನ್.ಆರ್.ಎಫ್.)ಯಿಂದ ತಾತ್ಕಾಲಿಕ ಪರಿಹಾರ ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಅವರ ಕಚೇರಿಯು ಟ್ವೀಟೊಂದರಲ್ಲಿ;
“ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವ ಹಾನಿಯಾಗಿರುವುದು ಸಂಕಟದ ಸಂಗತಿಯಾಗಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು ಮತ್ತು ಗಾಯಾಳುಗಳು ಗುಣಮುಖರಾಗಲಿ ಎಂದು ಹಾರೈಕೆ. ಮೃತಪಟ್ಟವರ ಕುಟುಂಬಕ್ಕೆ ಪಿ.ಎಂ.ಎನ್.ಆರ್.ಎಫ್. ನಿಂದ ತಲಾ 2 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಮತ್ತು ಗಾಯಾಳುಗಳಿಗೆ ತಲಾ 50,000 ರೂಪಾಯಿಗಳನ್ನು ನೀಡಲಾಗುತ್ತದೆ: ಪ್ರಧಾನ ಮಂತ್ರಿ ಮೋದಿ” ಎಂದು ಹೇಳಿದೆ.
Distressed by the loss of lives due to an accident in Kamareddy district, Telangana. Condolences to the bereaved families and prayers with the injured. Rs. 2 lakh each from PMNRF would be given to the next of kin of the deceased. The injured would be given Rs. 50,000: PM Modi
— PMO India (@PMOIndia) May 9, 2022