ಭಾರತೀಯ ವಾಯುಪಡೆಯಲ್ಲಿ ಮಾರ್ಷಲ್ ಆಗಿದ್ದ ಅರ್ಜುನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ಐ.ಎ.ಎಫ್.ನ ಸಾಮರ್ಥ್ಯವರ್ಧನೆಗೆ ಐ.ಎ.ಎಫ್.ನ ಮಾರ್ಷಲ್ ಅರ್ಜುನ್ ಸಿಂಗ್ ಅವರ ನಿಶ್ಚಿತ ಗಮನ ಹರಿಸಿದ್ದರು, ಇದು ನಮ್ಮ ರಕ್ಷಣಾ ಸಾಮರ್ಥ್ಯಕ್ಕೆ ಬಲ ನೀಡಿತು ಎಂದು ತಿಳಿಸಿದ್ದಾರೆ. ಅರ್ಜುನ್ ಸಿಂಗ್ ಅವರನ್ನು ವಿಶೇಷ ವಾಯು ಯೋಧ ಹಾಗೂ ಉತ್ತಮ ಮಾನವೀಯ ವ್ಯಕ್ತಿ ಎಂದು ಬಣ್ಣಿಸಿರುವ ಪ್ರಧಾನಿ, ಅವರು ಕುಟುಂಬದ ಸದಸ್ಯರಿಗೆ ಮತ್ತು ಅವರ ಅಗಲಿಕೆಯಿಂದ ದುಃಖತಪ್ತರಾಗಿರುವವರಿಗೆ ತಮ್ಮ ಸಂವೇದನೆ ತಿಳಿಸಿದ್ದಾರೆ.
‘ಭಾರತೀಯ ವಾಯು ಪಡೆಯ ಮಾರ್ಷಲ್ ಅವರ ನಿಧನಕ್ಕೆ ಭಾರತ ಶೋಕಿಸುತ್ತಿದೆ. ದೇಶಕ್ಕೆ ಅವರು ನೀಡಿರುವ ಅದ್ಭುತ ಸೇವೆಯನ್ನು ನಾವು ಸ್ಮರಿಸುತ್ತೇವೆ.
ಐ.ಎ.ಎಫ್.ನ ಮಾರ್ಷಲ್ ಅರ್ಜುನ್ ಸಿಂಗ್ ಅವರ ಐ.ಎ.ಎಫ್.ನ ಸಾಮರ್ಥ್ಯವರ್ಧನೆಯ ನಿಶ್ಚಿತ ಗಮನ , ನಮ್ಮ ರಕ್ಷಣಾ ಸಾಮರ್ಥ್ಯಕ್ಕೆ ಶ್ರೇಷ್ಠ ಬಲ ನೀಡಿದೆ.
ಐ.ಎ.ಎಫ್.ನ ಮಾರ್ಷಲ್ ಅರ್ಜುನ್ ಸಿಂಗ್ ಅವರು ಐ.ಎ.ಎಫ್. ಗಣನೀಯ ಕಾರ್ಯಾಚರಣೆ ನಡೆಸಿದ 1965ರ ಸಂದರ್ಭದಲ್ಲಿ ನೀಡಿದ ಅದ್ಭುತ ನಾಯಕತ್ವವನ್ನು ಭಾರತ ಎಂದಿಗೂ ಮರೆಯುವುದಿಲ್ಲ.
ಕೆಲವೇ ಸಮಯದ ಹಿಂದೆ ನಾನು ಅವರನ್ನು ಭೇಟಿ ಮಾಡಿದ್ದೆ, ನಾನು ಬೇಡ ಎಂದರೂ, ಅವರು ತಮ್ಮ ಅನಾರೋಗ್ಯದ ನಡುವೆಯೂ ಎದ್ದು ವಂದಿಸಲು ಪ್ರಯತ್ನಿಸಿದರು. ಇದು ಅವರ ಯೋಧತ್ವದ ಶಿಸ್ತು.
ಗೌರವಾನ್ವಿತ ವಾಯು ಯೋಧ ಮತ್ತು ಶ್ರೇಷ್ಠ ಮಾನವೀಯತೆಯ ವ್ಯಕ್ತಿ, ಮಾರ್ಷಲ್ ಅರ್ಜುನ್ ಸಿಂಗ್ ಅವರ ಕುಟುಂಬದವರೊಂದಿಗೆ ಹಾಗೂ ಅವರ ಅಗಲಿಕೆಯಿಂದ ದುಃಖತಪ್ತರಾಗಿರುವವರೊಂದಿಗೆ ನನ್ನ ಸಂವೇದನೆ ಇದೆ.’ ಎಂದು ಪ್ರಧಾನಿ ತಿಳಿಸಿದ್ದಾರೆ.