ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಸಹಾಯಕ ಕಾರ್ಯದರ್ಶಿಗಳ (2017ನೇ ಐ.ಎ.ಎಸ್. ತಂಡ) ಸಮಾರೋಪ ಅಧಿವೇಶನದಲ್ಲಿ ಭಾಗಿಯಾಗಿದ್ದರು.
ಅಧಿಕಾರಿಗಳು ಪ್ರಧಾನಮಂತ್ರಿಯವರ ಮುಂದೆ ಹಲವು ಪ್ರಾತ್ಯಕ್ಷಿಕೆಗಳನ್ನು ಮಂಡಿಸಿದರು. ಆಶಯ ಜಿಲ್ಲೆಗಳ ಪರಿವರ್ತನೆಯಿಂದ ಹಿಡಿದು ಪಾರದರ್ಶಕತೆ ಮತ್ತು ತ್ವರಿತ ವಿತರಣೆಗಾಗಿ ವಿವಿಧ ಆಡಳಿತ ಸುಧಾರಣೆಗಳವರೆಗಿನ ವಿಷಯಗಳ ವಿವಿಧ ಶ್ರೇಣಿಯ ಪ್ರಾತ್ಯಕ್ಷಿಕೆಗಳು ಇವಾಗಿದ್ದವು.
ಹೊಸ ಕಲ್ಪನೆಗಳು, ಹೊಸ ಪರಿಕಲ್ಪನೆಗಳು ಮತ್ತು ದೃಷ್ಟಿಕೋನಕ್ಕೆ ಸ್ಪಂದಿಸುವಂತೆ ಪ್ರಧಾನಮಂತ್ರಿಯವರು ಅಧಿಕಾರಿಗಳನ್ನು ಉತ್ತೇಜಿಸಿದರು. ಪ್ರತಿಯೊಬ್ಬರೂ ಬಹು ಮೂಲಗಳಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಅವುಗಳನ್ನು ವಿಶ್ಲೇಷಿಸಿ, ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ನಿರಂತರ ಕಲಿಕೆಗೆ ಶ್ರಮಿಸಲು ಮತ್ತು ಕುತೂಹಲವನ್ನು ಬೆಳೆಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು..
ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಸೇವಾ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವುದು ನಾಗರಿಕ ಸೇವಾ ಅಧಿಕಾರಿಗಳಿಗೆ ಅತ್ಯುನ್ನತವಾದುದು ಏಕೆಂದರೆ ಅದು ತಟಸ್ಥತೆಯಿಂದ ಹೊರತರುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಪ್ರತಿಪಾದಿಸಿದ ಅವರು, ಸರ್ಕಾರದ ಯೋಜನೆಗಳ ಸಮರ್ಥ ಅನುಷ್ಠಾನಕ್ಕಾಗಿ ಸಂಘಟಿತ ಪ್ರಯತ್ನಗಳಿಗೆ ಉತ್ತೇಜನ ನೀಡುವಂತೆ ಯುವ ಅಧಿಕಾರಿಗಳಿಗೆ ಆಗ್ರಹಿಸಿದರು. ಸಹಾಯಕ ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ತಾವು ಪಡೆದುಕೊಂಡು ಉತ್ತಮ ಅನುಭವಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರಾತ್ಯಕ್ಷಿಕೆಗಳನ್ನು ನೀಡಿದ ಯುವ ಅಧಿಕಾರಿಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅವರು ಮುಂದೆ ನಿರ್ವಹಿಸಲಿರುವ ಪಾತ್ರಕ್ಕೆ ಶುಭ ಕೋರಿದರು. “ನಿಮ್ಮ ಯಶಸ್ಸು ರಾಷ್ಟ್ರಕ್ಕೆ ಮುಖ್ಯವಾದುದಾಗಿದೆ. ನಿಮ್ಮ ಯಶಸ್ಸು ಅನೇಕ ಜನರ ಜೀವನವನ್ನು ಪರಿವರ್ತಿಸುತ್ತದೆ ”ಎಂದು ಪ್ರಧಾನಮಂತ್ರಿ ಹೇಳಿದರು