ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನೆರವಾಗಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೋವಿಡ್ ಸಾಂಕ್ರಾಮಿಕದಿಂದ ಸಂತ್ರಸ್ತರಾಗಿರುವ  ಮಕ್ಕಳಿಗೆ ಪ್ರಧಾನಿಯವರು ಹಲವಾರು ಸೌಲಭ್ಯಗಳನ್ನು ಘೋಷಿಸಿದರು.

ಕ್ರಮಗಳನ್ನು ಘೋಷಿಸಿ ಮಾತನಾಡಿದ ಪ್ರಧಾನಿಯವರು, ಮಕ್ಕಳು ದೇಶದ ಭವಿಷ್ಯ, ಮಕ್ಕಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ದೇಶವು ಎಲ್ಲವನ್ನು ಮಾಡುತ್ತದೆ, ಇದರಿಂದ ಅವರು ಶಕ್ತಿಶಾಲಿ ನಾಗರಿಕಾಗಿ ಬೆಳೆಯುತ್ತಾರೆ ಮತ್ತು ಉಜ್ವಲ ಭವಿಷ್ಯವನ್ನು ಪಡೆಯುತ್ತಾರೆ ಎಂದರು. ಇಂತಹ ಸಮಯದಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಅವರಲ್ಲಿ ಉಜ್ವಲ ಭವಿಷ್ಯದ ಭರವಸೆ ಮೂಡಿಸುವುದು ಸಮಾಜವಾಗಿ ನಮ್ಮ ಕರ್ತವ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್ 19 ರ ಕಾರಣದಿಂದಾಗಿ ಇಬ್ಬರೂ ಪೋಷಕರು ಅಥವಾ ಪಾಲಕರು / ದತ್ತು ಪಡೆದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ‘ಮಕ್ಕಳಿಗಾಗಿ ಪಿಎಂ-ಕೇರ್ಸ್’ ಯೋಜನೆಯಡಿ ಬೆಂಬಲಿಸಲಾಗುತ್ತದೆ. ಕೋವಿಡ್-19 ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸುವ ಪಿಎಂ-ಕೇರ್ಸ್ ನಿಧಿಗೆ ಉದಾರವಾಗಿ ಕೊಡುಗೆಗಳನ್ನು ನೀಡಿರುವುದರಿಂದ ಈ ಕ್ರಮಗಳನ್ನು ಘೋಷಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ:

ಪ್ರತಿ ಮಗುವಿಗೆ 18 ವರ್ಷ ದಾಟಿದಾಗ 10 ಲಕ್ಷ ರೂ.ಗಳ ಮೂಲಧನ ಸೃಷ್ಟಿಸಲು ಪಿಎಂ ಕೇರ್ಸ್ ವಿಶೇಷವಾಗಿ ವಿನ್ಯಾಸಗೊಳಿಸಿದ ಯೋಜನೆಯ ಮೂಲಕ ಕೊಡುಗೆ ನೀಡಲಿದೆ. ಈ ಮೂಲಧನವನ್ನು:

  • ಅವನ ಅಥವಾ ಅವಳಿಗೆ 18 ವರ್ಷದಿಂದ ಮಾಸಿಕ ಆರ್ಥಿಕ ಸಹಾಯ / ಶಿಷ್ಯವೇತನ ನೀಡಲು ಮತ್ತು ಮುಂದಿನ ಐದು ವರ್ಷಗಳವರೆಗೆ ಉನ್ನತ ಶಿಕ್ಷಣದ ಅವಧಿಯಲ್ಲಿ ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಬಳಸಲಾಗುತ್ತದೆ
  • ಅವರು 23 ವರ್ಷ ವಯಸ್ಸನ್ನು ತಲುಪಿದಾಗ ಕಾರ್ಪಸ್ ಮೊತ್ತವನ್ನು ವೈಯಕ್ತಿಕ ಮತ್ತು ವೃತ್ತಿಪರ ಬಳಕೆಗಾಗಿ ಒಂದು ದೊಡ್ಡ ಮೊತ್ತವಾಗಿ ಪಡೆಯುತ್ತಾರೆ.

ಶಾಲಾ ಶಿಕ್ಷಣ: 10 ವರ್ಷದೊಳಗಿನ ಮಕ್ಕಳಿಗೆ

  • ಮಗುವಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯದಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ದಿನದ ವಿದ್ಯಾರ್ಥಿಯಾಗಿ ಪ್ರವೇಶ ನೀಡಲಾಗುವುದು.
  • ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದರೆ, ಆರ್‌ಟಿಇ ಮಾನದಂಡಗಳ ಪ್ರಕಾರ ಶುಲ್ಕವನ್ನು ಪಿಎಂ-ಕೇರ್ಸ್ ನಿಂದ ಭರಿಲಾಗುತ್ತದೆ.
  • ಸಮವಸ್ತ್ರ, ಪಠ್ಯ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳ ಖರ್ಚಿಗೆ ಪಿಎಂ-ಕೇರ್ಸ್ ಹಣ ಪಾವತಿಸುತ್ತದೆ.

ಶಾಲಾ ಶಿಕ್ಷಣ: 11-18 ವರ್ಷದ ಮಕ್ಕಳಿಗೆ

  • ಯಾವುದೇ ಕೇಂದ್ರ ಸರ್ಕಾರಿ ವಸತಿ ಶಾಲೆಯಲ್ಲಿ ಸೈನಿಕ್ ಶಾಲೆ, ನವೋದಯ ವಿದ್ಯಾಲಯ ಇತ್ಯಾದಿಗಳಲ್ಲಿ ಮಗುವಿಗೆ ಪ್ರವೇಶ ನೀಡಲಾಗುವುದು.
  • ಮಗುವನ್ನು ಪಾಲಕರು / ಅಜ್ಜ-ಅಜ್ಜಿ / ವಿಸ್ತೃತ ಕುಟುಂಬದ ಆರೈಕೆಯಲ್ಲಿ ಮುಂದುವರಿಸಬೇಕಾದರೆ, ಅವನಿಗೆ ಅಥವಾ ಅವಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯದಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ದಿನದ ವಿದ್ಯಾರ್ಥಿಯಾಗಿ ಪ್ರವೇಶ ನೀಡಲಾಗುವುದು.
  • ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದರೆ, ಆರ್‌ಟಿಇ ಮಾನದಂಡಗಳ ಪ್ರಕಾರ ಶುಲ್ಕವನ್ನು ಪಿಎಂ-ಕೇರ್ಸ್ ನಿಂದ ಭರಿಲಾಗುತ್ತದೆ.
  • ಸಮವಸ್ತ್ರ, ಪಠ್ಯ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳ ಖರ್ಚಿಗೆ ಪಿಎಂ ಕೇರ್ಸ್ ಹಣ ಪಾವತಿಸುತ್ತದೆ.

ಉನ್ನತ ಶಿಕ್ಷಣಕ್ಕೆ ನೆರವು:

  • ಅಸ್ತಿತ್ವದಲ್ಲಿರುವ ಶಿಕ್ಷಣ ಸಾಲದ ಮಾನದಂಡಗಳ ಪ್ರಕಾರ ಭಾರತದಲ್ಲಿ ವೃತ್ತಿಪರ ಶಿಕ್ಷಣ / ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲವನ್ನು ಪಡೆಯಲು ಮಗುವಿಗೆ ಸಹಾಯ ಮಾಡಲಾಗುವುದು. ಈ ಸಾಲದ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್ ಪಾವತಿಸುತ್ತದೆ.
  • ಪರ್ಯಾಯವಾಗಿ, ಸರ್ಕಾರದ ಮಾನದಂಡಗಳ ಪ್ರಕಾರ ಪದವಿಪೂರ್ವ / ವೃತ್ತಿಪರ ಕೋರ್ಸ್‌ಗಳಿಗೆ ಬೋಧನಾ ಶುಲ್ಕ/ ಕೋರ್ಸ್ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿವೇತನವನ್ನು ಅಂತಹ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಯೋಜನೆಗಳ ಅಡಿಯಲ್ಲಿ ನೀಡಲಾಗುವುದು. ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹತೆ ಪಡೆಯದ ಮಕ್ಕಳಿಗೆ, ಪಿಎಂ ಕೇರ್ಸ್ ಸಮಾನ ವಿದ್ಯಾರ್ಥಿವೇತನವನ್ನು ನೀಡುತ್ತದೆ.

ಆರೋಗ್ಯ ವಿಮೆ

  • ಆಯುಷ್ಮಾನ್ ಭಾರತ್ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ 5 ಲಕ್ಷ ರೂ.ಗಳ ವಿಮೆಗೆ ಎಲ್ಲಾ ಮಕ್ಕಳನ್ನು ಫಲಾನುಭವಿಗಳಾಗಿ ದಾಖಲಿಸಲಾಗುವುದು.
  • ಈ ಮಕ್ಕಳಿಗೆ 18 ವರ್ಷ ವಯಸ್ಸಿನವರೆಗೆ ಪ್ರೀಮಿಯಂ ಮೊತ್ತವನ್ನು ಪಿಎಂ ಕೇರ್ಸ್ ಪಾವತಿಸುತ್ತದೆ.
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
‘Make in India’ is working, says DP World Chairman

Media Coverage

‘Make in India’ is working, says DP World Chairman
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”