ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಜ್ಞಾನದ ಮೌಲ್ಯ–ಸೃಷ್ಟಿ ಚಕ್ರದಿಂದ ಸಮೂಹ ಸೃಷ್ಟಿ ಉತ್ತೇಜಿಸುವಂತೆ ವೈಜ್ಞಾನಿಕ ಸಮುದಾಯಕ್ಕೆ ಪ್ರೋತ್ಸಾಹಿಸಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ, ರಾಷ್ಟ್ರೀಯ ಪರಿಸರ ಮಾನದಂಡಗಳ ಪ್ರಯೋಗಾಲಕ್ಕೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರೀಯ ಆಣ್ವಯಿಕ ಕಾಲ ಮಾಪಕ ಮತ್ತು ಭಾರತೀಯ ನಿರ್ದೇಶಕ ದ್ರವ್ಯ ಪ್ರಣಾಳಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ ರಾಷ್ಟ್ರೀಯ ಮಾಪನ ಸಮಾವೇಶ 2021 ಉದ್ದೇಶಿಸಿ  ಅವರು ಮಾತನಾಡಿದರು.

ಯಾವುದೇ ದೇಶವು ವಿಜ್ಞಾನವನ್ನು ಉತ್ತೇಜಿಸುವ ತನ್ನ ನೇರ ಪ್ರಯತ್ನದಲ್ಲಿ ಐತಿಹಾಸಿಕವಾಗಿ ಪ್ರಗತಿ ಸಾಧಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ಇದನ್ನು ಅವರು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮದ  ‘ಮೌಲ್ಯ ಸೃಷ್ಟಿ ಚಕ್ರ’ ಎಂದು  ಬಣ್ಣಿಸಿದರು. ವೈಜ್ಞಾನಿಕ ಆವಿಷ್ಕಾರವು ತಂತ್ರಜ್ಞಾನವನ್ನು ಸೃಷ್ಟಿಸುತ್ತವೆ,  ತಂತ್ರಜ್ಞಾನವು ಉದ್ಯಮದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದೂ ಪ್ರಧಾನಮಂತ್ರಿ ವ್ಯಾಖ್ಯಾನಿಸಿದರು. ಪ್ರತಿಯಾಗಿ ಉದ್ಯಮಗಳು ಹೊಸ ಸಂಶೋಧನೆಗಳಿಗೆ ವಿಜ್ಞಾನದಲ್ಲಿ ಹೂಡಿಕೆ ಮಾಡುತ್ತವೆ. ಈ ಚಕ್ರ ನಮ್ಮನ್ನು ಹೊಸ ಸಾಧ್ಯತೆಗಳತ್ತ ತೆಗೆದುಕೊಂಡು ಹೋಗುತ್ತದೆ. ಸಿಎಸ್.ಐ.ಆರ್. –ಎನ್.ಪಿ.ಎಲ್. ಈ ಮೌಲ್ಯ ಚಕ್ರವನ್ನು ಮುಂದುವರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು 

ಆತ್ಮನಿರ್ಭರ ಭಾರತದ ನಿಟ್ಟಿನಲ್ಲಿ ಸಾಗುತ್ತಿರುವಾಗ ವಿಜ್ಞಾನದ ಈ ಮೌಲ್ಯ ಸೃಷ್ಟಿ ಚಕ್ರವನ್ನು ಸಮೂಹ ಸೃಷ್ಟಿಯಾಗಿ ಮಾಡುವುದು ಇಂದಿನ ಜಗತ್ತಿನಲ್ಲಿ ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ತಾವು ಇಂದು ಲೋಕಾರ್ಪಣೆ ಮಾಡಿದ ಸಿ.ಎಸ್.ಐ.ಆರ್.-ಎನ್.ಪಿ.ಎಲ್. ರಾಷ್ಟ್ರೀಯ ಆಣ್ವಯಿಕ ಕಾಲ ಮಾಪಕದ ಬಗ್ಗೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಭಾರತವು ನ್ಯಾನೋ ಸೆಕೆಂಡ್ ಶ್ರೇಣಿಯಲ್ಲಿ ಕಾಲವನ್ನು ಅಳೆಯುವಲ್ಲಿ ಸ್ವಾವಲಂಬಿಯಾಗಿದೆ ಎಂದೂ ಹೇಳಿದರು. 2.8 ನ್ಯಾನೋ ಸೆಕೆಂಡ್ ನಿಖರತೆಯ ಮಟ್ಟ ಸಾಧಿಸಿರುವುದು ಒಂದು ಬೃಹತ್ ಸಾಮರ್ಥ್ಯವಾಗಿದೆ ಎಂದರು. ಈಗ ಭಾರತೀಯ ಕಾಲಮಾನದ ನಿಖರತೆ ಅಂತಾರಾಷ್ಟ್ರೀಯ ಕಾಲಮಾನಕ್ಕೆ ಕೇವಲ 3 ನ್ಯಾನೋ ಸೆಕೆಂಡ್ ಗಿಂತ ಕಡಿಮೆ ಇದೆ ಎಂದರು.  ಈ ಸಾಧನೆಯಿಂದ ಇಸ್ರೋದಂಥ ಅತ್ಯಾಧುನಿಕ ಮತ್ತು ಅತ್ಯುತ್ಕೃಷ್ಟ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ನೆರವಾಗಲಿದೆ ಎಂದರು. ಆಧುನಿಕ ತಂತ್ರಜ್ಞಾನ ಸಂಬಂಧಿತ ಬ್ಯಾಂಕಿಂಗ್, ರೈಲ್ವೆ, ರಕ್ಷಣೆ, ಆರೋಗ್ಯ, ದೂರಸಂಪರ್ಕ, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ ಮತ್ತು ಹಲವು ಇದೇ ಸ್ವರೂಪದ ವಲಯಗಳಿಗೆ ದೊಡ್ಡ ಸಹಾಯವಾಗಲಿದೆ ಎಂದರು.

ಉದ್ಯಮ 4.0 ನಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ಈ ಕಾಲ ಮಾನದ ಪಾತ್ರ ದೊಡ್ಡದೆಂದು ಪ್ರಧಾನಮಂತ್ರಿ ತಿಳಿಸಿದರು. ಪರಿಸರ ಕ್ಷೇತ್ರದಲ್ಲಿ ಭಾರತ ಪ್ರಮುಖ ಸ್ಥಾನದತ್ತ ಸಾಗುತ್ತಿದೆ.  ಆದಾಗ್ಯೂ, ತಂತ್ರಜ್ಞಾನ ಮತ್ತು ವಾಯು ಗುಣಮಟ್ಟ ಹಾಗೂ ಹೊರಸೂಸುವಿಕೆಯನ್ನು ಅಳೆಯುವ ಸಾಧನಗಳಿಗಾಗಿ, ಭಾರತವು ಇತರರ ಮೇಲೆ ಅವಲಂಬಿತವಾಗಿತ್ತು. ಈ ಸಾಧನೆಯು ಈ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಕಾರಣವಾಗುತ್ತದೆ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಸಾಧನಗಳನ್ನು ರೂಪಿಸಲು ನೆರವಾಗುತ್ತದೆ. ಇದು ವಾಯು ಗುಣಮಟ್ಟ ಮತ್ತು ಹೊರಸೂಸುವಿಕೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಿಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸುತ್ತದೆ. ನಮ್ಮ ವಿಜ್ಞಾನಿಗಳ ನಿರಂತರ ಪ್ರಯತ್ನದಿಂದ ನಾವು ಇದನ್ನು ಸಾಧಿಸಿದ್ದೇವೆ ಎಂದರು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s Economic Momentum Holds Amid Global Headwinds: CareEdge

Media Coverage

India’s Economic Momentum Holds Amid Global Headwinds: CareEdge
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಮೇ 2025
May 18, 2025

Aatmanirbhar Bharat – Citizens Appreciate PM Modi’s Effort Towards Viksit Bharat