ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿಯು 2018ರ ಸಿಯೋಲ್ ಶಾಂತಿ ಪ್ರಶಸ್ತಿ ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಗಿ ನೀಡಿ ಗೌರವಿಸಿದೆ. ಅಂತರರಾಷ್ಟ್ರೀಯ ಸಹಕಾರಗಳ ವೃದ್ಧಿ, ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಏರಿಕೆ, ಪ್ರಪಂಚದ ಅತಿವೇಗದಲ್ಲಿ ಪ್ರಗತಿಹೊಂದುತ್ತಿರುವ ಬೃಹತ್ ಆರ್ಥಿಕತೆಯಲ್ಲಿ ಅಭಿವೃದ್ಧಿಯನ್ನು ಕಾಪಾಡಿಕೊಂಡು , ಭಾರತದ ಪ್ರಜೆಗಳ ಮಾನವಾಭಿವೃದ್ಧಿಯಲ್ಲಿ ವೇಗತಂದಿರುವುದು ಹಾಗೂ ಪ್ರಜಾಪ್ರಭುತ್ವದ ಅಭಿವೃದ್ಧಿಯ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಅವರ ಸಾಮಾಜಿಕ ಏಕೀಕರಣ ಪ್ರಯತ್ನಗಳ ಸಮರ್ಪಣಾಭಾವಗಳನ್ನು ಗುರುತಿಸಿ ಸಮಿತಿಯು ಪ್ರಧಾನಮಂತ್ರಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶ್ರೀಮಂತರು ಮತ್ತು ಬಡವರ ನಡುವಿನ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ “ಮೋದಿನೋಮಿಕ್ಸ್” ಎಂದು ಹೆಸರಿಸಲ್ಪಟ್ಟು ಜನಪ್ರಿಯವಾದ , ಭಾರತ ಮತ್ತು ಜಾಗತಿಕ ಆರ್ಥಿಕತೆಯ ಪ್ರಗತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕೊಡುಗೆಗಳನ್ನು ಪರಿಗಣಿಸಿ, 2018ರ “ಸಿಯೋಲ್ ಶಾಂತಿ ಪ್ರಶಸ್ತಿ ” ಯನ್ನು ಘೋಷಿಸಲಾಗಿದೆ.
ನೋಟು ಅಮಾನ್ಯೀಕರಣ ಮತ್ತು ಭೃಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಸರಕಾರವನ್ನು ಶುದ್ಧತೆಯಡೆಗೆ ಕೊಂಡೊಯ್ಯಲು ಪ್ರಧಾನಮಂತ್ರಿ ಅವರು ಕೈಗೊಂಡ ಉಪಕ್ರಮಗಳಾಗಿವೆ ಎಂದು ಸಮಿತಿಯು ಪ್ರಶಂಸಿಸಿದೆ.
“ಮೋದಿ ಡಾಕ್ಟರಿನ್” ಮತ್ತು “ ಆ್ಯಕ್ಟ್ ಈಸ್ಟ್ ಪಾಲಿಸಿ” ಗಳಂತಹ ತಮ್ಮ ಸಂರಕ್ಷಿತ ವಿದೇಶ ನೀತಿಗಳ ಮೂಲಕ ವಲಯ ಮತ್ತು ಜಾಗತಿಕ ಶಾಂತಿಗಾಗಿ , ವಿಶ್ವದಾದ್ಯಂತ ಇತರ ಎಲ್ಲಾ ದೇಶಗಳ ಜೊತೆಯೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕೊಡುಗೆಗಳನ್ನು ಸಮಿತಿಯು ಗುರುತಿಸಿ ಗೌರವಿಸಿದೆ. ಈ ಪ್ರಶಸ್ತಿ ಪಡೆದವರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14ನೇಯವರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರತಿಷ್ಠಿತ ಗೌರವ ನೀಡಿದ್ದಕ್ಕಾಗಿ ಮತ್ತು ಕೊರಿಯಾ ಗಣತಂತ್ರದ ಜೊತೆ ಭಾರತದ ಗಾಢವಾದ ಸಂಬಂಧಗಳ ಹಿನ್ನಲೆಯಲ್ಲಿ ಅಭಿನಂದನೆ ಸಲ್ಲಿಸಿದರು. “ಸಿಯೋಲ್ ಶಾಂತಿ ಪ್ರಶಸ್ತಿ ಪ್ರತಿಷ್ಠಾನ” ಪರಸ್ಪರ ಸಮಯ ಲಭ್ಯತೆಗೆ ಅನುಗುಣವಾಗಿ ಪ್ರಶಸ್ತಿಯನ್ನು ಪ್ರದಾನಿಸಲಿದೆ.
ಹಿನ್ನಲೆ:
ಕೊರಿಯ ಗಣತಂತ್ರದ ಸಿಯೋಲ್ ನಲ್ಲಿ 1990ರಲ್ಲಿ ಜರುಗಿದ 24ನೇ ಒಲಿಂಪಿಕ್ಸ್ ಕ್ರೀಡೆ ಅತ್ಯಂತ ಯಶಸ್ವಿಯಾದ ಹಿನ್ನಲೆಯಲ್ಲಿ (ಸ್ಮರಣಾರ್ಥ) “ಸಿಯೋಲ್ ಶಾಂತಿ ಪ್ರಶಸ್ತಿ” ಯನ್ನು ಸ್ಥಾಪಿಸಲಾಯಿತು. ಈ ಕ್ರೀಡಾಕಾರ್ಯಕ್ರಮದಲ್ಲಿ ಜಾಗತಿಕವಾಗಿ 160 ದೇಶಗಳು ಪಾಲ್ಗೊಂಡಿದ್ದವು , ಸೌಹಾರ್ದತೆ ಮತ್ತು ಸ್ನೇಹಪರತೆ ಹಾಗೂ ಜಾಗತಿಕವಾಗಿ ಶಾಂತಿಯ ವಾತಾವರಣ ಮತ್ತು ಸಮನ್ವಯವನ್ನು ಸೃಷ್ಠಿಸಿದ್ದವು. ಕೊರಿಯನ್ ಪರ್ಯಾಯ ದ್ವೀಪಕಲ್ಪದಲ್ಲಿ ಮತ್ತು ಜಾಗತಿಕವಾಗಿ ಕೊರಿಯಾದ ಜನರ ಶಾಂತಿಪ್ರಿಯತೆಯ ಸಂಕೇತವಾಗಿ “ಸಿಯೋಲ್ ಶಾಂತಿ ಪ್ರಶಸ್ತಿ” ಯನ್ನು ಸ್ಥಾಪಿಸಲಾಗಿದೆ.
ದೇಶಗಳ ಮತ್ತು ಜಾಗತಿಕ ಶಾಂತಿಯ ಸಮನ್ವಯದಲ್ಲಿ ಹಾಗೂ ಮನುಕುಲದ ಸೌಹಾರ್ದತೆಗೆ ತನ್ನದೇ ಆದ ಅಪ್ರತಿಮ ಕೊಡುಗೆ ನೀಡಿದ ವ್ಯಕ್ತಿಗಳಿಗೆ ದ್ವೈವಾರ್ಷಿಕವಾಗಿ “ಸಿಯೋಲ್ ಶಾಂತಿ ಪ್ರಶಸ್ತಿ” ನೀಡಲಾಗುತ್ತದೆ. ಈ ಮೊದಲು ಗೌರವ ಸ್ವೀಕರಿಸಿದ ಜಾಗತಿಕ ಮಹಾನ್ ವ್ಯಕ್ತಿ ಹಾಗು ಸಂಸ್ಥೆಗಳಲ್ಲಿ ಮಾಜಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಕೋಫಿ ಅನ್ನನ್ , ಜರ್ಮನ್ ಛಾನ್ಸಲರ್ ಅಂಜೆಲಾ ಮೆರ್ಕೆಲ್ ಮತ್ತು ಜನಪ್ರಿಯ ಅಂತರರಾಷ್ಟ್ರೀಯ ಪರಿಹಾರ ಸಂಸ್ಥೆಗಳಾದ ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಮತ್ತು ಓಕ್ಸಾಮ್ ಗಳು ಸೇರಿವೆ. ಜಾಗತಿಕವಾಗಿ 1300ಕ್ಕೂ ಅಧಿಕ ಅನುಮೋದಕರು ಪ್ರಸ್ತಾವಿಸಿ ಸಂಸ್ಕರಿಸಿದ ನೂರಕ್ಕೂ ಅಧಿಕ ಅಭ್ಯರ್ಥಿಗಳಲ್ಲಿ , ಪ್ರಶಸ್ತಿ ಆಯ್ಕೆ ಸಮಿತಿಯು 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಸೂಕ್ತವ್ಯಕ್ತಿ ಅಭ್ಯರ್ಥಿಯೆಂದು ಪರಿಗಣಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲು ನಿರ್ಧರಿಸಿದೆ.