ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೆಹಲಿಯಲ್ಲಿಂದು ನಡೆದ ಎನ್ ಸಿ ಸಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಅವರು ರ‍್ಯಾಲಿಯಲ್ಲಿ ಗೌರವ ವಂದನೆ ಸ್ವೀಕರಿಸಿ ಮಿತ್ರ ಮತ್ತು ನೆರೆಯ ರಾಷ್ಟ್ರಗಳ ತುಕಡಿಗಳು ಸೇರಿ ಹಲವು ಎನ್ ಸಿಸಿ ತುಕಡಿಗಳ ಪಥಸಂಚಲನವನ್ನು ಪರಾಮರ್ಶಿಸಿದರು.
ಬೋಡೋ ಮತ್ತು ಬ್ರೂ – ರಿಯಾಂಗ್ ಒಪ್ಪಂದ
ಈಶಾನ್ಯ ಭಾರತದ ಅಭಿವೃದ್ಧಿ ಪ್ರಯತ್ನಗಳ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಮೊದಲು ಈ ಪ್ರಾಂತ್ಯವನ್ನು ನಿರ್ಲಕ್ಷಿಸಲಾಗಿತ್ತು ಮತ್ತು ಅಲ್ಲಿ ಸದಾ ಬಂಡುಕೋರರ ಹೋರಾಟ ನಡೆಯುತ್ತಿತ್ತು, ಹಿಂಸಾಚಾರಗಳಲ್ಲಿ ಮುಗ್ಧರು ಸಾವನ್ನಪ್ಪುತ್ತಿದ್ದರು ಎಂದರು. ಒಂದೆಡೆ ಸರ್ಕಾರ ಈಶಾನ್ಯ ಭಾಗದ ಅಭಿವೃದ್ಧಿಗೆ ನಿರೀಕ್ಷಿಸಲಾಗದಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಮತ್ತೊಂದೆಡೆ ಸಂಬಂಧಿಸಿದ ಎಲ್ಲರೊಡನೆ ಮುಕ್ತ ಮನಸ್ಸಿನಿಂದ ಹಾಗೂ ಮುಕ್ತ ಹೃದಯದಿಂದ ಸಮಾಲೋಚನೆಗಳನ್ನು ಆರಂಭಿಸಲಾಗಿದೆ. ಅದರ ಪರಿಣಾಮವೇ ಬೋಡೋ ಒಪ್ಪಂದವಾಗಿದೆ. ಇದು ಯುವ ಭಾರತದ ಯೋಚನಾ ಲಹರಿಯಾಗಿದೆ ಎಂದರು.
ಮಿಜೋರಾಂ ಮತ್ತು ತ್ರಿಪುರಾ ನಡುವೆ ಬ್ರೂ – ರಿಯಾಂಗ್ ಒಪ್ಪಂದದ ನಂತರ ಬ್ರೂ ಆದಿವಾಸಿಗಳಿಗೆ ಸಂಬಂಧಿಸಿದ 23 ವರ್ಷಗಳಷ್ಟು ಹಳೆಯದಾದ ಸಮಸ್ಯೆ ಇತ್ಯರ್ಥಗೊಂಡಿದೆ. ಇದು ಯುವ ಭಾರತದ ಯೋಚನೆಯಾಗಿದೆ. ನಾವು ಪ್ರತಿಯೊಬ್ಬರನ್ನು ಒಳಗೊಂಡಂತೆ, ಎಲ್ಲರನ್ನು ಅಭಿವೃದ್ಧಿಗೊಳಿಸುತ್ತ, ಪ್ರತಿಯೊಬ್ಬರ ವಿಶ್ವಾಸಗಳಿಸುತ್ತ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.
ಪೌರತ್ವ ತಿದ್ದುಪಡಿ ಕಾಯ್ದೆ
ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ದೇಶದ ಯುವಜನತೆ ಸತ್ಯಾಂಶವನ್ನು ತಿಳಿಯುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯಾ ನಂತರ ಸ್ವತಂತ್ರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಹಿಂದೂಗಳು – ಸಿಖ್ಖರು ಮತ್ತು ಇತರೆ ಅಲ್ಪಸಂಖ್ಯಾತರು ಅಗತ್ಯವಿದ್ದಾಗ ಭಾರತಕ್ಕೆ ಬಂದು ನೆಲಸಬಹುದು, ಭಾರತ ಅಂತಹವರ ಜೊತೆಗೆ ನಿಲ್ಲುತ್ತದೆ ಎಂದು ಪ್ರಧಾನಿ ಭರವಸೆ ನೀಡಿದರು. ಗಾಂಧೀಜಿ ಅವರ ಬಯಕೆಯೂ ಇದೇ ಆಗಿತ್ತು, 1950ರ ನೆಹರು – ಲಿಯಾಖತ್ ಒಪ್ಪಂದದ ಹಿಂದಿನ ಆಶಯವೂ ಕೂಡ ಇದೇ ಆಗಿತ್ತು ಎಂದು ಹೇಳಿದರು. “ಈ ರಾಷ್ಟ್ರಗಳಲ್ಲಿ ಜನರು ತಮ್ಮ ನಂಬಿಕೆಯಿಂದಾಗಿ ಕಿರುಕುಳಕ್ಕೆ ಒಳಗಾಗಿದ್ದಾರೆ, ಅಂತಹವರಿಗೆ ಭಾರತದ ಪೌರತ್ವ ನೀಡುವುದು ಮತ್ತು ಆಶ್ರಯ ಕಲ್ಪಿಸುವುದು ಭಾರತದ ಜವಾಬ್ದಾರಿಯಾಗಿದೆ. ಆದರೆ ಅಂತಹ ಸಹಸ್ರಾರು ಜನರು ವಾಪಸ್ ಹೋಗಿದ್ದಾರೆ” ಎಂದು ಪ್ರಧಾನಮಂತ್ರಿ ಹೇಳಿದರು. “ಆ ರೀತಿ ಐತಿಹಾಸಿಕ ಅನ್ಯಾಯಕ್ಕೆ ಜನರು ಒಳಗಾಗುವುದನ್ನು ತಪ್ಪಿಸಲು ಇಂದು ನಮ್ಮ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ. ಭಾರತದ ಹಿಂದಿನ ಭಾರವಸೆಯನ್ನು ಈಡೇರಿಸಲು ಅಂತಹ ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು” ಎಂದು ಪ್ರಧಾನಮಂತ್ರಿ ಹೇಳಿದರು.
ದೇಶ ವಿಭಜನೆ ವೇಳೆ ಹಲವು ಭಾರತೀಯರು ತಮ್ಮ ಆಸ್ತಿ ಹಕ್ಕುಗಳನ್ನು ಇಲ್ಲಿಯೇ ಬಿಟ್ಟು ದೇಶ ತೊರೆದಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಂತಹ ಆಸ್ತಿಗಳ ಮೇಲೆ ಭಾರತದ ಹಕ್ಕು ಇದ್ದರೂ ಹಲವು ದಶಕಗಳಿಂದ ಅಂತಹ ಶತೃಗಳ ಆಸ್ತಿಯನ್ನು ತಟಸ್ಥವಾಗಿ ಇಡಲಾಗಿತ್ತೆಂದು ಹೇಳಿದರು. ಯಾವ ವ್ಯಕ್ತಿಗಳು ಶತೃಗಳ ಆಸ್ತಿ ಕಾಯ್ದೆಯನ್ನು ವಿರೋಧಿಸುತ್ತಿದ್ದರೋ ಅವರೇ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ಹೊರ ಬಂದಿದ್ದಾರೆ ಎಂದು ಹೇಳಿದರು.
ಭಾರತ – ಬಾಂಗ್ಲಾ ಗಡಿ ವಿವಾದ
ಭಾರತ ಮತ್ತು ಬಾಂಗ್ಲಾದೇಶದ ಗಡಿ ಪ್ರದೇಶಗಳ ವ್ಯಾಜ್ಯ ಇತ್ಯರ್ಥಕ್ಕೆ ಯಾವುದೇ ವ್ಯವಸ್ಥಿತ ಪ್ರಯತ್ನಗಳು ನಡೆದಿರಲಿಲ್ಲ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಗಡಿ ವಿವಾದ ಇತ್ಯರ್ಥವಾಗುವವರೆಗೆ ದೇಶದೊಳಗೆ ಒಳನುಸುಳುವುದು ನಿಲ್ಲುವುದಿಲ್ಲ ಎಂದು ಅವರು ಹೇಳಿದರು. ವಿವಾದವನ್ನು ಬಗೆಹರಿಯದಂತೆ ನೋಡಿಕೊಂಡು ಒಳನುಸುಳು ಕೋರರಿಗೆ ಮುಕ್ತ ಮಾರ್ಗ ನೀಡಲಾಗುತ್ತಿದೆ ಮತ್ತು ಆ ಮೂಲಕ ಅವರು ರಾಜಕೀಯವನ್ನು ಮಾಡುತ್ತಿದ್ದೀರೆ ಎಂದರು.
ತಮ್ಮ ಸರ್ಕಾರ ಬಾಂಗ್ಲಾದೇಶದ ಜೊತೆ ಪರಸ್ಪರ ಸಮಾಲೋಚನೆಗಳನ್ನು ನಡೆಸಿ, ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಗಡಿ ವಿವಾದವನ್ನು ಬಗೆಹರಿಸಿಕೊಂಡಿದೆ ಮತ್ತು ಆ ಸಮಸ್ಯೆಗೆ ಪರಿಹಾರವನ್ನು ಉಭಯ ದೇಶಗಳು ಒಪ್ಪಿವೆ ಎಂದು ಹೇಳಿದರು. ಇಂದು ಕೇವಲ ಗಡಿ ವಿವಾದ ಇತ್ಯರ್ಥಗೊಂಡಿರುವುದು ಮಾತ್ರವಲ್ಲ, ಇಂದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಐತಿಹಾಸಿಕ ಉನ್ನತ ಮಟ್ಟಕ್ಕೇರಿದೆ ಮತ್ತು ಉಭಯ ದೇಶಗಳು ಬಡತನದ ವಿರುದ್ಧ ಜಂಟಿಯಾಗಿ ಹೋರಾಡುತ್ತಿವೆ ಎಂದು ಹೇಳಿದರು.
ಕರ್ತಾರ್ ಪುರ್ ಕಾರಿಡಾರ್
ದೇಶ ವಿಭಜನೆ ವೇಳೆ ಗುರುದ್ವಾರ ಕರ್ತಾರ್ ಪುರ್ ಸಾಹಿಬ್ ಅನ್ನು ನಮ್ಮಿಂದ ತೆಗೆದುಕೊಂಡು, ಪಾಕಿಸ್ತಾನದ ಭಾಗವನ್ನಾಗಿ ಮಾಡಲಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಕರ್ತಾರ್ ಪುರ್, ಗುರುನಾನಕ್ ಅವರ ಪುಣ್ಯಭೂಮಿ. ಈ ಪವಿತ್ರ ಸ್ಥಳದೊಂದಿಗೆ ದೇಶದ ಕೋಟ್ಯಾಂತರ ಜನರ ನಂಬಿಕೆ ಬೆಸೆದುಕೊಂಡಿದೆ. ಹಲವು ದಶಕಗಳಿಂದ ಸಿಖ್ ಭಕ್ತಾದಿಗಳು ಸುಲಭವಾಗಿ ಕರ್ತಾರ್ ಪುರ್ ತಲುಪಲು ಮತ್ತು ಗುರು ಭೂಮಿಯ ದರ್ಶನ ಪಡೆಯುವ ಅವಕಾಶ ಸಿಗಲಿದೆ ಎಂದು ಕಾಯುತ್ತಿದ್ದರು. ತಮ್ಮ ಸರ್ಕಾರ, ಕರ್ತಾರ್ ಪುರ್ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಅದನ್ನು ಸಾಧಿಸಿದೆ.