ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಥೈಯ್ಲಾಂಡ್‌ನ ಬ್ಯಾಂಗ್‌ಕಾಕ್‌ನಲ್ಲಿ ನಡೆದ 16ನೇ ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಅವರು 16ನೇ ಭಾರತ ಆಸಿಯಾನ್‌ ಶೃಂಗಸಭೆಯ ಭಾಗವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಶೃಂಗಸಭೆಯ ಆತಿಥ್ಯವಹಿಸಿದ್ದಕ್ಕಾಗಿ ಥಾಯ್ಲೆಂಡ್‌ಗೆ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಮುಂದಿನ ಶೃಂಗಸಭೆಯ ಅಧ್ಯಕ್ಷತೆಯನ್ನು ವಿಯಟ್ನಾಂ ವಹಿಸಿಕೊಂಡಿದ್ದಕ್ಕೆ ಶುಭ ಕೋರಿದರು.

ಇಂಡೊ ಪೆಸಿಫಿಕ್‌ ಕಾರ್ಯತಂತ್ರಕ್ಕೆ ಪೂರ್ವ ದೇಶಗಳ ನೀತಿಯತ್ತ ನೋಡುವುದರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆಸಿಯಾನ್‌ ’ಆ್ಯಕ್ಟ್‌ ಈಸ್ಟ್‌ ಪಾಲಿಸಿ’ಯ ಪ್ರಮುಖ ಭಾಗವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. ಬಲಿಷ್ಠವಾದ ಆಸಿಯಾನ್‌ ನಿಂದ ಭಾರತಕ್ಕೆ ಅಪಾರ ಲಾಭವಾಗಲಿದೆ. ನೆಲ, ಜಲ, ವಾಯು ಮತ್ತು ಡಿಜಿಟಲ್‌ ಸಂಪರ್ಕವನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಡಿಜಿಟಲ್‌ ಮತ್ತು ಇತರ ಭೌತಿಕ ಸಂಪರ್ಕ ಸುಧಾರಣೆಗೆ ಭಾರತ ಒಂದು ಬಿಲಿಯನ್‌ ಡಾಲರ್‌ ಮೊತ್ತವನ್ನು ಲೈನ್‌ ಆಫ್‌ ಕ್ರೆಡಿಟ್‌ ರೂಪದಲ್ಲಿ ವಿನಿಯೋಗಿಸುವುದರಿಂದ ಅತಿ ಹೆಚ್ಚು ಪ್ರಯೋಜನವಾಗಲಿದೆ.

ಕಳೆದ ವರ್ಷದ ಜ್ಞಾಪಕರ್ಥವಾಗಿ ನಡೆದ ಶೃಂಗಸಭೆ ಮತ್ತು ಸಿಂಗಾಪೂರ ಶೃಂಗಸಭೆಗಳು ಭಾರತ ಮತ್ತು ಆಸಿಯಾನ್‌ ರಾಷ್ಟ್ರಗಳನ್ನು ಮತ್ತಷ್ಟು ಹತ್ತಿರಕ್ಕೆ ಕರೆ ತಂದಿವೆ. ಇದರಿಂದ, ಸಂಬಂಧಗಳು ಸುಧಾರಿಸಿವೆ. ಪರಸ್ಪರರಿಗೆ ಲಾಭವಾಗುವ ರೀತಿಯಲ್ಲಿ ಸಹಕಾರ ಮತ್ತು ಸಹಭಾಗಿತ್ವವನ್ನು ಬಲಪಡಿಸಲು ಭಾರತ ಇಚ್ಛೆ ವ್ಯಕ್ತಪಡಿಡುಸುತ್ತದೆ. ಕೃಷಿ, ಸಂಶೋಧನೆ, ಎಂಜಿನಿಯರಿಂಗ್‌, ವಿಜ್ಞಾನ ಮತ್ತು ಐಸಿಟಿ ಕ್ಷೇತ್ರಗಳಲ್ಲಿ ಸಹಭಾಗಿತ್ವ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತ ಅತಿ ಹೆಚ್ಚಿನ ಸಹಕಾರ ನೀಡಲಿದೆ ಎಂದು ಪ್ರಧಾನಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಸಾಗರದ ಭದ್ರತೆ ಮತ್ತು ಸಾಗರಕ್ಕೆ ಸಂಬಂಧಿಸಿದ ಆರ್ಥಿಕತೆಯನ್ನು ಬಲಪಡಿಸಲು ಭಾರತ ಇಚ್ಛಿಸಿದೆ ಎಂದು ಪ್ರಧಾನಿ ಹೇಳಿದರು. ಆಸಿಯಾನ್‌ ಎಫ್‌ಟಿಎ ಅನ್ನು ಪರಾಮರ್ಶಿಸುವ ನಿರ್ಧಾರವನ್ನು ಕೈಗೊಂಡಿದ್ದನ್ನು ಪ್ರಧಾನಿ ಈ ಸಂದರ್ಭದಲ್ಲಿ ಸ್ವಾಗತಿಸಿದರು. ಇದರಿಂದ ಉಭಯ ದೇಶಗಳ ನಡುವೆ ಆರ್ಥಿಕ ಸಹಭಾಗಿತ್ವ ಸುಧಾರಿಸಲಿದೆ ಎಂದು ಹೇಳಿದರು.

 

 Click here to read full text of speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi