ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರ ಸಮಾವೇಶಕ್ಕಾಗಿ ಇಂದು ಮಧ್ಯಪ್ರದೇಶದ ತೇಕನ್ಪುರದ ಬಿ.ಎಸ್.ಎಫ್. ಅಕಾಡಮಿಗೆ ಆಗಮಿಸಿದರು.
ದಿನಪೂರ್ತಿ, ಭದ್ರತೆ ಕುರಿತ ವಿಷಯಗಳ ಕುರಿತಂತೆ ವಿವಿಧ ಪ್ರಾತ್ಯಕ್ಷಿಕೆಗಳು ಮತ್ತು ಅರ್ಥಪೂರ್ಣ ಚರ್ಚೆಗಳು ನಡೆದವು. ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳ ಜಾರಿಯ ಕುರಿತಂತೆಯೂ ಪ್ರಾತ್ಯಕ್ಷಿಕೆ ನೀಡಲಾಯಿತು.
ಭೋಜನದೊಂದಿಗೆ ಪ್ರಧಾನಿಯವರು, ಆಯ್ದ ಅಧಿಕಾರಿಗಳ ಗುಂಪಿನೊಂದಿಗೆ ನಿರ್ದಿಷ್ಟ ಭದ್ರತೆ ಮತ್ತು ಪೊಲೀಸ್ ವಿಚಾರಗಳ ಕುರಿತು ಚರ್ಚಿಸಿದರು. ಪ್ರಧಾನಮಂತ್ರಿಯವರ ಈ ಸಂವಾದ ಸುಮಾರು 9 ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು.
ಇದಕ್ಕೂ ಮುನ್ನ, ಇಲ್ಲಿಗೆ ಆಗಮಿಸಿದ ಪ್ರಧಾನಮಂತ್ರಿಯವರು, ಬಿ.ಎಸ್.ಎಫ್. ಅಕಾಡಮಿಯ ಐದು ಹೊಸ ಕಟ್ಟಡಗಳ ಉದ್ಘಾಟನೆಯ ಅಂಗವಾಗಿ ಫಲಕ ಅನಾವರಣ ಮಾಡಿದರು.
ಚರ್ಚೆಗಳು ನಾಳೆಯೂ ಮುಂದುವರಿಯಲಿದೆ. ಪ್ರಧಾನಮಂತ್ರಿಯವರು ದೆಹಲಿಗೆ ಮರಳುವ ಮೊದಲು ನಾಳೆ ಮಧ್ಯಾಹ್ನ ಸಮಾವೇಶದ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.