ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯು.ಎಸ್. ಅಧ್ಯಕ್ಷ ಶ್ರೀ ಡೊನಾಲ್ಡ್ ಜೆ. ಟ್ರಂಪ್ ಅವರು ನಿನ್ನೆ ರಾತ್ರಿ ದೂರವಾಣಿ ಮೂಲಕ ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.
ಭಾರತ-ಯು.ಎಸ್. ವ್ಯೂಹಾತ್ಮಕ ಪಾಲುದಾರಿಕೆಯ 2018ರ ಪ್ರಗತಿ ಬಗ್ಗೆ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು. ಪ್ರಪ್ರಥಮ ಭಾರತ, ಜಪಾನ್ ಮತ್ತು ಯು.ಎಸ್ ತ್ರಿಪಕ್ಷೀಯ ಶೃಂಗಸಭೆ ಹಾಗೂ 2+2 ಮಾತುಕತೆ ವ್ಯವಸ್ಥೆಗಳ ಪ್ರಾರಂಭ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಉಭಯ ನಾಯಕರು ಪ್ರಶಂಸಿಸಿದರು. ಭಯೋತ್ಪಾದನೆ ನಿಗ್ರಹ, ರಕ್ಷಣೆ, ಇಂಧನ ಹಾಗೂ ಪ್ರಾಂತೀಯ ಹಾಗೂ ಜಾಗತಿಕ ವಿಚಾರಗಳ ಸಮನ್ವಯತೆ ಮುಂತಾದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಅಭಿವೃಧ್ಧಿಯ ಸಕಾರಾತ್ಮಕ ಪ್ರಗತಿಯ ಕುರಿತಾಗಿ ಇಬ್ಬರೂ ನಾಯಕರು ಉಲ್ಲೇಖ ಮಾಡಿದರು. ಭಾರತ-ಯು.ಎಸ್. ದ್ವಿಪಕ್ಷೀಯ ಸಂಬಂಧವು 2019ರಲ್ಲಿ ಇನ್ನೂ ಬಲಿಷ್ಠಗೊಳ್ಳಲು ನಿರಂತರ ಕಾರ್ಯ ನಿರ್ವಹಿಸುವುದಾಗಿ ಉಭಯ ನಾಯಕರು ಒಪ್ಪಿಕೊಂಡರು.