It is our Constitution that binds us all together: PM Modi
What is special about Indian Constitution is that it highlights both rights and duties of citizens: PM Modi
As proud citizens of India, let us think how our actions can make our nation even stronger: PM Modi

ನಮ್ಮ ಸಂವಿಧಾನದಲ್ಲಿರುವ ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಮತ್ತು ರಾಷ್ಟ್ರದ ಸಮಗ್ರತೆಯನ್ನು ಎತ್ತಿಹಿಡಿಯುವಾಗ ನಮಗೆ ಸವಾಲುಗಳನ್ನು ಎದುರಿಸುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿಂದು ಸಂವಿಧಾನದ 70 ನೇ ವರ್ಷಾಚರಣೆ ಪ್ರಯುಕ್ತ ಉಭಯ ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸಂವಿಧಾನ ದಿನವನ್ನು ಉಲ್ಲೇಖಿಸಿದ ಪ್ರಧಾನಿಯವರು, “ಕೆಲವು ಸಂದರ್ಭಗಳು ಮತ್ತು ಕೆಲವು ದಿನಗಳು ಭೂತಕಾಲದೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸುತ್ತವೆ. ಉತ್ತಮ ಭವಿಷ್ಯದತ್ತ ಕೆಲಸ ಮಾಡಲು ಅವು ನಮ್ಮನ್ನು ಪ್ರೇರೇಪಿಸುತ್ತವೆ. ಇಂದು ನವೆಂಬರ್ 26 ಒಂದು ಐತಿಹಾಸಿಕ ದಿನ. 70 ವರ್ಷಗಳ ಹಿಂದೆ ನಾವು ನಮ್ಮ ಶ್ರೇಷ್ಠ ಸಂವಿಧಾನವನ್ನು ಅಳವಡಿಸಿಕೊಂಡ ದಿನ “ ಎಂದರು.
ಸಂವಿಧಾನವನ್ನು ಸಂವಿಧಾನ ಸಭೆಯ ಹಲವಾರು ಚರ್ಚೆಗಳು ಮತ್ತು ಆಲೋಚನೆಗಳ ಫಲ ಎಂದು ಪ್ರಧಾನಿ ಬಣ್ಣಿಸಿದರು. ದೇಶವು ಸಂವಿಧಾನವನ್ನು ಹೊಂದಲು ಶ್ರಮಿಸಿದ ಎಲ್ಲರಿಗೂ ಅವರು ಗೌರವ ಸಲ್ಲಿಸಿದರು.

“7 ದಶಕಗಳ ಹಿಂದೆ ಇದೇ ಸೆಂಟ್ರಲ್ ಹಾಲ್ ನಲ್ಲಿ ನಮ್ಮ ಕನಸುಗಳು, ಸವಾಲುಗಳು ಮತ್ತು ಭವಿಷ್ಯದ ಬಗ್ಗೆ ಸಂವಿಧಾನದ ಪ್ರತಿಯೊಂದು ಪರಿಚ್ಚೇದಗಳ ಬಗ್ಗೆ ಚರ್ಚಿಸಲಾಯಿತು. ಡಾ.ರಾಜೇಂದ್ರ ಪ್ರಸಾದ್, ಡಾ.ಭೀಮ್ ರಾವ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಪಂಡಿತ್ ನೆಹರು, ಆಚಾರ್ಯ ಕೃಪಲಾನಿ, ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಇನ್ನಿತರ ಹಲವಾರು ಹಿರಿಯ ನಾಯಕರು ಚರ್ಚಿಸಿ ಸಂವಿಧಾನವನ್ನು ನಮಗೆ ನೀಡಿದರು. ಈ ಸಂವಿಧಾನವನ್ನು ನಮಗೆ ನೀಡಲು ಕಾರಣರಾದ ಎಲ್ಲರಿಗೂ ನನ್ನ ಗೌರವವನ್ನು ಅರ್ಪಿಸುತ್ತೇನೆ. ಸಂವಿಧಾನ ಸಭೆಯ ಸದಸ್ಯರ ಕನಸುಗಳು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪದಗಳು ಮತ್ತು ಮೌಲ್ಯಗಳ ರೂಪದಲ್ಲಿ ರೂಪುಗೊಂಡಿವೆ” ಎಂದು ಅವರು ಹೇಳಿದರು.

1949 ರ ನವೆಂಬರ್ 25 ರಂದು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಸಂವಿಧಾನದ ಕುರಿತು ತಮ್ಮ ಕೊನೆಯ ಭಾಷಣದಲ್ಲಿ ಈ ಹಿಂದೆ ನಮ್ಮದೇ ತಪ್ಪುಗಳಿಂದಾಗಿ ನಮ್ಮ ಸ್ವಾತಂತ್ರ್ಯ ಮತ್ತು ದೇಶದ ಗಣರಾಜ್ಯ ಸ್ವರೂಪವನ್ನು ಕಳೆದುಕೊಂಡಿದ್ದೆವು ಎಂದು ಜನರಿಗೆ ನೆನಪಿಸಿದ್ದರು ಎಂದು ಪ್ರಧಾನಿ ಹೇಳಿದರು.

“ಅಂಬೇಡ್ಕರ್ ಅವರು ಜನರಿಗೆ ಎಚ್ಚರಿಕೆ ನೀಡಿದ್ದರು ಮತ್ತು ದೇಶವು ಈಗ ತನ್ನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬಹುದೇ ಎಂದು ಕೇಳಿದ್ದರು” ಎಂದು ಪ್ರಧಾನಿ ಹೇಳಿದರು.

“ಬಾಬಾಸಾಹೇಬ್ ಅಂಬೇಡ್ಕರ್ ಇಂದು ಬದುಕಿದ್ದಿದ್ದರೆ, ಅವರು ಬಹುಶಃ ಅತ್ಯಂತ ಸಂತೋಷಪಡುತ್ತಿದ್ದರು. ಭಾರತ ತನ್ನ ಒಳ್ಳೆಯತಗಳನ್ನು ಎತ್ತಿಹಿಡಿದಿರುವುದು ಮಾತ್ರವಲ್ಲದೆ ತನ್ನ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಬಲಪಡಿಸಿಕೊಂಡಿದೆ. ಅದಕ್ಕಾಗಿಯೇ ನಾನು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು ಮತ್ತು ಆದರ್ಶಗಳನ್ನು ಕಾಪಾಡಲು ಸಹಾಯ ಮಾಡಿರುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ತಲೆಬಾಗುತ್ತೇನೆ” ಎಂದು ಪ್ರಧಾನಿ ಹೇಳಿದರು.

ಸಂವಿಧಾನವನ್ನು ಎತ್ತಿ ಹಿಡಿಯುತ್ತಿರುವ ಇಡೀ ದೇಶಕ್ಕೂ ನಾನು ನಮಸ್ಕರಿಸುವುದಾಗಿ ಪ್ರಧಾನಿ ಹೇಳಿದರು.

ಭಾರತದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಎಂದಿಗೂ ಕಡಿಮೆಯಾಗದ ಮತ್ತು ಸಂವಿಧಾನವನ್ನು ಯಾವಾಗಲೂ ಪವಿತ್ರ ಗ್ರಂಥ ಮತ್ತು ಮಾರ್ಗದರ್ಶಕ ಬೆಳಕೆಂದು ಪೂಜಿಸುವ 130 ಕೋಟಿ ಭಾರತೀಯರಿಗೆ ನಾನು ನಮ್ರತೆಯಿಂದ ನಮಸ್ಕರಿಸುತ್ತೇನೆ.

ನಮ್ಮ ಸಂವಿಧಾನದ 70 ವರ್ಷಗಳು ನಮಗೆ ಸಂತೋಷ, ಪ್ರಾಬಲ್ಯ ಮತ್ತು ತೀರ್ಮಾನದ ಭಾವವನ್ನು ತಂದಿವೆ.

ಸಂವಿಧಾನದ ಸದ್ಗುಣಗಳು ಮತ್ತು ಅದರ ಅಸ್ತಿತ್ವದೊಂದಿಗೆ ಸೇರಿದವರು ಎಂಬ ನಿಶ್ಚಯದಿಂದಾಗಿ ಸಂತೋಷದ ಭಾವನೆ ಉಂಟಾಗುತ್ತದೆ. ಈ ದೇಶದ ಜನರು ಇದಕ್ಕೆ ವಿರುದ್ಧವಾದ ಯಾವುದೇ ಪ್ರಯತ್ನವನ್ನು ತಿರಸ್ಕರಿಸಿದ್ದಾರೆ ಎಂದು ಅವರು ತಿಳಿಸಿದರು.
ಸಂವಿಧಾನದ ಆದರ್ಶಗಳಿಂದಾಗಿ ನಾವು ಏಕ್ ಭಾರತ್ ಶ್ರೇಷ್ಠ ಭಾರತ್ ಕಡೆಗೆ ಸಾಗುತ್ತಿದ್ದೇವೆ

ಇದರ ಒಟ್ಟಾರೆ ಸಾರಾಂಶವೆಂದರೆ ಈ ವಿಶಾಲ ಮತ್ತು ವೈವಿಧ್ಯಮಯವಾದ ದೇಶವು ತನ್ನ ಆಕಾಂಕ್ಷೆಗಳು, ಕನಸುಗಳು ಮತ್ತು ಪ್ರಗತಿಯನ್ನು ಸಾಧಿಸಲು ಇರುವ ಏಕೈಕ ಸಾಧನವೆಂದರೆ ಸಂವಿಧಾನ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ನಮ್ಮ ಪವಿತ್ರ ಗ್ರಂಥ ಎಂದು ಬಣ್ಣಿಸಿದರು.

“ನಮ್ಮ ಸಂವಿಧಾನವು ನಮಗೆ ಅತ್ಯಂತ ಪವಿತ್ರವಾದ ಗ್ರಂಥವಾಗಿದ್ದು, ಇದು ನಮ್ಮ ಜೀವನ, ನಮ್ಮ ಸಮಾಜ, ನಮ್ಮ ಸಂಪ್ರದಾಯಗಳು, ನಮ್ಮ ಮೌಲ್ಯಗಳು ಮತ್ತು ನಮ್ಮ ಎಲ್ಲಾ ಸವಾಲುಗಳಿಗೆ ಪರಿಹಾರವಾಗಿದೆ. ಸಂವಿಧಾನವು ಘನತೆ ಮತ್ತು ಏಕತೆಯ ಅವಳಿ ತತ್ತ್ವವನ್ನು ಆಧರಿಸಿದೆ ಎಂದು ಅವರು ಹೇಳಿದರು.

“ಸಂವಿಧಾನದ ಎರಡು ಮಂತ್ರಗಳೆಂದರೆ ‘ಭಾರತೀಯರಿಗೆ ಘನತೆ’ ಮತ್ತು ‘ಭಾರತಕ್ಕೆ ಏಕತೆ’. ಇದು ಭಾರತದ ಏಕತೆಗೆ ಧಕ್ಕೆಯಾಗದಂತೆ ನಮ್ಮ ನಾಗರಿಕರ ಘನತೆಯನ್ನು ಎತ್ತಿ ಹಿಡಿದಿದೆ.” ಎಂದರು.

ಸಂವಿಧಾನವನ್ನು ಜಾಗತಿಕ ಪ್ರಜಾಪ್ರಭುತ್ವದ ಅತ್ಯುತ್ತಮ ಅಭಿವ್ಯಕ್ತಿ ಎಂದು ಕರೆದ ಪ್ರಧಾನಿಯವರು ಇದು ನಮ್ಮ ಹಕ್ಕುಗಳ ಬಗ್ಗೆ ಮಾತ್ರವಲ್ಲದೆ ನಮ್ಮ ಕರ್ತವ್ಯಗಳ ಬಗ್ಗೆಯೂ ನಮಗೆ ಅರಿವು ಮೂಡಿಸುತ್ತದೆ ಎಂದರು.

“ಭಾರತದ ಸಂವಿಧಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎತ್ತಿ ತೋರಿಸುತ್ತದೆ. ಇದು ನಮ್ಮ ಸಂವಿಧಾನದ ವಿಶೇಷ ಅಂಶವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಂಬಂಧ ಮತ್ತು ಸಮತೋಲನವನ್ನು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.“

ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಕರ್ತವ್ಯ ಪ್ರಜ್ಞೆಯನ್ನು ಅನುಸರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಅವರು ಜನರನ್ನು ಕೋರಿದರು.

“ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಕರ್ತವ್ಯಗಳನ್ನು ನಾವು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ಯೋಚಿಸೋಣ. ನಾವು ಸೇವೆ ಮತ್ತು ಕರ್ತವ್ಯದ ನಡುವೆ ವ್ಯತ್ಯಾಸವನ್ನು ಕಾಣಬೇಕು. ಸೇವೆ ಸ್ವಯಂಪ್ರೇರಿತವಾದುದು, ನೀವು ಬೀದಿಯಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡಬಹುದು, ಆದರೆ ಚಾಲನೆ ಮಾಡುವಾಗ ನೀವು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಆಗ ನಿಮ್ಮ ಕರ್ತವ್ಯವನ್ನು ನೀವು ಪೂರೈಸುತ್ತಿದ್ದೀರಿ ಎಂದರ್ಥ.

ಜನರೊಂದಿಗಿನ ನಮ್ಮ ಒಡನಾಟದಲ್ಲಿ ಕರ್ತವ್ಯಗಳಿಗೆ ಒತ್ತು ನೀಡುವುದು ನಮ್ಮ ಪ್ರಯತ್ನವಾಗಿರಬೇಕು.

ಭಾರತದ ಹೆಮ್ಮೆಯ ಪ್ರಜೆಗಳಾಗಿ, ನಮ್ಮ ಕೆಲಸಗಳಿಂದ ನಮ್ಮ ರಾಷ್ಟ್ರವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎನ್ನುವ ಬಗ್ಗೆ ಯೋಚಿಸೋಣ. ನಮ್ಮ ಸಂವಿಧಾನವು ಆರಂಭವಾಗುವುದೇ“ನಾವು ಭಾರತದ ಜನರು” ಎಂದು. ನಾವು ಎಂದರೆ ಜನರೇ ಅದರ ಶಕ್ತಿ, ಸ್ಫೂರ್ತಿ ಮತ್ತು ಉದ್ದೇಶ ಎಂದು ಅರಿತುಕೊಳ್ಳೋಣ ” ಎಂದು ಅವರು ಹೇಳಿದರು,

ಇಂದು 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ ದಿನ ಎಂದು ಸ್ಮರಿಸಿದ ಪ್ರಧಾನಿಯವರು ಆ ನತದೃಷ್ಟ ದಿನದಂದು ಮಡಿದವರಿಗೆ ಗೌರವ ಸಲ್ಲಿಸಿದರು.

“ವಸುದೈವ ಕುಟುಂಬಕಂ ಎಂಬ ಸಾವಿರಾರು ವರ್ಷಗಳ ತತ್ವವನ್ನು ನಾಶಮಾಡಲು ಮುಂಬೈನಲ್ಲಿ ಭಯೋತ್ಪಾದಕರು ದಾಳಿ ಮಾಡಿದ ದಿನವೂ ಇದೇ ನವೆಂಬರ್ 26. ಇದು ನೋವು ತರುತ್ತದೆ. ಅಗಲಿದ ಆತ್ಮಗಳಿಗೆ ನನ್ನ ಗೌರವ ಸಲ್ಲಿಸುತ್ತೇನೆ.”

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage