PM Modi calls for promotion of sports and cultural exchanges between states
A digital movement in the nation is going on and the youth are at the core of this: PM
India has tremendous scope to expand it's tourism sector that can draw the world: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಸಚಿವರು ಮತ್ತು ಕಾರ್ಯದರ್ಶಿಗಳ ರಾಷ್ಟ್ರೀಯ ಸಮಾವೇಶದಲ್ಲಿ (ವಿಡಿಯೋ ಕಾನ್ಫರೆನ್ಸ್ ಮೂಲಕ) ಉದ್ಘಾಟನಾ ಭಾಷಣ ಮಾಡಿದರು. ಈ ಕಾರ್ಯಕ್ರಮವನ್ನು ಗುಜರಾತ್ ನ ಕಚ್ ನಲ್ಲಿ ಏರ್ಪಡಿಸಲಾಗಿತ್ತು.

ಪ್ರಧಾನಮಂತ್ರಿಯವರು ಕ್ರೀಡೆಯಲ್ಲಿ ಉತ್ತಮಿಕೆಗಾಗಿ ಸಾಂಸ್ಥಿಕ ಸಿದ್ಧತೆಯ ಅಗತ್ಯವನ್ನು ಪ್ರತಿಪಾದಿಸಿದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕ್ರೀಡೆಯನ್ನು ಜನಪ್ರಿಯಗೊಳಿಸಲು ಉತ್ಸುಕವಾಗಿವೆ ಎಂದು ಹೇಳಿದರು. ಜಿಲ್ಲಾ ಮಟ್ಟದಲ್ಲಿ ಸೂಕ್ತವಾಗಿ ಶೋಧನೆ ನಡೆಸುವ ಬಲವಾದ ಅಗತ್ಯವಿದೆ, ಹಾಗಾದಾಗ ನಾವು ನಮ್ಮ ಪ್ರತಿಭೆಯ ಶ್ರೇಣಿಯನ್ನು ಅರಿಯಬಹುದು ಮತ್ತು ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಕ್ಕೆ ಯೋಜನೆ ರೂಪಿಸಬಹುದು ಎಂದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ, ಭಾರತವು ಅಗಾಧ ಸಾಮರ್ಥ್ಯದಿಂದ ಹರಸಲ್ಪಟ್ಟಿದೆ ಮತ್ತು ಇದು ಇಡೀ ವಿಶ್ವವನ್ನೇ ಸೆಲೆಯಬಲ್ಲುದಾಗಿದೆ ಎಂದರು. ಭಾರತೀಯ ಯುವಕರು ಪ್ರಮುಖ ಕಾರ್ಯಕ್ರಮಗಳಾದ ಡಿಜಿಟಲ್ ಉಪಕ್ರಮಗಳು ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಬಲ ನೀಡುತ್ತಿದ್ದಾರೆ ಎಂದರು. ಪ್ರತಿಯೊಂದು ರಾಜ್ಯವೂ ಕೆಲವು ತಾಣಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಮೂಲಸೌಕರ್ಯ ಒದಗಿಸಬೇಕು ಮತ್ತು ಅಲ್ಲಿಗೆ ವಿಶ್ವವನ್ನು ಸೆಳೆಯಬೇಕು ಎಂದರು.

ರಾಜ್ಯಗಳ ನಡುವೆ ವಿವಿಧ ಪರಸ್ಪರ ಉಪಕ್ರಮಗಳ ಮೂಲಕ ಏಕ ಭಾರತ, ಶ್ರೇಷ್ಠ ಭಾರತ ಅನುಷ್ಠಾನಕ್ಕಾಗಿ ಒಗ್ಗೂಡಿ ಶ್ರಮಿಸುವಂತೆ ಈ ಸಮಾವೇಶದಲ್ಲಿ ಸೇರಿರುವ ಪ್ರತಿನಿಧಿಗಳಿಗೆಪ್ರಧಾನಮಂತ್ರಿಯವರು, ಒತ್ತಾಯಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ, ಮತ್ತು ಕೇಂದ್ರದ ಸಹಾಯಕ ಸಚಿವರಾದ ಶ್ರೀ ವಿಜಯ್ ಗೋಯೆಲ್ ಮತ್ತು ಡಾ. ಮನೀಶ್ ಶರ್ಮಾ ಈ ಸಂದರ್ಭದಲ್ಲಿ ಹಾಜರಿದ್ದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's Economic Growth Activity at 8-Month High in October, Festive Season Key Indicator

Media Coverage

India's Economic Growth Activity at 8-Month High in October, Festive Season Key Indicator
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ನವೆಂಬರ್ 2024
November 22, 2024

PM Modi's Visionary Leadership: A Guiding Light for the Global South