ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಶ್ರೀ ಲಕ್ಷ್ಮಣರಾವ್ ಇನಾಂದಾರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಸಹಕಾರ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ನಮ್ಮ ದೇಶ‘ಬಹುರಾಷ್ಟ್ರ ವಸುಂಧರಾ’, ಇಲ್ಲಿ ಅನೇಕ ಜನರು ಹಲವು ಕಾಲಘಟ್ಟದಲ್ಲಿ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಅವರಲ್ಲಿ ಕೆಲವರು ತುಂಬಾ ಜನಪ್ರಿಯರಾದರು ಮತ್ತು ಅವರ ಬಗ್ಗೆ ಮಾಧ್ಯಮಗಳೂ ಮಾತನಾಡಿದವು, ಆದರೆ ಇನ್ನೂ ಕೆಲವರು ಅಮೂಲ್ಯ ಕೊಡುಗೆ ನೀಡಿದ್ದಾರೆ, ಆದಾಗ್ಯೂ ಅವರು ಹೆಚ್ಚು ಅಪರಿಚಿತರಾಗಿ ಉಳಿದಿದ್ದಾರೆ ಎಂದರು. ವಕೀಲ್ ಸಾಹೇಬ್ – ಲಕ್ಷ್ಮಣರಾವ್ ಇನಾಂದಾರ್ ಅವರು ಅಂಥ ಒಬ್ಬ ವ್ಯಕ್ತಿ ಎಂದು ಪ್ರಧಾನಿ ತಿಳಿಸಿದರು. ಸಹಕಾರ ಚಳವಳಿಯ ಪ್ರಥಮ ತತ್ವವೇ ಅನಾಮಿಕರಾಗಿ ಉಳಿದುಎಲ್ಲರನ್ನೂ ಒಗ್ಗೂಡಿಸುವುದಾಗಿದೆ ಎಂದರು. ಶ್ರೀ ಇನಾಂದಾರ್ ಅವರು ಈ ತತ್ವವನ್ನು ಅಳವಡಿಸಿಕೊಂಡಿದ್ದರು ಮತ್ತು ಅವರ ಬದುಕೇ ಒಂದು ಸ್ಫೂರ್ತಿಯ ಸೆಲೆ ಎಂದು ತಿಳಿಸಿದರು.
2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮತೋಲಿತ ಅಭಿವೃದ್ಧಿಯ ಕುರಿತು ಪ್ರಧಾನಿ ಮಾತನಾಡಿದರು. ಸಹಕಾರಿ ಆಂದೋಲನವು ಈ ಉದ್ದೇಶಗಳ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಸಹಕಾರಿ ಚಳವಳಿಯಲ್ಲಿ ‘ಸ್ಫೂರ್ತಿ’ಯನ್ನು ಉಳಿಸಿಕೊಳ್ಳುವ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಅದು ಇನ್ನೂ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಗಿಲ್ಲ ಎಂದರು. ‘ಸಂಸ್ಕಾರವಿಲ್ಲದೆ ಸಹಕಾರವಿಲ್ಲ’ ಎಂಬ ಇನಾಂದಾರ್ ಅವರ ಮಂತ್ರವನ್ನು ಪ್ರಧಾನಿ ಪುನರುಚ್ಚರಿಸಿದರು.”
ಇಂದು ರೈತರು ಚಿಲ್ಲರೆಯಾಗಿ ಖರೀದಿಸುತ್ತಾರೆ, ಆದರೆ ಸಗಟು ರೂಪದಲ್ಲಿ ಮಾರಾಟ ಮಾಡುತ್ತಾರೆ ಎಂದು ಪ್ರಧಾನಿ ತಿಳಿಸಿದರು. ಮಧ್ಯವರ್ತಿಗಳ ಕಾಟ ತಪ್ಪಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ಈ ಪ್ರಕ್ರಿಯೆಯನ್ನು ತಿರುಗು ಮುರುಗು ಮಾಡುವ ಅಗತ್ಯವಿದೆ ಎಂದರು. ಡೈರಿ ಸಹಕಾರದ ಉದಾಹರಣೆ ನೀಡಿದ ಅವರು, ಸಹಕಾರ ಚಳವಳಿಗೆ ಜನರ ಸಮಸ್ಯೆ ಪರಿಹರಿಸುವ ಶಕ್ತಿ ಇದೆ ಎಂದರು. ಸಹಕಾರ ಚಳವಳಿಯು ಭಾರತೀಯ ಸಮಾಜದೊಂದಿಗೆ ಸರಿಹೊಂದುತ್ತದೆ ಎಂದೂ ಅವರು ತಿಳಿಸಿದರು. ಬೇವು ಲೇಪಿತ ಯೂರಿಯಾ, ಜೇನು ಸಾಕಾಣಿಕೆ ಮತ್ತು ಕಡಲ ಕೃಷಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಈ ಕ್ಷೇತ್ರಗಳಲ್ಲಿ ಸಹಕಾರಿ ಚಳವಳಿ ಗಣನೀಯ ಕೊಡುಗೆ ನೀಡಬಲ್ಲದು ಎಂದರು.
ಪ್ರಧಾನಮಂತ್ರಿಯವರು ಎರಡು ಪುಸ್ತಕಗಳನ್ನೂ ಬಿಡುಗಡೆ ಮಾಡಿದರು: ಒಂದು ಲಕ್ಷ್ಮಣರಾವ್ ಇನಾಂದಾರ್ ಕುರಿತಾದುದಾಗಿದೆ ಶೀರ್ಷಿಕೆ“ನೈನ್ ಜೆಮ್ಸ್ ಆಫ್ ಇಂಡಿಯನ್ ಕೋ ಆಪರೇಟಿವ್ ಮೂಮೆಂಟ್”(ಭಾರತೀಯ ಸಹಕಾರ ಚಳವಳಿಯ ನವರತ್ನಗಳು). ಇದೇ ಸಂದರ್ಭದಲ್ಲಿ ಅವರು ಸಹಕಾರ ರಂಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
Cooperative movements are not only about systems. There is a spirit that brings people together to do something good: PM @narendramodi
— PMO India (@PMOIndia) September 21, 2017
There are several sectors where the cooperative sector can help make a positive difference: PM @narendramodi
— PMO India (@PMOIndia) September 21, 2017
It is natural for the cooperative sector to grow and shine in India: PM @narendramodi
— PMO India (@PMOIndia) September 21, 2017