BRICS Business Council Meet: PM Modi pitches for expanding business cooperation between member countries
India is changing fast into one of the most open economies in the world with FDI inflows at an all-time high: PM Modi
GST is India's biggest economic reform ever; in one stroke, a unified market of 1.3 billion people has been created: PM
Digital India, Start-Up India and Make in India are altering economic landscape of India: PM Modi

 

ಚೈನಾದ ಕ್ಸಿಯಾಮನ್ ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗಿನ ಸಂವಾದದಲ್ಲಿ (ಸೆಪ್ಟೆಂಬರ್ 4, 2017)ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ಮಾಡಿದ ಭಾಷಣ
ಘನತೆವೆತ್ತರೇ,
ಹೊಸ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರೇ,


ಬ್ರಿಕ್ಸ್ ವಾಣಿಜ್ಯ ಮಂಡಳಿಯ ಸದಸ್ಯರೇ,


ಬ್ರಿಕ್ಸ್ ವಾಣಿಜ್ಯ ಮಂಡಳಿಯ ಈ ಸಭೆಯಲ್ಲಿ ಭಾಗಿಯಾಗಲು ನಾನು ಹರ್ಷಿಸುತ್ತೇನೆ. ಬ್ರಿಕ್ಸ್ ಪಾಲುದಾರಿಕೆಯ ಮುನ್ನೋಟಕ್ಕೆ ಪ್ರಾಯೋಗಿಕ ಸ್ವರೂಪ ನೀಡುವಲ್ಲಿ ವಾಣಿಜ್ಯ ಮಂಡಳಿಯಲ್ಲಿ ನೀವು ಮಾಡುವ ಕಾರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ನೀವು ರೂಪಿಸಿದ ಪಾಲುದಾರಿಕೆ ಮತ್ತು ನೀವು ರಚಿಸಿದ ಜಾಲಗಳು ಬ್ರಿಕ್ಸ್ ನ ಪ್ರತಿ ದೇಶದಲ್ಲಿ ಆರ್ಥಿಕ ಬೆಳವಣಿಗೆಯ ಗಾಥೆಗೆ ಚೈತನ್ಯದಾಯಿಯಾಗಿವೆ. ಗೋವಾದಲ್ಲಿ ಕಳೆದ ವರ್ಷ ನಡೆದ ಇದೇ ಸಭೆಯಲ್ಲಿ, ಎನ್.ಡಿ.ಬಿ. ಮತ್ತು ಬ್ರಿಕ್ಸ್ ವಾಣಿಜ್ಯ ಮಂಡಳಿ ನಡುವೆ ಆಪ್ತ ಸಹಕಾರಕ್ಕೆ ಸಲಹೆ ಬಂದಿತ್ತು. ನೀವು ಎನ್.ಡಿ.ಬಿ.ಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ ಎಂದು ತಿಳಿಸಲು ಹರ್ಷಿಸುತ್ತೇನೆ.

ಘನತೆವೆತ್ತರೆ ಮತ್ತು ಸ್ನೇಹಿತರೇ,


ಭಾರತವು ಇಂದು ವಿಶ್ವದ ಅತಿ ಹೆಚ್ಚು ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿ ತ್ವರಿತವಾಗಿ ಬದಲಾಗುತ್ತಿದೆ. ವಿದೇಶೀ ನೇರ ಬಂಡವಾಳ ಹರಿವು ಶೇಕಡ 40ರಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಎತ್ತರ ತಲುಪಿದೆ. ಸುಲಭವಾಗಿ ವಾಣಿಜ್ಯ ನಡೆಸುವ ವಿಶ್ವಬ್ಯಾಂಕ್ ನ ಸೂಚ್ಯಂಕದಲ್ಲಿ ಭಾರತ ಮೇಲೆರಿದೆ. ಅದೇ ರೀತಿ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿಯೂ ನಾವು 32 ಸ್ಥಾನ ಏರಿದ್ದೇವೆ. ಕಳೆದ ಜುಲೈನಲ್ಲಿ ಜಾರಿಗೆ ತರಲಾದ ಸರಕು ಮತ್ತು ಸೇವೆಗಳ ತೆರಿಗೆ ಭಾರತ ಕೈಗೊಂಡ ಈವರೆಗಿನ ಅತಿ ದೊಡ್ಡ ಆರ್ಥಿಕ ಸುಧಾರಣೆಯ ಕ್ರಮವಾಗಿದೆ. ಒಂದೇ ಕ್ರಮದಲ್ಲಿ 1.3 ದಶಲಕ್ಷ ಜನರ ಏಕೀಕೃತ ಮಾರುಕಟ್ಟೆಯನ್ನು ಸೃಷ್ಟಿಸಲಾಗಿದೆ. ಡಿಜಿಟಲ್ ಇಂಡಿಯಾ, ನವೋದ್ಯಮ, ಮೇಕ್ ಇನ್ ಇಂಡಿಯಾದಂಥ ಕಾರ್ಯಕ್ರಮಗಳು ದೇಶದ ಆರ್ಥಿಕ ನಕ್ಷೆಯನ್ನೇ ಬದಲಾಯಿಸುತ್ತಿವೆ. ಅವು ಭಾರತವನ್ನು ಜ್ಞಾನಾಧಾರಿತವಾದ, ಕೌಶಲ ಬೆಂಬಲಿತ ಮತ್ತು ತಂತ್ರಜ್ಞಾನ ಚಾಲಿತ ಸಮಾಜವಾಗಿ ಪರಿವರ್ತಿಸುತ್ತಿವೆ .

ಸನ್ಮಾನ್ಯರೇ ಮತ್ತು ಸ್ನೇಹಿತರೇ,

ಬ್ರಿಕ್ಸ್ ವಾಣಿಜ್ಯ ಮಂಡಳಿ ಸಹ ವಾಣಿಜ್ಯ ಮತ್ತು ಹೂಡಿಕೆಯ ಅವಕಾಶ ಒದಗಿಸಲು, ಕೌಶಲ ಅಭಿವೃದ್ಧಿ ಉತ್ತೇಜಿಸಲು, ಮೂಲಸೌಕರ್ಯ ಅಭಿವೃದ್ಧಿಪಡಿಸಲು, ಎಸ್.ಎಂ.ಇ. ಅಭಿವೃದ್ಧಿ, ಇ ವಾಣಿಜ್ಯ ಮತ್ತು ಡಿಜಿಟಲ್ ಆರ್ಥಿಕತೆಗೆ ಆದ್ಯತೆ ನೀಡಲು ಶ್ರಮಿಸುತ್ತಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. ನಿಮ್ಮ ಮಾತುಕತೆಯ ವೇಳೆ ಹಲವು ಫಲಪ್ರದವಾದ ಶಿಫಾರಸುಗಳು ಹೊರಹೊಮ್ಮಿವೆ. ಬ್ರಿಕ್ಸ್ ಶ್ರೇಣೀಕರಣ ಸಂಸ್ಥೆ, ಇಂಧನ ಸಹಕಾರ, ಹಸಿರು ಹಣಕಾಸು ಮತ್ತು ಡಿಜಿಟಲ್ ಆರ್ಥಿಕತೆ ಸ್ಥಾಪಿಸುವ ನಿಟ್ಟಿನಲ್ಲಿನ ನಿಮ್ಮ ಕಾರ್ಯ ಉಲ್ಲೇಖನಾರ್ಹವಾಗಿದೆ. ಸರ್ಕಾರವಾಗಿ ನಾವು ನಿಮ್ಮ ಪ್ರಯತ್ನಕ್ಕೆ ಎಲ್ಲ ರೀತಿಯ ಬೆಂಬಲ ನೀಡುತ್ತದೆ ಮತ್ತು ವ್ಯವಹಾರ ಮತ್ತು ಹೂಡಿಕೆ ಸಹಕಾರವನ್ನು ಸುಧಾರಿಸುವ ನಮ್ಮ ಸಾಮಾನ್ಯ ಉದ್ದೇಶಕ್ಕೆ ನಮ್ಮನ್ನು ಆಪ್ತವಾಗಿಸಲು ನಾವು ಬ್ರಿಕ್ಸ್ ವಾಣಿಜ್ಯ ಮಂಡಳಿಯನ್ನು ಸಹ ಪರಿಗಣಿಸುತ್ತೇವೆ ಎಂದು ಹೇಳುವ ಮೂಲಕ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಧನ್ಯವಾದಗಳು .

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage