Quoteಗುಜರಾತ್ ನಲ್ಲಿ 60,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳ ಕಾರ್ಯಾರಂಭ ಮತ್ತು ಶಿಲಾನ್ಯಾಸ ನೆರವೇರಿಸಲಿರುವ ಹಾಗೂ ರಾಷ್ಟ್ರಕ್ಕೆ ಸರ್ಮಪಿಸಲಿರುವ ಪ್ರಧಾನಮಂತ್ರಿ
Quoteಕಕ್ರಾಪರ್ ಪರಮಾಣು ವಿದ್ಯುತ್ ಕೇಂದ್ರದಲ್ಲಿ ಎರಡು ಹೊಸ ಒತ್ತಡದ ಭಾರೀ ಜಲ ರಿಯಾಕ್ಟರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ - ಕೆಎಪಿಎಸ್ -3 ಮತ್ತು ಕೆಎಪಿಎಸ್ - 4
Quoteಗುಜರಾತ್ ನಲ್ಲಿ ರಸ್ತೆ, ರೈಲು, ಇಂಧನ, ಆರೋಗ್ಯ, ಅಂತರ್ಜಾಲ ಸಂಪರ್ಕ, ನಗರಾಭಿವೃದ್ಧಿ, ಜಲ ಸಂಪನ್ಮೂಲ, ಪ್ರವಾಸೋದ್ಯಮ ಒಳಗೊಂಡಂತೆ ಪ್ರಮುಖ ಕ್ಷೇತ್ರಗಳಿಗೆ ಪುಷ್ಟಿ ನೀಡಲಿರುವ ಯೋಜನೆಗಳು
Quoteವಡೋದರ ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ ಮತ್ತು ಭಾರತ್ ನೆಟ್ ಹಂತ 2 ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆ
Quoteನವಸಾರಿಯಲ್ಲಿ ಪಿಎಂ ಮಿತ್ರ ಪಾರ್ಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ
Quoteಅಂಬಾಜಿಯಲ್ಲಿ ಕೆರೆ ಮತ್ತು ರಿಂಚದಿಯಾ ಮಹದೇವ್ ದೇವಾಲಯ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಮಂತ್ರಿ
Quoteಅಹ್ಮದಾಬಾದ್ ನಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ
Quoteಮಹೇಸಾನದ ವಲಿನಾಥ್ ಮಹದೇವ್ ದೇವಾಲಯದಲ್ಲಿ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಸಲಿರುವ ಪ್ರಧಾನಮಂತ್ರಿ
Quote13,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಿರುವ ಪ್ರಧಾನಮಂತ್ರಿ - ವಾರಣಸಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮತ್ತೊಂದು ಪರಿವರ್ತನೆಗೆ ಇದು ಮಹತ್ವದ ಹೆಜ್ಜೆ
Quoteವಾರಣಸಿಯಲ್ಲಿ ರಸ್ತೆ, ಕೈಗಾರಿಕೆ, ಪ್ರವಾಸೋದ್ಯಮ, ಜವಳಿ, ಆರೋಗ್ಯ ವಲಯಗಳಿಗೆ ಉತ್ತೇಜನ
Quoteಸಂತ ಗುರು ರವಿದಾಸ್ ಜನ್ಮಸ್ಥಳದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿರುವ ಪ್ರಧಾನಮಂತ್ರಿ
Quoteಬಿಎಚ್ ಯುನ ಸ್ವಾತಂತ್ರ್ಯ ಸಭಾಗರ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಫೆಬ್ರವರಿ 22 ಮತ್ತು 23 ರಂದು ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಫೆಬ್ರವರಿ 22 ರ ಬೆಳಿಗ್ಗೆ 10:45ಕ್ಕೆ ಪ್ರಧಾನಮಂತ್ರಿಯವರು ಅಹ್ಮದಾಬಾದ್ ನಲ್ಲಿ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿ.ಸಿ.ಎಂ.ಎಂ.ಎಫ್). ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ನಂತರ 12:45 ಕ್ಕೆ ಪ್ರಧಾನಮಂತ್ರಿಯವರು ಮಹೆಸನಾಗೆ ತಲುಪಲಿದ್ದು, ವಲಿನಾಥ್ ಮಹದೇವ್ ದೇವಾಲಯದಲ್ಲಿ ದರ್ಶನ ಪಡೆಯಲಿದ್ದಾರೆ ಮತ್ತು ಪೂಜೆ ಸಲ್ಲಿಸಲಿದ್ದಾರೆ. 1 ಗಂಟೆ ಸುಮಾರಿಗೆ ಮಹಸೆನಾದ ತರಭ್ ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ 13,500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸಂಜೆ 4:15 ಕ್ಕೆ ಪ್ರಧಾನಮಂತ್ರಿಯವರು ನವಸಾರಿಗೆ ತೆರಳಲಿದ್ದು, ಅಲ್ಲಿ 47,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸುವರು ಮತ್ತು ದೇಶಕ್ಕೆ ಸಮರ್ಪಿಸುವರು. ಸಂಜೆ 6:15 ಕ್ಕೆ ಪ್ರಧಾನಮಂತ್ರಿಯವರು ಕಕ್ರಾಪರ್ ಪರಮಾಣು ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ಫೆಬ್ರವರಿ 23 ರಂದು ಪ್ರಧಾನಮಂತ್ರಿಯವರು ವಾರಣಸಿಯ ಬಿಎಚ್ ಯು ನಲ್ಲಿ ಸಂಸದರ ಸಂಸ್ಕೃತಿ ಪ್ರತಿಯೋಗಿತಾ ಸ್ವತಂತ್ರ ಸಭಾಗರ್ ನಲ್ಲಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಮಾನ ವಿತರಿಸಲಿದ್ದಾರೆ. ಬೆಳಿಗ್ಗೆ 11:15 ಕ್ಕೆ ಸಂತ ಗುರು ರವಿದಾಸ್ ಅವರ ಜನ್ಮ ಸ್ಥಳದಲ್ಲಿ ಪ್ರಧಾನಮಂತ್ರಿಯವರು ದರ್ಶನ ಪಡೆಯಲಿದ್ದಾರೆ ಮತ್ತು ಪೂಜೆ ಸಲ್ಲಿಸಲಿದ್ದಾರೆ. 11:30 ಕ್ಕೆ ಪ್ರಧಾನಮಂತ್ರಿಯವರು ಸಂತ ಗುರು ರವಿದಾಸ್ ಅವರ 647 ನೇ ಜನ್ಮ ಶತಮಾನೋತ್ಸವದ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅಪರಾಹ್ನ 1:45 ಕ್ಕೆ ಪ್ರಧಾನಮಂತ್ರಿಯವರು ವಾರಣಸಿಯಲ್ಲಿ 13,000 ಕೋಟಿ ರೂಪಾಯಿ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ.

ಗುಜರಾತ್ ನಲ್ಲಿ ಪ್ರಧಾನಮಂತ್ರಿ

ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್) ಸುವರ್ಣ ಮಹೋತ್ಸವದಲ್ಲಿ ಪ್ರಧಾನಮಂತ್ರಿಯವರು ಭಾಗಿಯಾಗಲಿದ್ದಾರೆ. ಅಹ್ಮದಾಬಾದ್ ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ - ಜಿಸಿಎಂಎಂಎಫ್ ಸಮಾರಂಭದಲ್ಲಿ 1.25 ಲಕ್ಷಕ್ಕೂ ಅಧಿಕ ರೈತರು ಸಾಕ್ಷಿಯಾಗಲಿದ್ದಾರೆ. ಜಿಸಿಎಂಎಂಎಫ್ ರಾಜ್ಯದ ಸಹಕಾರ ವಲಯದ ಪುಟಿದೇಳುವ, ಉದ್ಯಮಶೀಲತಾ ಮನೋಭಾವನೆ ಮೂಡಿಸುವ ಮತ್ತು ರೈತರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಅಮೂಲ್ ಅನ್ನು ವಿಶ್ವದ ಪ್ರಬಲ ಡೈರಿ ಬ್ರ್ಯಾಂಡ್ ಗಳಲ್ಲಿ ಪ್ರಮುಖ ಸ್ಥಾನ ದೊರಕಿಸಿಕೊಟ್ಟಿರುವುದು ವಿಶೇಷವಾಗಿದೆ.

 

ಗುಜರಾತ್ ನ ಮಹೆಸನಾ ಮತ್ತು ನವ್ಸಾರಿಯಲ್ಲಿ ಎರಡು ಸಾರ್ವಜನಿಕ ಸಮಾರಂಭಗಳು ನಡೆಯಲಿವೆ. ಗುಜರಾತ್ ನಲ್ಲಿ ರಸ್ತೆ, ರೈಲು, ಇಂಧನ, ಆರೋಗ್ಯ, ಅಂತರ್ಜಾಲ ಸಂಪರ್ಕ, ನಗರಾಭಿವೃದ್ಧಿ, ಜಲ ಸಂಪನ್ಮೂಲ, ಪ್ರವಾಸೋದ್ಯಮ ಒಳಗೊಂಡಂತೆ ಪ್ರಮುಖ ಕ್ಷೇತ್ರಗಳಿಗೆ ಪುಷ್ಟಿ ನೀಡಲಿರುವ ಯೋಜನೆಗಳು ಇವಾಗಿದ್ದು, ಇವು ಗಾಂಧಿನಗರ, ಅಹ್ಮದಾಬಾದ್, ಬನಸ್ಕಾಂಥ, ಆನಂದ್, ಮಹೆಸನಾ, ಕಚ್ಛ್, ಖೇಡ, ಭಹ್ರೂಚ್, ತಾಪಿ, ವಡೋದರ, ಸೂರತ್, ನವಸಾರಿ, ಪಂಚ್ ಮಹಲ್, ವಲ್ಸದ್ ಮತ್ತು ನರ್ಮಾದ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುತ್ತವೆ.

ಮಹೆಸನಾದಲ್ಲಿ ಸಾರ್ವಜನಿಕ ಸಮಾರಂಭ ಆಯೋಜಿಸಿದ್ದು, ಪ್ರಧಾನಮಂತ್ರಿಯವರು ಭಾರತ್ ನೆಟ್ ಹಂತ - 2, ಗುಜರಾತ್ ಫೈಬರ್ ಗ್ರಿಡ್ ಸಂಪರ್ಕ ಜಾಲ ಲಿಮಿಟೆಡ್ ನ ಎರಡು ಪ್ರಮುಖ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದು, ಇದರಿಂದ 8,000 ಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಲ್ಲಿ ಹೈ ಸ್ಪೀಡ್ ಅಂತರ್ಜಾಲ ಸೌಲಭ್ಯ ದೊರೆಯಲಿದೆ. ಮಹೆಸನಾ ಮತ್ತು ಬನಸ್ಕಾಂಥದಲ್ಲಿ ರೈಲುಗಳ ದಿಪಥ ಮಾರ್ಗ, ಗೇಜ್ ಪರಿವರ್ತನೆ, ಹೊಸ ಬ್ರಾಡ್ ಗೇಜ್ ಗಳಂತ ಬಹುಹಂತದ ಯೋಜನೆಗಳು, ಖೇಡ, ಅಹ್ಮದಾಬಾದ್, ಗಾಂಧಿನಗರ್, ಮಹಸೆನಾದಲ್ಲಿ ಬಹು ಹಂತದ ರಸ್ತೆಗಳು, ಗಾಂಧಿನಗರ ಗುಜರಾತ್ ಜೈವಿಕ ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಮುಖ ಶೈಕ್ಷಣಿಕ ಕಟ್ಟಡ, ಬನಸ್ಕಾಂಥದಲ್ಲಿ ಬಹುಹಂತದ ನೀರು ಪೂರೈಕೆ ಯೋಜನೆಗಳು ಇದರಲ್ಲಿ ಸೇರಿವೆ.

ಆನಂದ್ ಜಿಲ್ಲೆಯಲ್ಲಿ ಹೊಸ ಜಿಲ್ಲಾ ಮಟ್ಟದ ಆಸ್ಪತ್ರೆ ಮತ್ತು ಆಯುರ್ವೇದ ಆಸ್ಪತ್ರೆ ಸೇರಿದಂತೆ ಹಲವರು ಪ್ರಮುಖ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬನಸ್ಕಾಂಥ ವಲಯದ ಅಂಬಾಜಿಯಲ್ಲಿ ಕೆರೆ ಮತ್ತು ರಿಂಚದಿಯಾ ಮಹದೇವ್ ದೇವಾಲಯ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಗಾಂಧಿನಗರ್, ಅಹ್ಮದಾಬಾದ್, ಬನಸ್ಕಾಂಥ ಮತ್ತು ಮಹೆಸನಾದಲ್ಲಿ ಬಹು ಹಂತದ ರೈಲ್ವೆ ಯೋಜನೆಗಳು, ದೀಸಾದಲ್ಲಿ ವಾಯುಪಡೆ ನಿಲ್ದಾಣದ ರನ್ ವೇ, ಅಹ್ಮದಾಬಾದ್ ನಲ್ಲಿ ಮಾನವ ಮತ್ತು ಜೈವಿಕ ವಿಜ್ಞಾನ ಗ್ಯಾಲರಿ, ಗಿಪ್ಟ್ ಸಿಟಿಯಲ್ಲಿ ಗುಜರಾತ್ ಜೈವಿಕತಂತ್ರಜ್ಞಾನ ಸಂಶೋಧನಾ ಕೇಂದ್ರ (ಜಿಬಿಆರ್ ಸಿ)ದ ನೂತನ ಕಟ್ಟಡ, ಗಾಂಧಿನಗರ, ಅಹ್ಮದಾಬಾದ್ ಮತ್ತು ಬನಸ್ಕಾಂಥದಲ್ಲಿ ನೀರು ಪೂರೈಕೆ ಸುಧಾರಿಸುವ ಬಹುಹಂತದ ಯೋಜನೆಗಳು ಇದರಲ್ಲಿ ಸೇರಿವೆ.

ನವಸಾರಿಯಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ದೇಶಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ಸರ್ಮಪಿಸಲಿದ್ದು, ವಡೋದರ ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ, ಬರೂಚ್, ನವಸಾರಿ, ವಲ್ಸದ್ ಭಾಗದಲ್ಲಿ ಬಹು ಹಂತದ ರಸ್ತೆ ಯೋಜನೆಗಳು, ತಾಪಿಯಲ್ಲಿ ಬಹುಹಂತದ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಬರೂಚ್ ಮತ್ತಿತರೆಡೆಗಳಲ್ಲಿ ಒಳಚರಂಡಿ ಸೇರಿ ಹಲವು ಯೋಜನೆಗಳು ಇದರಲ್ಲಿ ಸೇರಿವೆ. ಪಿಎಂ ಮೆಗಾ ಸಮಗ್ರ ಜವಳಿ ವಲಯ ಮತ್ತು ಸಿದ್ಧ ಉಡುಪು (ಪಿಎಂ ಮಿತ್ರ) ಕಾಮಗಾರಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ.

ಬರೂಚ್ - ದಹೆಜ್ ಎಕ್ಸ್ ಪ್ರೆಸ್ ಹೆದ್ದಾರಿ ನಿಯಂತ್ರಣ ಯೋಜನೆಗೆ ಈ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ವಡೋದರದಲ್ಲಿ ಬಹು ಹಂತದ ಯೋಜನೆಗಳಾದ ಎಸ್.ಎಸ್.ಜಿ ಆಸ್ಪತ್ರೆ, ವಡೋದರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸೂರತ್, ವಡೋದರ ಮತ್ತು ಪಂಚ್ ಮಹಲ್ ನಲ್ಲಿ ರೈಲ್ವೆ ಗೇಜ್ ಪರಿವರ್ತನೆ ಯೋಜನೆಗಳು, ವಲ್ಸದ್ ನಲ್ಲಿ ಹಲವಾರು ನೀರು ಪೂರೈಕೆ ಯೋಜನೆಗಳು, ಶಾಲೆ ಮತ್ತು ವಸತಿ ನಿಲಯದ ಕಟ್ಟಡ ಹಾಗೂ ನರ್ಮದಾ ಜಿಲ್ಲೆಯಲ್ಲಿ ಇತರೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಸೂರತ್ ಮಹಾನಗರ ಪಾಲಿಕೆ, ಸೂರತ್ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಡ್ರೀಮ್ ಸಿಟಿ ಯೋಜನೆಯಡಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.

ಕಕ್ರಾಪರ್ ಪರಮಾಣು ವಿದ್ಯುತ್ ಕೇಂದ್ರದಲ್ಲಿ ಎರಡು ಹೊಸ ಒತ್ತಡದ ಭಾರೀ ಜಲ ರಿಯಾಕ್ಟರ್ ಗಳನ್ನು - (ಕೆಎಪಿಎಸ್) ಘಟಕ -3 ಮತ್ತು (ಕೆಎಪಿಎಸ್) ಘಟಕ - 4 ರಾಷ್ಟ್ರಕ್ಕೆ ಸಮರ್ಪಿಸಲಿದ್ಧಾರೆ. ಇದನ್ನು ಬಾರತೀಯ ಅಣು ಇಂಧನ ನಿಗಮ (ಎನ್.ಪಿ.ಸಿ.ಐ.ಎಲ್), 22,500 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ನಿರ್ಮಿಸಿದೆ. ಕೆಎಪಿಎಸ್ ಘಟಕ -3 ಮತ್ತು ಕೆಎಪಿಎಸ್ ಘಟಕ - 4 ಯೋಜನೆಗಳನ್ನು 1400 (700*2) ಮೆಗಾವ್ಯಾಟ್ ಸಂಚಿತ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದೆ. ಎಂಡಬ್ಲ್ಯು ಮತ್ತು ಅತಿ ದೊಡ್ಡ ದೇಶೀಯ ಕಾರ್ಯಕ್ರಮ ಪಿಎಚ್ ಡಬ್ಲ್ಯುಆರ್ ಗಳು ಇದರಲ್ಲಿ ಸೇರಿವೆ. ಇವು ಮೊದಲ ರೀತಿಯ ರಿಯಾಕ್ಟರ್ ಗಳು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯತೆಗಳೊಂದಿಗೆ ವಿಶ್ವದ ಅತ್ಯುತ್ತಮವಾದವುಗಳೊಂದಿಗೆ ಹೋಲಿಸಬಹುದಾಗಿದೆ. ಒಟ್ಟಾರೆಯಾಗಿ ಈ ಎರಡು ರಿಯಾಕ್ಟರ್ ಗಳು ವರ್ಷಕ್ಕೆ 10.4 ಶತಕೋಟಿ ಯೂನಿಟ್ ಶುದ್ಧ ವಿದ್ಯುತ್ ಅನ್ನು ಉತ್ಪಾದಿಸುತ್ತವೆ ಮತ್ತು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಚತ್ತೀಸ್ ಘಡ, ಗೋವಾ ಮತ್ತು ಕೇಂದ್ರಾಡಳಿ ಪ್ರದೇಶಗಳಾದ ದಾದ್ರಾ ಹಾಗೂ ನಾಗರ್ ಹವೇಲಿ, ದಮನ್ ಮತ್ತು ದಿಯು ವಿನಂತಹ ಪ್ರದೇಶಗಳ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ.

ವಾರಣಸಿಯಲ್ಲಿ ಪ್ರಧಾನಮಂತ್ರಿ

ಕಳೆದ 2014 ರಿಂದ ಪ್ರಧಾನಮಂತ್ರಿಯವರು ವಾರಣಸಿ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳನ್ನು ಕೇಂದ್ರೀಕರಿಸಿದ್ದಾರೆ. ರಸ್ತೆ, ರೈಲು, ವಿಮಾನಯಾನ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನಗರಾಭಿವೃದ್ಧಿ ಮತ್ತು ನೈರ್ಮಲ್ಯ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಪ್ರಧಾನಮಂತ್ರಿಯವರು ವಾರಣಸಿಯಲ್ಲಿ 13,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಿದ್ದಾರೆ.

ವಾರಣಸಿಯಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಪ್ರಧಾನಮಂತ್ರಿಯವರು ನಾಲ್ಕು ಪಥದ ಗಾರ್ಗಾರ - ಸೇತುವೆ - ವಾರಣಸಿ ವಿಭಾಗದ ಎನ್ಎಚ್-233 ಸೇರಿ ಬಹು ಹಂತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಾಲ್ಕು ಪಥದ ಪ್ಯಾಕೇಜ್ - 1 ಸುಲ್ತಾನ್ ಪುರ್ - ವಾರಣಸಿ ವಿಭಾಗದ ಎನ್ಎಚ್-56, ಆರು ಪಥದ ಹಂತ - 1 ವಾರಣಸಿ - ಔರಂಗಾಬಾದ್ ವಿಭಾಗದ ಎನ್ಎಚ್-19, ನಾಲ್ಕು ಪಥದ ಪ್ಯಾಕೇಜ್ - 1 ವಾರಣಸಿ - ಹನುಮಾನ್ ಸೆಕ್ಷನ್ ಎನ್ಎಚ್ -35 ಮತ್ತು ಬಾಬತ್ ಪುರ್ ನ ವಾರಣಸಿ - ಜೌನ್ಪುರ್ ಆರ್ ಒ ಬಿ ರೈಲ್ವೆ ವಿಭಾಗ ಯೋಜನೆಗಳು ಇದರಲ್ಲಿ ಸೇರಿವೆ. ಜೊತೆಗೆ ವಾರಣಸಿ - ರಾಂಚಿ - ಕೋಲ್ಕತ್ತಾ ಎಕ್ಸ್ ಪ್ರೆಸ್ ಹೆದ್ದಾರಿ ಪ್ಯಾಕೇಜ್ - 1 ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಮಂತ್ರಿಯವರು ಸೇವಾಪುರಿಯಲ್ಲಿ ಎಚ್.ಪಿ.ಸಿ.ಎಲ್ ನಲ್ಲಿ ಅಡುಗೆ ಅನಿಲ ಬಾಟ್ಲಿಂಗ್ ಘಟಕವನ್ನು ಉದ್ಘಾಟಿಸಲಿದ್ದಾರೆ. ಕಾರ್ಖೀಯೋನ್ ನಲ್ಲಿ ಯುಪಿಎಸ್ಐಡಿಎ ಕೃಷಿ ಪಾರ್ಕ್, ಕಾರ್ಖೀಯೋನ್ ನಲ್ಲಿ ಯುಪಿಎಸ್ಐಡಿಎ ಕೃಷಿ ಪಾರ್ಕ್ ನ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ನೇಕಾರರಿಗಾಗಿ ರೇಷ್ಮೆ ನೂಲು ಸಾಮಾನ್ಯ ಮುದ್ರಣ ಸೌಲಭ್ಯ ಕೇಂದ್ರದ ಯೋಜನೆಗಳನ್ನು ಶುಭಾರಂಭ ಮಾಡಲಿದ್ದಾರೆ.

ವಾರಣಸಿಯಲ್ಲಿ ಬಹುಹಂತದ ನಗರಾಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದು, ರಮಣದಲ್ಲಿ ಎನ್.ಟಿ.ಪಿ.ಸಿಯಿಂದ ನಗರ ತ್ಯಾಜ್ಯದಿಂದ ಕಲ್ಲಿದ್ದಲು ಘಟಕ, ವರುಣ ಪ್ರದೇಶದಲ್ಲಿ ನೀರು ಪೂರೈಕೆ ಸಂಪರ್ಕ ಜಾಲವನ್ನು ಮೇಲ್ದರ್ಜೆಗೇರಿಸುವ ಮತ್ತು ಆನ್ ಲೈನ್ ಮೂಲಕ ಹೊರ ಹರಿವಿನ ಮೇಲೆ ನಿಗಾ ವಹಿಸುವ ಹಾಗೂ ಎಸ್.ಸಿ.ಎ.ಡಿ.ಎ ನಿಂದ ಎಸ್.ಟಿ.ಪಿಗಳು ಮತ್ತು ಒಳಚರಂಡಿಯಿಂದ ಸ್ವಯಂ ಚಾಲಿತವಾಗಿ ಪಂಪ್ ಮಾಡುವ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ವಾರಣಸಿಯಲ್ಲಿ ಕೆರೆಗಳು ಮತ್ತು ಪಾರ್ಕ್ ಗಳನ್ನು ಸೌಂದರ್ಯೀಕರಣಗೊಳಿಸುವ ಬಹು ಹಂತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಡಿಜಿಟಲ್ ಮೂಲಕ ನಗರ ಕಾರ್ಯಕ್ರಮಗಳಿಗೆ 3-ಡಿ ನಕ್ಷೆ ವಿನ್ಯಾಸ ರೂಪಿಸುವ ಮತ್ತು ದತ್ತಾಂಶ ಕಾರ್ಯಕ್ರಮಗಳಿಗೆ ಪ್ರಧಾನಮಂತ್ರಿಯವರು ಚಾಲನೆ ಕೊಡಲಿದ್ದಾರೆ.

ವಾರಣಸಿಯಲ್ಲಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮ ಕುರಿತಾದ ಬಹುಹಂತದ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಪಂಚ್ಕೋಶಿ ಪರಿಕ್ರಮ ಮಾರ್ಗ್ ನ ಐದು ಪಡವಾಗಳು ಮತ್ತು ಪವನ್ ಪಾಥ್ ನ ಹತ್ತು ಧಾರ್ಮಿಕ ಯಾತ್ರೆಗಳ ಮರು ಅಭಿವೃದ್ಧಿ, ಸಾರ್ವಜನಿಕ ಸೌಲಭ್ಯ ವೃದ್ಧಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ವಾರಣಸಿ ಮತ್ತು ಅಯೋಧ್ಯೆಯಲ್ಲಿ ಭಾರತೀಯ ಒಳನಾಡು ಜಲ ಸಾರಿಗೆ (ಐಡಬ್ಲ್ಯುಎಐ) ವಿದ್ಯುತ್ ಚಾಲಿತ ಹಡಗು ಸೇವೆಗೆ ಚಾಲನೆ, ಏಳು ವಸ್ತ್ರ ಬದಲಾಯಿಸುವ ಕೊಠಡಿಗಳು, ತೇಲುವ ಜಟ್ಟಿಗಳು ಮತ್ತು ನಾಲ್ಕು ಸಮುದಾಯ ಜಟ್ಟಿಗಳು ಇದರಲ್ಲಿ ಸೇರಿವೆ. ಹಸಿರು ಇಂಧನ ಬಳಕೆಯೊಂದಿಗೆ ವಿದ್ಯುತ್ ಚಾಲಿತ ಕ್ಯಾಟರ್ ಮನ್ ಮೂಲಕ ಪ್ರವಾಸೋದ್ಯಮದ ಅನುಭವವನ್ನು ಇವು ಹೆಚ್ಚಿಸಲಿವೆ. ಐಡಬ್ಲ್ಯುಎಐ ಮೂಲಕ ಹದಿಮೂರು ಸಮುದಾಯ ಜಟ್ಟಿಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಬಲ್ಲಿಯಾದಲ್ಲಿ ತ್ವರಿತವಾಗಿ ಪಾಂಟೂನ್ ತೆರೆಯುವ ಕಾರ್ಯವಿಧಾನಕ್ಕೂ ಚಾಲನೆ ನೀಡಲಿದ್ದಾರೆ.

ವಾರಣಸಿಯಲ್ಲಿ ಪ್ರಸಿದ್ಧ ಜವಳಿ ಕ್ಷೇತ್ರಕ್ಕೆ ಉತ್ತೇಜನ ಒದಗಿಸುವ ಮೂಲಕ ಪ್ರಧಾನಮಂತ್ರಿಯವರು ವಾರಣಸಿಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ಪ್ಯಾಷನ್ ಟೆಕ್ನಾಲಜಿ (ನಿಪ್ಟ್) ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಹೊಸ ಸಂಸ್ಥೆ ಜವಳಿ ವಲಯದಲ್ಲಿ ಶಿಕ್ಷಣ ಮತ್ತು ತರಬೇತಿ ಮೂಲ ಸೌಕರ್ಯವನ್ನು ಹೆಚ್ಚಿಸಲಿದೆ.

ವಾರಣಸಿಯಲ್ಲಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ವಾರಣಸಿಯಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಬಿಎಚ್ ಯು ನಲ್ಲಿ ಹಿರಿಯ ನಾಗರಿಕರ ರಾಷ್ಟ್ರೀಯ ಕೇಂದ್ರದ ನಿರ್ಮಾಣಕ್ಕೆ ಶುಭಾರಂಭ ಮಾಡಲಿದ್ದಾರೆ. ಸಿರ್ಗಾ ಕ್ರೀಡೆಗಳ ಕ್ರೀಡಾಂಗಣ ಹಂತ - 1 ಮತ್ತು ಜಿಲ್ಲಾ ರೈಫಲ್ ಶೂಟಿಂಗ್ ರೇಂಜ್ ಕೇಂದ್ರದ ನಿರ್ಮಾಣಕ್ಕೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದು, ಇದರಿಂದ ನಗರದಲ್ಲಿ ಕ್ರೀಡಾ ಮೂಲ ಸೌಕರ್ಯ ವೃದ್ಧಿಗೆ ಸಹಕಾರಿಯಾಗಲಿದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಸ್ವತಂತ್ರ ಸಭಗರ್ ನಲ್ಲಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲಿರುವ ಅವರು, ಕಾಶಿ ಸಂಸದ್ ಛಾಯಾಚಿತ್ರ ಪ್ರತಿಯೋಗಿತ ಮತ್ತು ಕಾಶಿ ಸಂಸದ್ ಗ್ಯಾನ್ ಪ್ರತಿಯೋಗಿತ ಮತ್ತು ಕಾಶಿ ಸಂಸದ್ ಸಂಸ್ಕೃತ್ ಪ್ರತಿಯೋಗಿತದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಿದ್ದಾರೆ. ವಾರಣಸಿಯಲ್ಲಿ ಅವರು ಪುಸ್ತಕಗಳು, ಸಮವಸ್ತ್ರಗಳು, ಸಂಗೀತ ಉಪಕರಣಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕಾಶಿ ಸಂಸದ್ ಛಾಯಾಚಿತ್ರ ಪ್ರತಿಯೋಗಿತಾ ಗ್ಯಾಲರಿಗೆ ಭೇಟಿ ನೀಡಿಲಿದ್ದಾರೆ ಮತ್ತು “ಸನ್ವಾರ್ತಿ ಕಾಶಿ”ಯಲ್ಲಿ ಛಾಯಾಚಿತ್ರ ಸ್ಪರ್ಧೆಗಾಗಿ ನೋಂದಾಯಿತರಾದವರೊಂದಿಗೆ ಸಂವಾದ ನಡೆಸಲಿದ್ದಾರೆ.

ಗೋವರ್ಧನ ಪುರ ಸಮೀಪದ ಬಿಎಚ್ ಯುನಲ್ಲಿ ಸಂತ ಗುರು ರವಿದಾಸ್ ಅವರ ಜನ್ಮ ಸ್ಥಳ ದೇವಾಲಯ ಇರುವ ರವಿದಾಸ್ ಪಾರ್ಕ್ ನಲ್ಲಿ ಹೊಸದಾಗಿ ಅಳವಡಿಸಿರುವ ಸಂತ ರವಿದಾಸದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಸಂತ ರವಿದಾಸರ ಜನ್ಮ ಸ್ಥಳದಲ್ಲಿ 32 ಕೋಟಿ ರೂಪಾಯಿ ಮೊತ್ತದ ಹಲವಾರು ಅಭಿವೃದ್ಧಿ ಯೋಜನೆಗಳು ಮತ್ತು 62 ಕೋಟಿ ರೂಪಾಯಿ ಮೊತ್ತದಲ್ಲಿ ರವಿದಾಸ್ ವಸ್ತುಸಂಗ್ರಹಾಲಯದ ಸೌಂದರ್ಯೀಕರಣದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

 

  • Raju Saha April 30, 2024

    joy Shree ram
  • Vivek Kumar Gupta April 30, 2024

    नमो .....................🙏🙏🙏🙏🙏
  • Vivek Kumar Gupta April 30, 2024

    नमो .................................🙏🙏🙏🙏🙏
  • Pradhuman Singh Tomar April 23, 2024

    BJP
  • Shabbir meman April 10, 2024

    🙏🙏
  • gauri girole March 17, 2024

    मोदी है तो मुमकीन है ......
  • Harish Awasthi March 16, 2024

    मोदी है तो मुमकिन है
  • Sukhen Das March 15, 2024

    Naman
  • Dhajendra Khari March 13, 2024

    Today, I launched the PM-SURAJ national portal through which the disadvantaged section of society can directly receive financial assistance : PM Modi
  • Ashutosh Sharma March 06, 2024

    Jai Shree Ram
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Average Electricity Supply Rises: 22.6 Hours In Rural Areas, 23.4 Hours in Urban Areas

Media Coverage

India’s Average Electricity Supply Rises: 22.6 Hours In Rural Areas, 23.4 Hours in Urban Areas
NM on the go

Nm on the go

Always be the first to hear from the PM. Get the App Now!
...
PM pays tributes to revered Shri Kushabhau Thackeray in Bhopal
February 23, 2025

Prime Minister Shri Narendra Modi paid tributes to the statue of revered Shri Kushabhau Thackeray in Bhopal today.

In a post on X, he wrote:

“भोपाल में श्रद्धेय कुशाभाऊ ठाकरे जी की प्रतिमा पर श्रद्धा-सुमन अर्पित किए। उनका जीवन देशभर के भाजपा कार्यकर्ताओं को प्रेरित करता रहा है। सार्वजनिक जीवन में भी उनका योगदान सदैव स्मरणीय रहेगा।”