ನೆರೆದಿರುವ ಎಲ್ಲ ವಿಶೇಷ ಗಣ್ಯರೇ,
ಪ್ರಪ್ರಥಮವಾಗಿ ಐವರು ಪ್ರಶಸ್ತಿ ವಿಜೇತರಿಗೆ ನಾನು ಹೃದಯಾಳದಿಂದ ಶುಭ ಹಾರೈಸಲು ಬಯಸುತ್ತೇನೆ. ದೇಶ ಈ ಸಮಾರಂಭವನ್ನು ಟಿವಿಯಲ್ಲಿ ವೀಕ್ಷಿಸುತ್ತಿರಬೇಕು ಮತ್ತು ಇವರು ನಾವು ದಿನಂಪ್ರತಿ ಕಾಣುವ ಸಂಸದರಲ್ಲವೇ! ಎಂದು ಆಶ್ಚರ್ಯ ಪಡುತ್ತಿರಬೇಕು. ಎಲ್ಲರೂ ಶಾಂತ ಮತ್ತು ಸಂಯೋಜಿತರಾಗಿರುವ ಈ ಸಮಾರಂಭಕ್ಕೆ ಸಾಕ್ಷಿಯಾಗಲು ಉಪರಾಷ್ರ್ಟಪತಿ ಮತ್ತು ಮ್ಯಾಡಮ್ ಸ್ಪೀಕರ್ ಅವರೂ ನಿಜವಾಗಿಯೂ ಸಂತೋಷ ಪಡುತ್ತಿರಬೇಕು. ಇಂತಹ ಸನ್ನಿವೇಶ ಸಂಸತ್ತಿನ ಎರಡೂ ಮನೆಗಳಲ್ಲೂ ಇದೆಯೆಂದು ಮತ್ತು ಜನಸಾಮಾನ್ಯರ ದುಗುಡಗಳ ಜತೆ ಬೆರೆತಿರುವ ನಾವು ಮತ್ತು ನಮ್ಮ ಸಂಸದರೆಲ್ಲರಿಗೂ ಈ ಸಂದರ್ಭದಲ್ಲಿ ಮಾತನಾಡುವ ಅವಕಾಶ ದೊರೆಯಲಿ ಎಂದು ನಾನು ಆಶಿಸುತ್ತೇನೆ. ಅವರ ಸಮಸ್ಯೆಗಳಿಗೆ ಪ್ರಾಧಾನ್ಯತೆ ನೀಡಲು ಸರಕಾರ ಕಟಿಬದ್ಧವಾಗಿರಬೇಕು. ಬಡಜನರು ,ಹಳ್ಳಿಗಳ ಮತ್ತು ರೈತರ ಕೂಗು ಸಂಸದರಿಂದಲೇ ಸರಕಾರಕ್ಕೆ ತಲುಪಬೇಕು ಮತ್ತು ಸರಕಾರ ಅವರ ಭಾವನೆಗಳೊಡನೆ ಅನುಭೂತಿಯನ್ನು ಹೊಂದಿರಬೇಕು. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯೋನ್ಮುಖವಾಗಬೇಕು. ದುರಾದೃಷ್ಟವಶಾತ್ ಸಂಸದರ ಇಂತಹ ಅವಕಾಶ ಆಗಾಗ್ಗೆ ಕಳೆದುಹೋಗುತ್ತಿದೆ. ಸಾಕಷ್ಟು ಕಠಿಣ ಪರಿಶ್ರಮದಿಂದ ಸಂಸದರು ತಮ್ಮ ಪಾರಿಪೂರ್ಣತೆಯ ಕಾರ್ಯಕ್ಷೇತ್ರವನ್ನು ಗಳಿಸಿಕೊಂಡಿರಬೇಕು. ಅವರು ನಿಶ್ಚಿತವಾಗಿಯೂ ನಿರ್ವಹಿಸುವ ಕಾರ್ಯದಲ್ಲಿ ಪರಿಪಕ್ವವಾಗಿರುತ್ತಾರೆ; ತಮ್ಮ ಸ್ವ –ಕಾರ್ಯಕ್ಷೇತ್ರದಲ್ಲಿ ಅವರಿಗೆ ಹಿಡಿತವಿರುತ್ತದೆ. ಗಲಭೆ, ಗೊಂದಲ ಮತ್ತು ಗದ್ದಲಗಳು ದೇಶದ ಮೇಲೆ ಪರಿಣಾಮ ಬೀರಿದಷ್ಟು ಸರಕಾರದ ಮೇಲೆ ಪರಿಣಾಮ ಬೀರಿಲ್ಲ. ಇದರಿಂದಾಗಿ ಕಠಿಣ ಪರಿಶ್ರಮ ಮತ್ತು ಹೋರಾಟ ನಡೆಸಿ ಜನರ ಸಮಸ್ಯೆಗಳ ಕುರಿತು ಮಾತನಾಡಬೇಕೆಂದು ಇಲ್ಲಿಗೆ ಬಂದಿರುವ ಪ್ರತಿನಿಧಿಗಳಿಗೆ ಮಾತನಾಡುವ ಅವಕಾಶ ದೊರೆಯದೇ ಇರುವುದು ಅವರಿಗೆ ಭಾರೀ ಹಾನಿಯುಂಟುಮಾಡಿದೆ. ಇದು ಅವರು ಪ್ರತಿನಿಧಿಸುವ ಪ್ರದೇಶ ಮತ್ತು ಸ್ಥಳಿಯ ಜನರಿಗೆ ನಷ್ಟ. ಇಂತಹ ಗೊಂದಲಗಳನ್ನು ಟಿವಿಯಲ್ಲಿ, ಕೆಲ ನಿಮಿಷಗಳು, ಗಂಟೆಗಳು ಅಥವಾ ಇಡೀ ದಿನ ತೋರಿಸಲಾಗುತ್ತದೆ. ಬಳಿಕ, ಅದು ಮುಕ್ತಾಯಗೊಳ್ಳುತ್ತದೆ. ಮಾತನಾಡಲು ಅವಕಾಶ ದೊರೆತ ಸಂಸದರು ಸರಕಾರದ ಮೇಲೆ ಕಟುವಾದ ಆಕ್ರಮಣ ಮಾಡಲು ಆರಂಭಿಸದರೂ, ವಿಷಯ ಮಂಡನೆ ಮಾಡಲಿದ್ದರೂ, ಅವರ ಪದಗಳು ಇತಿಹಾಸ ಸೇರಿಬಿಡುತ್ತವೆ.
ಪ್ರತಿಯೊಬ್ಬ ಸಂಸದರ ಮಾತುಗಳು ದಾಖಲೆಗೊಳ್ಳುವಂತೆ ಖಾತ್ರಿಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಸಂಸದರು ಹಳ್ಳಿಗಳು, ಬಡಜನರು ಮತ್ತು ರೈತರ ಸಮಸ್ಯೆಗಳ ಕುರಿತು ಮಾತನಾಡಿದಾಗ ಆ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸರಕಾರ ಕಾರ್ಯಪ್ರವೃತ್ತವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ನಾವು ಅಂತಹ ಸನ್ನಿವೇಶವನ್ನು ಸಂಸತ್ತಿನಲ್ಲಿ ಸೃಷ್ಠಿಸಬಹುದು. ವಾತಾವರಣ ಉತ್ತಮವಾಗಿದಷ್ಟು ನಮ್ಮ ದೇಶವನ್ನು ಮನ್ನಡೆಸಲು ಬೇಕಾದ ಶಕ್ತಿ ಸದೃಢವಾಗಿರುತ್ತದೆ.
ನನ್ನ ಅನುಭವದ ಪ್ರಕಾರ ಸಂಸತ್ತು ಮೌಲ್ಯರಹಿತವಾಗಿರುವ ಯಾವುದನ್ನೂ ಹೇಳಬಾರದು. ಒಬ್ಬರು ಯಾವುದಾದರೂ ಒತ್ತಡದ ಮೇಲೆ ಕಾರ್ಯೋನ್ಮುಖರಾಗುತ್ತಾರೋ ಇಲ್ಲವೋ ಅದು ಬೇರೆ ವಿಷಯ, ರಾಜಕೀಯ ಲಾಭಕ್ಕಾಗಿ ಯಾರಾದರೂ, ಯಾವುದಾದರೂ ಕೆಲಸ ಮಾಡಲು ವಿವಶರಾಗುತ್ತಾರೋ ಇಲ್ಲವೋ, ಅದು ಬೇರೆ ವಿಷಯ, ಆದರೆ ಇದು ಕಾರ್ಯನೀತಿ ರಚಿಸುವವರಿಗೆ ಯಾವೊದೋ ಸಮಯದಲ್ಲಿ ಒಂದು ಚಿಂತನೆಯನ್ನು ನೀಡಲು ಒತ್ತಾಯಿಸುವ ಆಳವಾದ ಚಿಹ್ನೆಯನ್ನು ಬಿಡುತ್ತದೆ. ಹಾಗಾಗಿ, ಸಂಸದರಾಗುವುದು ಸರಳವಲ್ಲ. ಉಜ್ವಲ ಭವಿಷ್ಯದ ಭರವಸೆಯೊಂದಿಗೆ, ತಮ್ಮ ಪ್ರದೇಶದ ಜನರ ಸಂಕಲ್ಪ ಹಾಗೂ 125 ಕೋಟಿ ಭಾರತೀಯರ ಕನಸುಗಳನ್ನು ಹೊತ್ತು ಅವರು ಮನ್ನಡೆಯುತ್ತಾರೆ. ಈ ಪ್ರಯತ್ನದಲ್ಲಿ ಸಾಕಾರಗೊಂಡವರನ್ನು ಇಂದು ಗೌರವಿಸಲಾಗುತ್ತದೆ. ನಮ್ಮ ಸಹೋದ್ಯೋಗಿಗಳನ್ನು ಗೌರವಿಸಿದಾಗ ಇಂತಹ ಸಹೋದ್ಯೋಗಿಗಳ ಜೊತೆಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆಂದು ನಮಗೂ ಹೆಮ್ಮೆಯೆನಿಸುತ್ತದೆ. ನಾವು ಇದೇ ಕಾಲಘಟ್ಟದಲ್ಲಿ ಅವರ ಸಹೋದ್ಯೋಗಿಗಳಾಗಿದ್ದೇವೆಂದು ಹೆಮ್ಮೆ ಎನಿಸುತ್ತದೆ. ಇದು ಅತೀವ ಘನತೆ ಮತ್ತು ಹೆಮ್ಮೆಯ ವಿಚಾರವಾಗಿದೆ.
ನಾನು ಮತ್ತೊಮ್ಮೆ ನನ್ನ ಹೃದಯಾಳದಂದ ನಿಮಗೆ ಶುಭಕೋರುತ್ತೇನೆ ಮತ್ತು ನನ್ನ ಶುಭ ಹಾರೈಕೆಗಳು ನಿಮ್ಮೊಂದಿಗಿವೆ.
ಧನ್ಯವಾದಗಳು.