ನಿಮ್ಮನ್ನು ನೀವು ಗಟ್ಟಿ ಮಾಡಿಕೊಳ್ಳುವುದಕ್ಕೆ ಪರೀಕ್ಷೆ ಒಂದು ಒಳ್ಳೆಯ ಅವಕಾಶ: ಪ್ರಧಾನಿ ಮೋದಿ
ನಿಮ್ಮ ಉಚಿತ ಸಮಯದಲ್ಲಿ ನಿಮ್ಮ ಕುತೂಹಲಗಳನ್ನು ಹೆಚ್ಚಿಸಿಕೊಳ್ಳಿ, ಹೊಸ ವಿಷಯಗಳನ್ನು ತಿಳಿಯಿರಿ: ಪ್ರಧಾನಿ ಮೋದಿ
ಕೇವಲ ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಪರೀಕ್ಷೆ ನಿಮ್ಮ ಭವ್ಯ ಭವಿಷ್ಯದ ಒಂದು ಆರಂಭ ಮಾತ್ರ: ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಹೇಳಿದ ಮಾತು.
ನಿಮ್ಮ ಯೋಚನೆ ಹಾಗೂ ಚಿಂತೆಗಳನ್ನು ಪರೀಕ್ಷಾ ಕೊಠಡಿಯಿಂದ ಆಚೆ ಬಿಡಿ: ಪ್ರಧಾನಿ ಮೋದಿ
ಪಾಠವನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ನಿಮ್ಮ ಮನಸ್ಸಿನಲ್ಲಿ ದೃಶ್ಯೀಕರಿಸಿಕೊಳ್ಳಿ: ಮಕ್ಕಳಿಗೆ ಪ್ರಧಾನಿ ಮೋದಿಯ ಮಾತುಗಳು
ನಿಮ್ಮ ಮಕ್ಕಳೊಂದಿಗೆ ಮಾತನಾಡಿ ಅವರ ಇಷ್ಟಾರ್ಥಗಳನ್ನು ತಿಳಿಯಿರಿ. ಇದು ನಿಮ್ಮ ಮತ್ತು ನಿಮ್ಮ ಮಕ್ಕಳ ನಡುವಿನ ಅಂತರವನ್ನು ಕಡಿಮೆ ಮಾಡುವುದು: ಪ್ರಧಾನಿ ಮೋದಿ

“ಪರೀಕ್ಷಾ ಪೆ ಚರ್ಚೆಯ 4ನೇ ಆವೃತ್ತಿಯಲ್ಲಿ ಇಂದು ವರ್ಚುವಲ್ ವಿಧಾನದ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ಈ ಸಂವಾದ 90 ನಿಮಿಷಗಳಿಗೂ ಅಧಿಕ ಕಾಲ ನಡೆಯಿತು. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ತಮಗೆ ಪ್ರಮುಖವೆನಿಸಿದ ನಾನಾ ವಿಷಯಗಳ ಕುರಿತು ಪ್ರಧಾನಮಂತ್ರಿಗಳಿಂದ ಮಾರ್ಗದರ್ಶನವನ್ನು ಪಡೆದುಕೊಂಡರು. ಈ ವರ್ಷ ಕೂಡ ದೇಶದ ನಾನಾ ಭಾಗಗಳ ವಿದ್ಯಾರ್ಥಿಗಳಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವರ್ಷದ ಸಂವಾದವನ್ನು ಮೊದಲ ವರ್ಚುವಲ್ ಆವೃತ್ತಿಯ ಪರೀಕ್ಷಾ ಪೆ ಚರ್ಚೆ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಕೊರೊನಾ ಹಲವು ನಾವಿನ್ಯತೆಗಳಿಗೆ ಕಾರಣವಾಗಿದೆ ಮತ್ತು ವಿದ್ಯಾರ್ಥಿಗಳೊಡನೆ ಮುಖಾಮುಖಿಯಾಗುತ್ತಿಲ್ಲ ಎಂಬ ನಿರಾಸೆ ಇದ್ದರೂ ಈ ವರ್ಷ ಪರೀಕ್ಷಾ ಪೆ ಚರ್ಚೆ ನಿಂತಿಲ್ಲ ಎನ್ನುವುದು ಸಮಾಧಾನಕರ ಎಂದರು. ಪರೀಕ್ಷಾ ಪೆ ಚರ್ಚೆ ಕೇವಲ ಪರೀಕ್ಷೆ ಕುರಿತ ಸಮಾಲೋಚನೆಯಲ್ಲ, ಇದು ಕುಟುಂಬದ ಸದಸ್ಯರು ಮತ್ತು ಮಿತ್ರರೊಂದಿಗೆ ಶಾಂತ ವಾತಾವರಣದಲ್ಲಿ ಕುಳಿತು ಮಾತನಾಡುವ ಸಂದರ್ಭವಾಗಿದೆ ಮತ್ತು ಹೊಸ ವಿಶ್ವಾಸವನ್ನು ವೃದ್ಧಿಸುವ ಪ್ರಯತ್ನವಾಗಿದೆ ಎಂದರು.

 

 

ವಿದ್ಯಾರ್ಥಿಗಳಾದ ಆಂಧ್ರಪ್ರದೇಶದ ಎಂ. ಪಲ್ಲವಿ ಮತ್ತು ಕೌಲಲಾಂಪುರದ ಅರ್ಪಣ್ ಪಾಂಡೆ ಅವರು, ಪ್ರಧಾನಮಂತ್ರಿ ಅವರನ್ನು ಪರೀಕ್ಷೆಯ ಭಯವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಪ್ರಶ್ನಿಸಿದರು. ಅದಕ್ಕೆ ಶ್ರೀ ನರೇಂದ್ರ ಮೋದಿ ಅವರು ಉತ್ತರಿಸಿ, ಪರೀಕ್ಷೆಯ ಸರ್ವಸ್ವ ಮತ್ತು ಅದೇ ಜೀವನದ ಕೊನೆ ಎಂಬ ವಾತಾವರಣದಿಂದ ಮುಖ್ಯವಾಗಿ ಭಯ ಆವರಿಸುತ್ತದೆ. ಅದು ವಿದ್ಯಾರ್ಥಿಗಳನ್ನು ಹೆಚ್ಚು ಪ್ರಜ್ಞಾಪೂರ್ವಕಗೊಳಿಸುತ್ತದೆ ಎಂದರು. ಜೀವನ ಅತ್ಯಂತ ಸುದೀರ್ಘವಾದುದು ಮತ್ತು ಇವೆಲ್ಲಾ ಜೀವನದ ಹಂತಗಳಷ್ಟೇ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಬಾರದು ಎಂದು ಸಲಹೆ ಮಾಡಿದರು. ಪರೀಕ್ಷೆಗಳನ್ನು ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿಕೊಳ್ಳುವ ಒಂದು ಉತ್ತಮ ಸಂದರ್ಭವಷ್ಟೇ ಎಂದು ಪರಿಗಣಿಸಬೇಕು ಮತ್ತು ಅದನ್ನೇ ಜೀವನ ಮತ್ತು ಮರಣದ ಪ್ರಶ್ನೆ ಎಂಬಂತೆ ಭಾವಿಸಬಾರದು ಎಂದು ಅವರು ಹೇಳಿದರು. ಮಕ್ಕಳೊಂದಿಗೆ ಬೆರೆಯುವ ಪೋಷಕರಿಗೆ ತಮ್ಮ ಮಕ್ಕಳ ಶಕ್ತಿ ಮತ್ತು ದೌರ್ಬಲ್ಯಗಳನ್ನು ತಿಳಿದುಕೊಂಡಿರುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು.

 

ಕಠಿಣ ಪಾಠಗಳು ಮತ್ತು ವಿಷಯಗಳ ಕುರಿತಂತೆ ಪ್ರಧಾನಮಂತ್ರಿ ಅವರು ಎಲ್ಲ ವಿಷಯಗಳನ್ನು ಒಂದೇ ಬಗೆಯ ಮನೋಭಾವ ಮತ್ತು ಶಕ್ತಿಯೊಂದಿಗೆ ಪರಿಗಣಿಸಬೇಕು. ಅದನ್ನು ಎಲ್ಲ ವಿದ್ಯಾರ್ಥಿಗಳ ನಡುವೆ ಸಮಾನ ರೂಪದಲ್ಲಿ ವಿಭಜಿಸಬೇಕು ಎಂದರು. ಪ್ರಧಾನಮಂತ್ರಿಗಳು ಅಭ್ಯಾಸದ ಕುರಿತು ಕಷ್ಟಕರ ಪಾಠಗಳನ್ನು ಬಿಟ್ಟುಬಿಡಬಾರದು ಆದರೆ ಅವುಗಳನ್ನು ತಾಜಾ ಮನಸ್ಸಿನೊಂದಿಗೆ ಎದುರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯಾಗಿ ಹಾಗೂ ಅದಕ್ಕೂ ಮುನ್ನ ಮುಖ್ಯಮಂತ್ರಿಯಾಗಿ ತಾವು ಕರ್ತವ್ಯ ನಿರ್ವಹಿಸಿದಾಗ, ತಾವು ಕಷ್ಟಕರ ಸಮಸ್ಯೆಗಳನ್ನು ಬೆಳಗಿನ ವೇಳೆ ತಾಜಾ ಮನಸ್ಸಿನಲ್ಲಿ ಎದುರಿಸಲು ಬಯಸುತ್ತಿದ್ದೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ಎಲ್ಲ ವಿಷಯಗಳಲ್ಲೂ ಪರಿಣತ (ಮಾಸ್ಟರ್) ಆಗಲು ಸಾಧ್ಯವಿಲ್ಲ, ಉತ್ತಮ ಯಶಸ್ವಿ ಜನರೂ ಕೂಡ ಯಾವುದೋ ಒಂದು ವಿಷಯದ ಮೇಲೆ ಮಾತ್ರ ಹೆಚ್ಚಿನ ಪಾಂಡಿತ್ಯ ಹೊಂದಿರುತ್ತಾರೆ ಎಂದರು. ಪ್ರಧಾನಮಂತ್ರಿ ಅವರು ಲತಾ ಮಂಗೇಶ್ಕರ್ ಅವರ ಉದಾಹರಣೆಯನ್ನು ನೀಡಿ, ಅವರು ತಮ್ಮ ಇಡೀ ಜೀವನವನ್ನು ಒಂದೇ ಮನಸ್ಸಿನಿಂದ ಸಂಗೀತಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದರು. ಕಷ್ಟಕರ ಪಠ್ಯವನ್ನು ಕಂಡುಹಿಡಿಯುವುದು ಒಂದು ಮಿತಿಯಲ್ಲ, ಕಷ್ಟಕರ ವಿಷಯಗಳಿಂದ ಯಾರೊಬ್ಬರೂ ಫಲಾಯನ ಮಾಡಬೇಕಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು ಬಿಡುವಿನ ಸಮಯದ ಪ್ರಾಮುಖ್ಯದ ಬಗ್ಗೆ ವಿವರವಾಗಿ ಮಾತನಾಡಿದರು. ಬಿಡುವಿನ ಸಮಯವಿಲ್ಲದಿದ್ದರೆ ಜೀವನ ರೋಬೋಟ್ ನಂತಾಗುತ್ತದೆ ಎಂದ ಅವರು, ಆ ಸಮಯದ ಮೌಲ್ಯಮಾಪನ ಮಾಡಬೇಕು. ಬಿಡುವಿನ ಸಮಯದಲ್ಲಿ ಏನು ಗಳಿಸಿದ್ದೇವೆನ್ನುವ ಮೌಲ್ಯಮಾಪನ ಮಾಡಬೇಕು. ಅದಕ್ಕಿಂತ ಮುಖ್ಯವಾಗಿ ಬಿಡುವಿನ ಸಮಯದಲ್ಲಿ ಇಡೀ ಸಮಯವನ್ನೇ ತಿಂದುಬಿಡುವಂತಹ ಅಪಾಯಕಾರಿ ಕೆಲಸಗಳಿಂದ ತಪ್ಪಿಸಿಕೊಳ್ಳಬೇಕು. ಈ ಸಂಗತಿಗಳು ನಿಮ್ಮನ್ನು ಮತ್ತೆ ತಾಜಾಗೊಳಿಸುವ ಬದಲು ದಣಿಸುತ್ತವೆ. ಬಿಡುವಿನ ಸಮಯ ನಿಮಗೆ ಹೊಸ ಕೌಶಲವನ್ನು ಕಲಿಯಲು ಉತ್ತಮ ಅವಕಾಶವಾಗಿದೆ. ಬಿಡುವಿನ ಸಮಯವನ್ನು ವ್ಯಕ್ತಿಯಲ್ಲಿ ವಿಭಿನ್ನವಾದುದನ್ನು ಹೊರತರುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದರು.

 

 

ಪ್ರಧಾನಮಂತ್ರಿ ಅವರು, ಮಕ್ಕಳು ತುಂಬಾ ಸ್ಮಾರ್ಟ್ ಆಗಿರುತ್ತಾರೆ ಎಂದು ಶಿಕ್ಷಕರಿಗೆ ಮತ್ತು ಪೋಷಕರಿಗೆ ತಿಳಿಸಿದರು. ಮಕ್ಕಳು ಹಿರಿಯರ ಮೌಖಿಕ ನಿರ್ದೇಶನಗಳಿಗಿಂತ ಹೆಚ್ಚಾಗಿ ಅವರ ಕ್ರಿಯೆಗಳನ್ನು ಅನುಸರಿಸುತ್ತಾರೆ ಮತ್ತು ಅವುಗಳನ್ನು ಪಾಲನೆ ಮಾಡುತ್ತಾರೆ. ಆದ್ದರಿಂದ ನಮ್ಮ ಜಗತ್ತಿನ ನೋಟ ಅತ್ಯಂತ ಪ್ರಮುಖವಾದುದು. ಬೋಧನೆ ನಮ್ಮ ನಡವಳಿಕೆಯಿಂದ ಬರಬೇಕು. ಹಿರಿಯರು ತಮ್ಮ ಆದರ್ಶಗಳೊಂದಿಗೆ ಬದುಕುವ ಮೂಲಕ ಸ್ಫೂರ್ತಿ ನೀಡಲು ಪ್ರಯತ್ನಿಸಬೇಕು.

 

“ಸಕಾರಾತ್ಮಕತೆ ಬಲವರ್ಧನೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ, ಮಕ್ಕಳನ್ನು ಭಯಭೀತಗೊಳಿಸುವ ನಕಾರಾತ್ಮಕ ಸಂಗತಿಗಳಿಂದ ಎಚ್ಚರವಿರಬೇಕಾಗುತ್ತದೆ. ಅಲ್ಲದೆ ಹಿರಿಯರ ಸಕ್ರಿಯ ಪ್ರಯತ್ನಗಳ ಮೂಲಕ ಮಕ್ಕಳು ಹಿರಿಯರ ನಡವಳಿಕೆಯನ್ನು ವಿಶ್ಲೇಷಿಸಿ ಅದನ್ನು ಪಾಲನೆ ಮಾಡುತ್ತಾರೆ. “ಸಕಾರಾತ್ಮಕ ಪ್ರೇರಣೆ ಯುವಕರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ನೆರವಾಗುತ್ತದೆ’’ ಎಂದರು. ಪ್ರೇರಣೆಯ ಮೊದಲ ಭಾಗ ಎಂದರೆ ತರಬೇತಿ ಮತ್ತು ತರಬೇತಿ ಪಡೆದ ಮನಸ್ಸು ಪ್ರೇರಣೆಯನ್ನು ಮುಂದುವರಿಸುತ್ತದೆ’’ ಎಂದು ಹೇಳಿದರು.

 

ವಿದ್ಯಾರ್ಥಿಗಳು ತಮ್ಮ ಕನಸನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮಾಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ಮಾಡಿದರು. ಸೆಲೆಬ್ರಿಟಿ ಸಂಸ್ಕೃತಿಯ ಗ್ಲಾಮರ್ ನಿಂದ ನಿರಾಸೆಗೊಳಗಾಗಬಾರದು ಎಂದ ಅವರು ಅತ್ಯಂತ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹಲವು ಅವಕಾಶಗಳು ಒದಗಿ ಬರುತ್ತವೆ. ಆ ಅವಕಾಶಗಳನ್ನು ಬಳಸಿಕೊಳ್ಳಲು ನಮ್ಮ ಕುತೂಹಲದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದರು. 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಜೀವನ ಮತ್ತು ಉದ್ಯೋಗದ ಸ್ವರೂಪಗಳ ಬಗ್ಗೆ ಗಮನಿಸುವುದನ್ನು ಆರಂಭಿಸಬೇಕು ಹಾಗೂ ಆಗುತ್ತಿರುವ ಬದಲಾವಣೆಗಳು ಮತ್ತು ತರಬೇತಿ ಆರಂಭ ಹಾಗೂ ಅಗತ್ಯ ಕೌಶಲಗಳನ್ನು ಪಡೆಯುವತ್ತ ಚಿಂತನೆ ನಡೆಸಬೇಕು ಎಂದರು. ಸಂಕಲ್ಪಗಳನ್ನು ಕೈಗೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು. ಒಮ್ಮೆ ಅದು ಘಟಿಸಿದರೆ ಹಾದಿ ಸ್ಪಷ್ಟವಾಗುತ್ತದೆ ಎಂದು ಪ್ರಧಾಣ ಮಂತ್ರಿ ನರೇಂದ್ರ ಮೋದಿ ಹೇಳಿದರು.

 

ಪ್ರಧಾನಮಂತ್ರಿಗಳು ಆರೋಗ್ಯಕರ ಆಹಾರ ಸೇವನೆಯ ಅಗತ್ಯದ ಬಗ್ಗೆ ವಿವರಿಸಿದರು ಮತ್ತು ಸಾಂಪ್ರದಾಯಿಕ ಆಹಾರಗಳ ಸ್ವಾದ ಮತ್ತು ಪ್ರಯೋಜನಗಳನ್ನು ಗುರುತಿಸುವಂತೆ ಕರೆ ನೀಡಿದರು.

ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಕಷ್ಟದ ಕುರಿತಂತೆ ಪ್ರಧಾನಮಂತ್ರಿ ಅವರು ‘ಒಳಗೊಳ್ಳುವುದು, ಅಂತರಿಕಗೊಳಿಸುವುದು, ಸಂಯೋಜಿಸುವುದು ಮತ್ತು ದೃಶ್ಯೀಕರಣ’’ ಸೂತ್ರವನ್ನು ನೀಡಿ, ಅದು ನೆನಪಿನ ಶಕ್ತಿಯನ್ನು ಹರಿತಗೊಳಿಸಲು ಉತ್ತಮ ಮಾರ್ಗವಾಗಿದೆ ಎಂದರು. ಬಹುತೇಕ ವಿಷಯಗಳು ಅಂತರ್ಗತವಾಗಿರುತ್ತವೆ ಮತ್ತು ಅವು ನಮ್ಮ ಚಿಂತನಾ ಹರಿವಿನ ಭಾಗವಾಗಿರುತ್ತವೆ. ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಯಾರೊಬ್ಬರೂ ಅಂತರ್ಮುಖಿಯಾಗಬಾರದು, ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದರು.

 

ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳನ್ನು ಆಹ್ಲಾದಕರ ಮನಸ್ಸಿನೊಂದಿಗೆ ಪರೀಕ್ಷೆಗಳನ್ನು ಎದುರಿಸಿ ಎಂದು ಹೇಳಿದರು. “ನಿಮ್ಮೆಲ್ಲಾ ಒತ್ತಡ ಪರೀಕ್ಷಾ ಕೇಂದ್ರದಿಂದ ಹೊರಗಿಡಿ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅವರು ಸಿದ್ಧತೆ ಮತ್ತು ಇತರೆ ಆತಂಕಗಳ ಒತ್ತಡಕ್ಕೆ ಒಳಗಾಗದೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಉತ್ತರಗಳನ್ನು ಬರೆಯಲು ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

 

ಸಾಂಕ್ರಾಮಿಕ ಕುರಿತಂತೆ ಪ್ರಧಾನಮಂತ್ರಿ ಅವರು “ಕೊರೊನಾ ಸೋಂಕು ನಮ್ಮೆಲ್ಲರನ್ನೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ. ಜೊತೆಗೆ ಇದು ಕುಟುಂಬಗಳಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬಲವರ್ಧನೆಗೊಳಿಸಿದೆ” ಎಂದು ಹೇಳಿದರು. ಕೊರೊನಾ ಸಂದರ್ಭದಲ್ಲಿ ನಾವು ಸಾಕಷ್ಟು ಕಳೆದುಕೊಂಡಿದ್ದೇವೆ ಮತ್ತು ಜೀವನದಲ್ಲಿನ ಸಂಬಂಧಗಳು ಮತ್ತು ವಿಷಯಗಳ ಬಗ್ಗೆ ಸಾಕಷ್ಟು ತಿಳಿದುಕೊಂಡು ಮೆಚ್ಚುಗೆಯನ್ನೂ ಸಹ ಗಳಿಸಿದ್ದೇವೆ ಎಂದು ಅವರು ಹೇಳಿದರು. ಯಾವುದನ್ನು ಅಥವಾ ಯಾರನ್ನೂ ಲಘುವಾಗಿ ತೆಗೆದುಕೊಳ್ಳಿರುವ ಪ್ರಾಮುಖ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕೊರೊನಾ ಸಮಯ ನಮಗೆ ಕುಟುಂಬದ ಮೌಲ್ಯ ಮತ್ತು ಮಕ್ಕಳ ಜೀವನ ರೂಪಿಸುವಲ್ಲಿ ಅದರ ಪಾತ್ರದ ಬಗ್ಗೆ ತಿಳಿಸಿಕೊಟ್ಟಿದೆ ಎಂದರು.

ಕೊರೊನಾ ನಮ್ಮಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಒಡ್ಡಿದೆ. ಆದರೆ ಅದು ಕುಟುಂಬಗಳ ನಡುವೆ ಭಾವನಾತ್ಮಕ ಬಾಂಧವ್ಯವನ್ನು ಬಲವರ್ಧನೆಗಳೊಸಿದೆ

 

ಹಿರಿಯರು ಮಕ್ಕಳ ಮತ್ತು ಅವರ ಪೀಳಿಗೆಯ ವಿಚಾರಗಳಲ್ಲಿ ಆಸಕ್ತಿ ತೋರಿಸಿದರೆ ಆಗ ಪೀಳಿಗೆಯ ನಡುವಿನ ಅಂತರ ದೂರವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಪರಸ್ಪರ ಅರ್ಥಮಾಡಿಕೊಂಡು ಸಂಪರ್ಕ ನಡೆಸುವ ಸಲುವಾಗಿ ಹಿರಿಯರು ಮತ್ತು ಮಕ್ಕಳ ನಡುವೆ ಮುಕ್ತ ವಾತಾವರಣ ಇರುವುದು ಅತ್ಯಗತ್ಯವಾಗಿದೆ. ಮಕ್ಕಳು ಮುಕ್ತ ಮನಸ್ಸನ್ನು ಹೊಂದಿರಬೇಕಾಗುತ್ತದೆ. ಅವರ ಜೊತೆ ತೊಡಗಿಕೊಳ್ಳುವ ಮೂಲಕ ನಾವು ಅವರನ್ನು ಬದಲಾಯಿಸಬಹುದಾಗಿದೆ ಎಂದರು.

“ನಿಮ್ಮ ಜೀವನದಲ್ಲಿ ನೀವು ಏನು ಅಧ್ಯಯನ ಮಾಡಿದ್ದೀರಿ ಎಂಬುದು ನಿಮ್ಮ ಯಶಸ್ಸಿಗೆ ಅಥವಾ ವೈಫಲ್ಯಕ್ಕೆ ಅದೇ ಮಾನದಂಡವಲ್ಲ. ಜೀವನದಲ್ಲಿ ನೀವು ಏನೇ ಮಾಡಿದರು ನಿಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ಅವರು ನಿರ್ಧರಿಸುತ್ತಾರೆ” ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ ಮಕ್ಕಳು, ಜನರು, ಪೋಷಕರು ಮತ್ತು ಸಮಾಜದ ಒತ್ತಡದಿಂದ ಹೊರ ಬರಬೇಕು ಎಂದು ಹೇಳಿದರು.

 

‘ವೋಕಲ್ ಫಾರ್ ಲೋಕಲ್’(ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ) ಅಭಿಯಾನಕ್ಕೆ ನೆರವು ನೀಡುವಂತೆ ಪ್ರಧಾನಮಂತ್ರಿ ಅವರು ವಿದ್ಯಾರ್ಥಿಗಳನ್ನು ಕೋರಿದರು. ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಮತ್ತು ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿ ಮಾಡಬೇಕೆಂದು ತಾವು ಬಯಸುವುದಾಗಿ ಹೇಳಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಆ ನಾಯಕರುಗಳ ಬಗ್ಗೆ ಬರೆಯುವುದರ ಮೂಲಕ ಆಜಾದಿ ಕ ಅಮೃತ ಮಹೋತ್ಸವದಲ್ಲಿ ಭಾಗಿಯಾಗುವಂತೆ ವಿದ್ಯಾರ್ಥಿಗಳನ್ನು ಕೋರಿದರು.

 

ಪ್ರಧಾನಮಂತ್ರಿಗಳನ್ನು ಈ ಕೆಳಗಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪ್ರಶ್ನೆಗಳನ್ನು ಕೇಳಿದರು. ಎಂ. ಪಲ್ಲವಿ, ಸರ್ಕಾರಿ ಪ್ರೌಢಶಾಲೆ ಪೊದಿಲಿ, ಪ್ರಕಾಶಂ, ಆಂಧ್ರಪ್ರದೇಶ; ಅರ್ಪಣ್ ಪಾಂಡೆ, ಗ್ಲೋಬಲ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಕೂಲ್, ಮಲೇಶಿಯಾ, ಪುಣ್ಯೋಸುನ್ಯಾ- ವಿವೇಕಾನಂದ ಕೇಂದ್ರ ವಿದ್ಯಾಲಯ, ಪಾಂಪುರೆ, ಅರುಣಾಚಲಪ್ರದೇಶ: ಶ್ರೀಮತಿ ವಿನೀತಾ ಗರ್ಗ್ (ಶಿಕ್ಷಕರು), ಎಸ್ಆರ್ ಡಿಎವಿ ಪಬ್ಲಿಕ್ ಸ್ಕೂಲ್, ದಯಾನಂದ್ ವಿಹಾರ್, ದೆಹಲಿ; ನೀಳ ಅನಂತ ಕೆ.ಎಂ. – ಶ್ರೀ ಅಬ್ರಾಹಂ ಲಿಂಗ್ ಡಮ್, ವಿವೇಕಾನಂದ ಕೇಂದ್ರ ವಿದ್ಯಾಲಯ ಮ್ಯಾಟ್ರಿಕ್, ಕನ್ಯಾಕುಮಾರಿ, ತಮಿಳುನಾಡು; ಅಕ್ಷಯ್ ಕೇಕತ್ಪುರೆ(ಪೋಷಕರು) – ಬೆಂಗಳೂರು, ಕರ್ನಾಟಕ; ಪ್ರವೀಣ್ ಕುಮಾರ್, ಪಾಟ್ನಾ, ಬಿಹಾರ; ಪ್ರತಿಭಾ ಗುಪ್ತಾ(ಪೋಷಕರು), ಲೂಧಿಯಾನ, ಪಂಜಾಬ್; ತಾನ್ಯಾ, ವಿದೇಶಿ ವಿದ್ಯಾರ್ಥಿ, ಸಮಿಯಾ ಇಂಡಿಯನ್ ಮಾಡೆಲ್ ಸ್ಕೂಲ್, ಕುವೈತ್, ಅಶ್ರಫ್ ಖಾನ್ – ಮಸ್ಸೂರಿ, ಉತ್ತರಾಖಂಡ; ಅಮೃತಾ ಜೈನ್ ಮೊರದಾಬಾದ್, ಉತ್ತರ ಪ್ರದೇಶ, ಸುನಿತಾ ಪೌಲ್,(ಪೋಷಕರು) ರಾಯ್ ಪುರ, ಛತ್ತೀಸ್ ಗಢ; ದಿವ್ಯಾಂಕ, ಪುಷ್ಕರ್, ರಾಜಸ್ಥಾನ್, ಸುಹಾನ್ ಸೆಹಗಲ್, ಆಹ್ಲಾನ್ ಇಂಟರ್ ನ್ಯಾಷನಲ್ ಮಯೂರ್ ವಿಹಾರ್ ದೆಹಲಿ; ಧಾರಾವಿ ಬೋಪಟ್ – ಗ್ಲೋಬಲ್ ಮಿಷನ್ ಇಂಟರ್ ನ್ಯಾಷನಲ್ ಇಂಟರ್ ನ್ಯಾಷನಲ್ ಸ್ಕೂಲ್ ಅಹಮದಾಬಾದ್; ಕ್ರಿಸ್ಟೀ ಸೈಕಿಯ – ಕೇಂದ್ರೀಯ ವಿದ್ಯಾಲಯ ಐಐಟಿ, ಗುವಾಹತಿ ಮತ್ತು ಶ್ರೇಯನ್ ರಾಯ್, ಸೆಂಟ್ರಲ್ ಮಾಡೆಲ್ ಸ್ಕೂರ್, ಬರಾಕ್ಪುರ್, ಕೋಲ್ಕತ್ತಾ.

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."