ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಬೆಳ್ಳಿ ಪದಕ ಗೆದ್ದಿರುವ ಅಜೀತ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಎಫ್ 46 ಸ್ಪರ್ಧೆಯಲ್ಲಿ ಅಜೀತ್ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಮಂತ್ರಿ ಯವರು;
“ಅಜೀತ್ ಸಿಂಗ್ ಅವರು ಅದ್ಭುತ ಸಾಧನೆ ತೋರಿಸಿದ್ದಾರೆ, ಅವರು ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಎಫ್46 ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ! ಕ್ರೀಡೆಯಲ್ಲಿ ಅವರ ಬದ್ಧತೆ ಮತ್ತು ಪರಿಶ್ರಮದಿಂದ ಭಾರತಕ್ಕೆ ಹೆಮ್ಮೆ ತಂದಿದೆ" ಎಂದು ಬರೆದಿದ್ದಾರೆ.
#Cheer4Bharat
A phenomenal achievement by Ajeet Singh, as he wins the Silver medal in the Men's Javelin Throw F46 at the #Paralympics2024! His commitment to sports and perseverance have made India proud. #Cheer4Bharat pic.twitter.com/nxazXlZk4D
— Narendra Modi (@narendramodi) September 4, 2024