“ ಬಿ.ಜೆ.ಪಿಯ ಹಾದಿ ದೇಶದ ಜನತೆಗೊಂದು ಆಶಾಕಿರಣ. ಎಲ್ಲೆಲ್ಲ ಬಿಜೆಪಿ ಪಸರಿಸುತ್ತಿದೆಯೋ ಅದೆಲ್ಲ ಯಾವನೊಬ್ಬ ವ್ಯಕ್ತಿಯಿಂದಲ್ಲ, ಕೇವಲ ಹಲವು ತೆಲಾರುಗಳ ಕಾರ್ಯಕರ್ತರ ಕಠಿಣಪರಿಶ್ರಮ, ತ್ಯಾಗ, ಬಲಿದಾನ, ಸಿಹಿಗಳಿಂದ ಸಾಧ್ಯವಾಗಿದೆ. ನಮಗೆ ಯಾವತ್ತೂ ಪಕ್ಷಕ್ಕಿಂತ ದೇಶ ಹೆಚ್ಚು . ಬಿಜೆಪಿ ಭಾರತ ಮೊದಲು ಎಂಬ ಧ್ಯೇಯದೊಂದಿಗೆ ಮುನ್ನುಗ್ಗಲಿದೆ…”
ಇದು ಶ್ರೀ ನರೇಂದ್ರ ಮೋದಿ ಅವರು ಎಪ್ರಿಲ್ 6, 2013ರಲ್ಲಿ ಪಕ್ಷದ 33ನೇ ಸ್ಥಾಪನಾ ದಿನ ನಿಮಿತ್ತ ಕಾರ್ಯಕರ್ತರ ಸಮ್ಮೇಳನದಲ್ಲಿ ಕಾರ್ಯಕರ್ತರನ್ನದ್ದೇಶಿಸಿ ಮಾಡಿದ ಭಾಷಣದ ಆಶಯ….
ಇದು ಶ್ರೀ ನರೇಂದ್ರ ಮೋದಿ ಅವರು ಎಪ್ರಿಲ್ 6, 2013ರಲ್ಲಿ ಪಕ್ಷದ 33ನೇ ಸ್ಥಾಪನಾ ದಿನ ನಿಮಿತ್ತ ಕಾರ್ಯಕರ್ತರ ಸಮ್ಮೇಳನದಲ್ಲಿ ಕಾರ್ಯಕರ್ತರನ್ನದ್ದೇಶಿಸಿ ಮಾಡಿದ ಭಾಷಣದ ಆಶಯ….
ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಇಟ್ಟ ಹೆಜ್ಜೆ ದೇಶದ ಅತ್ಯುನ್ನತ ಪದವಿಗೇರಿಸಿತು. ಇದಕ್ಕೆ ಅವರಲ್ಲಿದ್ದ ಕಾರ್ಯಕೌಶಲ್ಯತೆಗಳೆ ಕಾರಣವಾಗಿದ್ದವು, ಸಂಘಟನಾಶಕ್ತಿಯಲ್ಲಿ ಇವರದ್ದು ಎತ್ತಿದ ಕೈ. ಇವರು ಪಕ್ಷದಲ್ಲಿ ನೀಡಿದ್ದ ಎಲ್ಲ ಜವಾಬ್ದಾರಿಗಳನ್ನೂ ಯಶಸ್ಸುಗೊಳಿಸುವುದಲ್ಲದೆ ಅತಿ ಕಡಿಮೆ ಅವಧಿಯಲ್ಲಿ ನಿರೀಕ್ಷೆ ಮೀರಿ ಅತ್ಯಂತ ಎತ್ತರಕ್ಕೆ ಬೆಳೆದರು.
ಶ್ರೀ ನರೇಂದ್ರ ಮೋದಿ ಅವರು ಬಿಜೆವೈಮ್ ಸಮಾವೇಶದಲ್ಲಿ ಭಾಷಣ ಮಾಡುತ್ತಿರುವುದು
ಇವರು ಗುಜರಾತನ್ನು ಬದಲಾಯಿಸಿದರು. ಜಾಗತಿಕವಾಗಿ ಗುಜರಾತು ಗುರುತಿಸಿಕೊಳ್ಳುವಂತೆ ಮಾಡಿದರು. ಇವರ ನಾಯಕತ್ವಕ್ಕೆ ಗುಜರಾತು ಅಭಿವೃದ್ದಿಯೇ ಸಾಕ್ಷಿ. ಗುಜರಾತಿನ ಸಾಧನೆಗಾಗಿ ಇವರನ್ನು ಜಗತ್ತೇ ಮೆಚ್ಚಿಕೊಂಡಿತು.
ಶ್ರೀ ನರೇಂದ್ರ ಮೋದಿ : ಅತ್ಯುತ್ತಮ ಚಿಂತನೆಯ ನಾಯಕತ್ವದ ವ್ಯಕ್ತಿತ್ವ
ಪುಟ್ಟ ಕೊಠಡಿಯಲ್ಲಿ ವಾಸವಾಗಿದ್ದ ಜೀವನದಿಂದ , ಜಗತ್ತಿನ ಜನಪ್ರಿಯ ನಾಯಕನಾಗಿ ಗುರುತಿಸಿಕೊಳ್ಳುವ ತನಕ ಬೆಳೆದರು. ಅಹಮ್ಮದಬಾದ್ ಅರ್.ಎಸ್.ಎಸ್. ಕಚೇರಿಯಲ್ಲಿ ಮೊದಲ ಕೆಲಸ ಇವರದ್ದು, ಕೊಠಡಿಗಳನ್ನು ತೊಳೆದು ಸ್ವಚ್ಛತೆಯಲ್ಲಿ ಇಡುವುದಾಗಿತ್ತು. ಮುಂಜಾನೆ ಕಚೇರಿಗೆ ಹಾಲು ತರುವುದು. ಕೆಲವೊಮ್ಮೆ ಗೌರವದಲ್ಲಿ ಹಿರಿಯ ಪ್ರಚಾರಕರ ಬಟ್ಟೆ ಕೂಡಾ ಒಗೆದಿದ್ದಾರೆ.
ಮುನಿಸಿಪಲ್ ಚುನಾವಣೆ: ಕಿರಿದಾದರೂ ಹಿರಿದು.
1987ರಲ್ಲಿ ಬಿಜೆಪಿ ಸೇರಿದಾಗ , ಮರು ವರ್ಷವೇ ಅಹಮ್ಮದಾಬಾದ್ ಮುನಿಸುಪಲ್ ಚುನಾವಣೆ ಮೋದಿ ಅವರ ಪರೀಕ್ಷೆಯಾಗಿತ್ತು. 1980ರಲ್ಲಿ ರಾಜಕೋಟ್ ಮತ್ತು ಜುನಾಗಡ್ ಕಾರ್ಪೋರೇಷನ್ ಹಾಗೂ ವಿಧಾನಸಭಾ ಸ್ಥಾನ ಗೆಲುವು ಇವರ ಮಹತ್ವ ತೋರಿಸಿಕೊಟ್ಟಿತು, ಆದರೂ ಅಹಮ್ಮದಾಬಾದ್ ಕಾರ್ಪೋರೇಷನ್ ಇವರಿಗೆ ಅತ್ಯಂತ ಪ್ರಮುಖ್ಯವಾಗಿತ್ತು. ಆನಂತರ 2000 ತನಕ ಇದು ಇವರ ಕಣ್ಗಾವಲಿನಲ್ಲಿ ಪಕ್ಷದ ಹಿಡಿತದಲ್ಲಿತ್ತು. ಇವರು ಈ ಕಾಲಾವಧಿಯಲ್ಲಿ ನಾನಾ ಜವಾಬ್ದಾರಿ ಹೊತ್ತು ದೇಶದ ವಿವಿಧಡೆ ಸಂಚಾರದಲ್ಲಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ವಿಜಯ: ಗಾಂಧಿನಗರದಲ್ಲಿ ಕಮಲ ಅರಳಿತು
ಮಾಧವ ಸಿಂಹ ಸೋಲಂಕಿ ನೇತೃತ್ವದಲ್ಲಿ 1980ರಲ್ಲಿ ಕಾಂಗ್ರೆಸ್ಸು ಗೆಲುವುಕಂಡಾಗ ಬಿಜೆಪಿಗೆ ದಕ್ಕಿದ್ದು ಕೇವಲ 9 ಸ್ಥಾನಗಳು ಮಾತ್ರ. 1985 ಮತ್ತು 1988ರಲ್ಲಿ ಅಸ್ಥಿರತೆಯ ಗಾಳಿ ಕಾಂಗ್ರೆಸ್ಸಿನ ಅಸ್ಪಷ್ಠನಿಲುವುಗಳು ಗುಜರಾತಲ್ಲಿ ಹೊಸ ರಾಜಕೀಯ ಮನೋಭಾವ ಜನತೆಯಲ್ಲಿ ಮೂಡಿಸತೊಡಗಿತು.
ಶ್ರೀ ನರೇಂದ್ರ ಮೋದಿಯವರನ್ನು 1990ರಲ್ಲಿ ಗುಜರಾತಿಗೆ ಸ್ವಾಗತಿಸುತ್ತಿರುವುದು.
1990ರ ಸಾರ್ವಜನಿಕ ಚುನಾವಣೆ ಬದಲಾವಣೆ ಸೂಚಿಸಿತು. 27ನೇ ಫೆಬ್ರವರಿ 1990ರಲ್ಲಿ ದಶಕಗಳ ಕಾಂಗ್ರೆಸ್ಸು ದುರಾಡಳಿತಕ್ಕೆ ಬೇಸತ್ತು ಚಿಮನ್ ಭಾಯಿ ಪಟೇಲ್ ನೇತೃತ್ವದ ಜನತಾ ದಳವನ್ನು ಜನತೆ ಬಯಸಿದರು. ಬಿಜೆಪಿ 2ನೇ ಸ್ಥಾನ ಪಡೆಯಿತು.
1990ರಲ್ಲಿ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ಕೇಶುಭಾಯಿ ಪಟೇಲ್ ಮತ್ತಿತರರು ಶ್ರೀ ಎಲ್.ಕೆ ಅಡ್ವಾಣಿ ಅವರಭಾಷಣ ವನ್ನು ಕೇಳುತ್ತಿರುವುದು.
ಬಿಜೆಪಿ ಗುಜರಾತಲ್ಲಿ 1996ರಲ್ಲಿ ಆಡಳಿತ ಹಿಡಿಯಿತು ಆದರೆ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಶ್ರೀ ನರೇಂದ್ರ ಮೋದಿಯವರು ದೆಹಲಿಯಲ್ಲಿದ್ದರು. 2001ರ ಅಕ್ಟೋಬರ್ 7ರಂದು, ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಪಕ್ಷ ಶ್ರೀ ನರೇಂದ್ರ ಮೋದಿಯವರನ್ನುಕೇಳಿಕೊಂಡಿತು.
ಶ್ರೀ ನರೇಂದ್ರ ಮೋದಿಯವರನ್ನು 1990ರಲ್ಲಿ ಗುಜರಾತಿಗೆ ಸ್ವಾಗತಿಸುತ್ತಿರುವುದು.
1990ರ ಸಾರ್ವಜನಿಕ ಚುನಾವಣೆ ಬದಲಾವಣೆ ಸೂಚಿಸಿತು. 27ನೇ ಫೆಬ್ರವರಿ 1990ರಲ್ಲಿ ದಶಕಗಳ ಕಾಂಗ್ರೆಸ್ಸು ದುರಾಡಳಿತಕ್ಕೆ ಬೇಸತ್ತು ಚಿಮನ್ ಭಾಯಿ ಪಟೇಲ್ ನೇತೃತ್ವದ ಜನತಾ ದಳವನ್ನು ಜನತೆ ಬಯಸಿದರು. ಬಿಜೆಪಿ 2ನೇ ಸ್ಥಾನ ಪಡೆಯಿತು.
1990ರಲ್ಲಿ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ಕೇಶುಭಾಯಿ ಪಟೇಲ್ ಮತ್ತಿತರರು ಶ್ರೀ ಎಲ್.ಕೆ ಅಡ್ವಾಣಿ ಅವರಭಾಷಣ ವನ್ನು ಕೇಳುತ್ತಿರುವುದು.
ಬಿಜೆಪಿ ಗುಜರಾತಲ್ಲಿ 1996ರಲ್ಲಿ ಆಡಳಿತ ಹಿಡಿಯಿತು ಆದರೆ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಶ್ರೀ ನರೇಂದ್ರ ಮೋದಿಯವರು ದೆಹಲಿಯಲ್ಲಿದ್ದರು. 2001ರ ಅಕ್ಟೋಬರ್ 7ರಂದು, ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಪಕ್ಷ ಶ್ರೀ ನರೇಂದ್ರ ಮೋದಿಯವರನ್ನುಕೇಳಿಕೊಂಡಿತು.
ಗುಜರಾತಲ್ಲಿ ಹೊಸ ದಿಶೆ ಆರಂಭವಾಯಿತು. ಹೊಸ ಮನ್ವಂತರ ಪ್ರಾರಂಭವಾಯಿತು. ಹೊಸ ಆಶಯ ತುಂಬಿತ್ತು. ಜವಾಬ್ದಾರಿ ಹೊತ್ತ ಶ್ರೀ ನರೇಂದ್ರ ಮೋದಿಯವರ ಹೆಗಲಲ್ಲಿ ಸವಾಲಿ ಮೇಲೆ ಸವಾಲಿನ ಅಡೆತಡೆಗಳು ಎದುರಾದವು. ದುರಾದೃಷ್ಟಕರವಾಗಿ 2002ರ ಗೋದ್ರಾ ಘಟನೆ ಮತ್ತು ತದನಂತರ ಗುಜರಾತಿನ ದಳ್ಳುರಿ ಶ್ರೀ ನರೇಂದ್ರ ಮೋದಿಯವರನ್ನು ಹಾಗೂ ಪಕ್ಷವನ್ನು ಸಾಕಷ್ಟು ಮುಜುಗುರಕ್ಕೀಡು ಮಾಡಿದರೂ, ಅಭಿವೃದ್ದಿಹಾದಿಯಲ್ಲಿ ರಾಜ್ಯವನ್ನು ಮುನ್ನಡೆಸುವ ಶ್ರೀ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ಯಾವುದೇ ತೊಂದರೆಗಳಾಗಲಿಲ್ಲ.
ಪಂಚಾಯತ್ ನಿಂದ ಹಿಡಿದು ಲೋಕಸಭಾ ಚುನಾವಣೆಗಳ ತನಕ ಒಂದರ ಹಿಂದೆ ಮತ್ತೊಂದು ಚುನಾವಣೆಗಳು ಶ್ರೀ ನರೇಂದ್ರ ಮೋದಿಯವರನ್ನು ಕಟೆಕಟೆಯಲ್ಲಿ ನಿಲ್ಲಿಸಿದವು.
2002 ರಿಂದ 2007ರ ತನಕ ಶ್ರೀ ನರೇಂದ್ರ ಮೋದಿಯವರ ಸ್ವಚ್ಛ ಆಡಳಿತ ಜನತೆಯನ್ನು ಹುರಿದುಂಬಿಸಿದವು. ಕಾಂಗ್ರೆಸ್ಸ ಅಧ್ಯಕ್ಷೆ “ ಸಾವಿನ ವ್ಯಾಪಾರಿ” ಎಂದು ಇವರನ್ನು 2007ರಲ್ಲಿ ಸಾರ್ವಜಮಿಕ ಚುನಾವಣಾ ವೇದಿಕೆಯಲ್ಲಿ ಆರೋಪಿಸಿದರು. ಅದರೆ ಪರೀಕ್ಷೆಯಲ್ಲಿ ಜನತೆ ಶ್ರೀ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದರು. ಶ್ರೀ ನರೇಂದ್ರ ಮೋದಿಯವರಿಗೆ ಜನತೆಯ ಜಯಮಾಲೆ ದೊರಕಿತು. ಕಾಂಗ್ರೆಸ್ಸ ಕೇವಲ 59 ಸ್ಥಾನ ಗಳಿಸಿ ಹೀನಾಯ ಸೋಲು ಅನುಭವಿಸಿತು.
https://www.narendramodi.in/360/build.html
2012ರಲ್ಲಿ ಗುಜರಾತನ ಚುನಾವಣೆಯಲ್ಲಿ 115 ಸ್ಥಾನ ಪಡೆದ ಬಿಜೆಪಿ ಪಕ್ಷ , ಗುಜರಾತಿನ ಪ್ರಜೆಗಳು ಶ್ರೀ ನರೇಂದ್ರ ಮೋದಿಯವರಲ್ಲಿಟ್ಟ ನಿಷ್ಠೆಯ ಸಂಕೇತ ಎಂದು ಭಾವಿಸಿತು. 20012ರ ತನಕ ಶ್ರೀ ನರೇಂದ್ರ ಮೋದಿಯವರ ಗುಜರಾತ್ ಮುಖ್ಯಮಂತ್ರಿ ಅವಧಿಯ ಎಲ್ಲ ಪಂಚಾತ್ ಮತ್ತು ಕಾರ್ಪೊರೇಷನ್ ಚುನಾವಣೆಗಳಲ್ಲಿ ಬಿಜೆಪಿಯದ್ದೇ ಕಾರುಬಾರು. 1990ರಿಂದ 2012ರ ತನಕ ಗುಜರಾತ್ ಬಹಳಷ್ಟು ಬದಲಾಗಿದೆ.
ಲೋಕಸಭಾ ಚುನಾವಣೆ: ಗುಜರಾತಿನಿಂದ ಅತ್ಯಂತ ಅಧಿಕ ಕಮಲಗಳು
ಶ್ರೀ ನರೇಂದ್ರ ಮೋದಿಯವರ ಸಂಘಟನಾ ಚಾತುರ್ಯಕ್ಕೆ ಅತ್ಯಧಿಕ ಸಂಖೆಯಲ್ಲಿ ಲೋಕಸಭಾ ಪ್ರತಿನಿಧಿಗಳನ್ನು ಕಳುಹಿಸಿದ ಗುಜರಾತು ಸಾಕ್ಷಿಯಾಗಿದೆ. 2004 ಹಾಗೂ 2009ರಲ್ಲಿ ಲೋಕಸಭೆಯಲ್ಲಿ ಕಮಲದ ಪ್ರತಿನಿಧಿಗಳಸಂಖ್ಯೆಯಲ್ಲಿ ಸಿಂಹಪಾಲು ಗುಜರಾತಿಗೆ ಸೇರಿತ್ತದೆ. ಇದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿಯವರ ಸಾಧನೆ ಅನ್ನಬಹುದು.
ಯಾತ್ರೆಗಳು : ಸ್ವಂತಿಕೆಯಿಂದ ದೇಶ ಮುಖ್ಯವೆನಿಸಿದಾಗ
1987ರಲ್ಲಿ ನ್ಯಾಯಯಾತ್ರೆ, ಸಂಘಟಿಸಿದರು. 1989ರಲ್ಲಿ ಲೋಕಶಕ್ತಿ ಯಾತ್ರೆ ಏರ್ಪಡಿಸಿದರು. ಇವುಗಳೆರಡೂ ಭ್ರಷ್ಟ ಕಾಂಗ್ರೆಸ್ಸಿನಿಂದ ಬೇಸತ್ತ ಗುಜರಾತನ ಮೂಲೆ ಮೂಲೆಗಳ ಸ್ಥಳೀಯರಲ್ಲಿ ಶ್ರೀ ನರೇಂದ್ರ ಮೋದಿಯವರನ್ನು ಮನೆ ಮಾತಾಗಿಸಿದವು.
ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಮುರಳಿ ಮನೋಹರ್ ಜೋಷಿ ಅವರು ಏಕ್ತಾ ಯಾತ್ರೆಯಲ್ಲಿ -1991
ಶ್ರೀ ಎಲ್. ಕೆ ಅಡ್ವಾಣಿ ಆಯೋಜಿಸಿದ್ದ ಸೋಮನಾಥ ಯಾತ್ರೆಯಲ್ಲಿ ಮುಖ್ಯ ಕಥಾಪಾತ್ರ ಅಥವಾ ಸಾರಥಿ ಶ್ರೀ ನರೇಂದ್ರ ಮೋದಿ ಅವರಾಗಿದ್ದರು. ಶ್ರೀ ಮುರಳಿ ಮನೋಹರ್ ಜೋಷಿ ಅವರ 1991ರ ಏಕ್ತಾ ಯಾತ್ರೆಯಲ್ಲಿ ಶ್ರೀ ನರೇಂದ್ರ ಮೋದಿ ಪ್ರಧಾನ ಭೂಮಿಕೆ ಹೊತ್ತಿದ್ದರು. ಯಾತ್ರ ಪ್ರಾರಂಭ ಮೊದಲು ಸ್ಥಳಪರೀಕ್ಷೆಯಿಂದ ಹಿಡಿದು, ಯಾತ್ರೆಯ ನಕ್ಷೆಯ ಹಾಕಿ, ಕಾರ್ಯಕ್ರಮಗಳ ಸುಗಮ ಹಾದಿ ಜೋಡಿಸುವ ಕಾರ್ಯ ಕೂಡಾ ಶ್ರೀ ನರೇಂದ್ರ ಮೋದಿ ಅವರೇ ಮಾಡುತ್ತಿದ್ದರು
ಶ್ರೀ ನರೇಂದ್ರ ಮೋದಿ ಅವರು ಶ್ರೀ ಎಲ್.ಕೆ ಅಡ್ವಾಣಿ ಅವರ ಜನಾದೇಶ ಯಾತ್ರೆಯಲ್ಲಿ
ಶ್ರೀ ಎಲ್.ಕೆ. ಅಡ್ವಾಣಿ ಅವರ ಅಯೋಧ್ಯಾ ಯಾತ್ರೆ
ರಾಜಕೀಯ ಹಾಗೂ ಸಾಮಾಜಿಕ ಕಾಳಜಿಯ ಯಾತ್ರೆ ಸಂಘಟಿಸುವುದರಲ್ಲಿ ಇವರು ನಿಸ್ಸೀಮ. ಹಲವು ಯಾತ್ರೆಗಳ ಯಶಸ್ಸಿನ ಹೆಗ್ಗಳಿಕೆ ಇವರದು. ಯಾತ್ರೆಗಳ ಸರದಾರರಾಗಿ, ಗುಜರಾತು ಮತ್ರವಲ್ಲದೆ ಇಡೀ ದೇಶದಾಧ್ಯಂತ ಜನಸಾಮಾನ್ಯರಿಂದ ಹಿಡಿದು ಜನನಾಯಕರ ತನಕ ಪಕ್ಷದ ಎಲ್ಲ ವರ್ಗಗಳ ಎಲ್ಲ ಹಂತಗಳ ಕಾರ್ಯಕರ್ತರ ಜೊತೆ ಅನುಭವ – ಒಡನಾಟ ಬೆಳೆಸಿಕೊಂಡರು
ಶ್ರೀ ನರೇಂದ್ರ ಮೋದಿ ಅವರು ವಿವೇಕಾನಂದ ಯುವ ವಿಕಾಸ ಯಾತ್ರೆಯನ್ನು ಪ್ರಾರಂಭಿಸಿದರು
ಗುಜರಾತಿನ ಹೊರತಾಗಿ: ಉತ್ತರ ಭಾರತದಲ್ಲೂ ಯಶಸ್ಸು
1995ರಲ್ಲಿ ಶ್ರೀ ನರೇಂದ್ರ ಮೋದಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಿ ದೆಹಲಿಗೆ ಕಳುಹಿಸಲಾಯಿತು. ಜಮ್ಮ & ಕಾಶ್ಮೀರ ಹಾಗೂ ಪಂಜಾಬ್ ಚುನಾವಣೆ ಹೊಣೆಗಾರಿಕೆ ಇವರ ಕಾರ್ಯಕ್ಷೇತ್ರವಾಯಿತು.
ಶ್ರೀ ನರೇಂದ್ರ ಮೋದಿ ಅವರು 1992ರಲ್ಲಿ ಶ್ರೀನಗರದಲ್ಲಿ ಭಾರತದ ಧ್ವಜ ಹಾರಿಸುತ್ತಿರುವುದು.
ಶ್ರೀ ನರೇಂದ್ರ ಮೋದಿ ಅವರ ಸಂಘಟನಾಶಕ್ತಿ ಪ್ರಯೋಜನಕಾರಿಯಾಯಿತು. ಹಲವು ರಾಜ್ಯಗಳಲ್ಲಿ ಬಿಜೆಪಿ ಯಶಸ್ಸಿನ ಹಾದಿ ಹಿಡಿಯಿತು. ಮೋದಿ ಅವರ ಮುಂದಾಳುತನದಲ್ಲಿ ರಾಜ್ಯಗಳ ನಂತರ ರಾಜ್ಯಗಳಲ್ಲಿ ಬಿಜೆಪಿ ಪ್ರಾಭಲ್ಯತೆ ಕಾಣತೊಡಗಿತು. ಹಿಮಾಚಲ ಪ್ರದೇಶದಲ್ಲಿ ಆಡಳಿತ ಹಿಡಿಯಿತು. ಪಂಜಾಬ್ ನಲ್ಲಿ ಅಕಾಲಿ-ಬಿಜೆಪಿ 117ರಲ್ಲಿ 93 ಸ್ಥಾನ ಪಡೆದು ವಿರೋಧಿಗಳ ದೂಳಿಪಟ ಮಾಡಿತು. ಚಂಡಿಗಡದಲ್ಲಿ ಕಾರಪೊರೇಷನ್ ಗೆದ್ದಿತು. ಲೋಕಸಭಾ ಚುನಾವಣೆಯಲ್ಲಿ ಚಂಡಿಗಡ ಬಿಜೆಪಿಪಾಲಾಯಿತು.
ಶ್ರೀ ನರೇಂದ್ರ ಮೋದಿ ಅವರ ಸಂಘಟನಾಶಕ್ತಿ ಪ್ರಯೋಜನಕಾರಿಯಾಯಿತು. ಹಲವು ರಾಜ್ಯಗಳಲ್ಲಿ ಬಿಜೆಪಿ ಯಶಸ್ಸಿನ ಹಾದಿ ಹಿಡಿಯಿತು. ಮೋದಿ ಅವರ ಮುಂದಾಳುತನದಲ್ಲಿ ರಾಜ್ಯಗಳ ನಂತರ ರಾಜ್ಯಗಳಲ್ಲಿ ಬಿಜೆಪಿ ಪ್ರಾಭಲ್ಯತೆ ಕಾಣತೊಡಗಿತು. ಹಿಮಾಚಲ ಪ್ರದೇಶದಲ್ಲಿ ಆಡಳಿತ ಹಿಡಿಯಿತು. ಪಂಜಾಬ್ ನಲ್ಲಿ ಅಕಾಲಿ-ಬಿಜೆಪಿ 117ರಲ್ಲಿ 93 ಸ್ಥಾನ ಪಡೆದು ವಿರೋಧಿಗಳ ದೂಳಿಪಟ ಮಾಡಿತು. ಚಂಡಿಗಡದಲ್ಲಿ ಕಾರಪೊರೇಷನ್ ಗೆದ್ದಿತು. ಲೋಕಸಭಾ ಚುನಾವಣೆಯಲ್ಲಿ ಚಂಡಿಗಡ ಬಿಜೆಪಿಪಾಲಾಯಿತು.
ಪ್ರಕಾಶ್ ಸಂಗ್ ಬಾದಲ್ ಜೊತೆ ಶ್ರೀ ನರೇಂದ್ರ ಮೋದಿ ಅವರು
ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ 6 ವರ್ಷಗಳ ಕಾಲ ಅವರು ಗುಜರಾತಿನಿಂದ ಹೊರಗಿದ್ದರು. ಇವರ ಪ್ರಥಮ ನೇತೃತ್ವದಲ್ಲಿ ಜಮ್ಮುವಿನಲ್ಲಿ ಪಕ್ಷ 1 ಸ್ಥಾನ ಪಡೆಯಿತು, ಪಂಜಾಬ್ ಹಿಮಾಚಲಪ್ರದೇಶದಲ್ಲಿ ಶೂನ್ಯವಾದರೆ ಹರ್ಯಾಣದಲ್ಲಿ 4 ಸ್ಥಾನ ಸಿಕ್ಕಿತು. 1999ರಲ್ಲಿ ಲೋಕಸಭೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಥಾನ ದೊರಕಿತು.. ಹಿಮಾಚಲಪ್ರದೇಶ 3, ಪಂಜಾಬ್ 1 ಮತ್ತು ಹರ್ಯಾಣ 5 ಸ್ಥಾನ ನೀಡಿತು.
1998ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು
1998ರಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿ ಶ್ರೀ ನರೇಂದ್ರ ಮೋದಿ ಯಾಗಿದ್ದರು. ಇವರನ್ನು 1999ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮಾಡಲಾಯಿತು. ಆಗ ಬಿಜೆಪಿ ಅತ್ಯಧಿಕ ಅಂದರೆ 182 ಸ್ಥಾನ ಪಡೆಯಿತು.
ಜೂನ್ 2013ರಲ್ಲಿ 2014ರ ಲೋಕಸಭಾ ಚುನಾವಣೆಗಾಗಿ ಮತ್ತು 13ನೇ ಸೆಪ್ಟೆಂಬರ್ 2013ರಲ್ಲಿ ಎನ್.ಡಿ.ಎ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿತು.
ಶ್ರೀ ನರೇಂದ್ರ ಮೋದಿ ಅವರನ್ನು ಎನ್.ಡಿ.ಎ.ಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು.
ಕಚೇರಿಗಳನ್ನು ಸ್ವಚ್ಛಗೊಳಿಸುವಲ್ಲಿಂದ ಹಿಡಿದು ಪಂಚಾಯತ್ ನಿಂದ ಲೋಕಸಭಾ ಚುನಾವಣಾ ಪ್ರಚಾರಕರಾಗಿ, ಶ್ರೀ ನರೇಂದ್ರ ಮೋದಿ ಪಕ್ಷದ ಹಲವು ಹಂತಗಳಲ್ಲಿ ಜವಾಬ್ದಾರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಎಲ್ಲಿ ಮೋದಿ ಕೈಯಿಟ್ಟರೋ ಅಲ್ಲಿ ಯಶಸ್ಸಿ ಕಟ್ಟಿಟ್ಟ ಬುತ್ತಿಯಾಗುತ್ತಿತ್ತು. ಅವರು ಬಿಜೆಪಿಯ ಧೃವತಾರೆಯಾಗಿದ್ದಾರೆ… ಅದರಲ್ಲೇನು ವಿಶೇಷವಿಲ್ಲ.!