Quoteಎಐ ಈ ಶತಮಾನದಲ್ಲಿ ಮಾನವೀಯತೆಗಾಗಿ ಕೋಡ್ ಬರೆಯುತ್ತಿದೆ: ಪ್ರಧಾನಮಂತ್ರಿ
Quoteನಮ್ಮ ಹಂಚಿಕೆಯ ಮೌಲ್ಯಗಳನ್ನು ಎತ್ತಿಹಿಡಿಯಲು, ಅಪಾಯಗಳನ್ನು ಪರಿಹರಿಸಲು ಮತ್ತು ನಂಬಿಕೆಯನ್ನು ಹೆಚ್ಚಿಸಲು ಆಡಳಿತ ಮತ್ತು ಮಾನದಂಡಗಳನ್ನು ಸ್ಥಾಪಿಸಲು ಸಾಮೂಹಿಕ ಜಾಗತಿಕ ಪ್ರಯತ್ನಗಳ ಅಗತ್ಯವಿದೆ: ಪ್ರಧಾನಮಂತ್ರಿ
Quoteಆರೋಗ್ಯ, ಶಿಕ್ಷಣ, ಕೃಷಿ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳನ್ನು ಸುಧಾರಿಸುವ ಮೂಲಕ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಲು ಎಐ ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
Quoteಎಐ-ಚಾಲಿತ ಭವಿಷ್ಯಕ್ಕಾಗಿ ನಮ್ಮ ಜನರ ಕೌಶಲ್ಯ ಮತ್ತು ಮರುಕೌಶಲ್ಯದಲ್ಲಿ ನಾವು ಹೂಡಿಕೆ ಮಾಡಬೇಕಾಗಿದೆ: ಪ್ರಧಾನಮಂತ್ರಿ
Quoteನಾವು ಸಾರ್ವಜನಿಕ ಒಳಿತಿಗಾಗಿ ಎಐ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ: ಪ್ರಧಾನಮಂತ್ರಿ
Quoteಎಐ ಭವಿಷ್ಯವು ಉತ್ತಮವಾಗಿದೆ ಮತ್ತು ಎಲ್ಲರಿಗಾಗಿ ಇದೆ ಎಂದು ಖಚಿತಪಡಿಸಿಕೊಳ್ಳಲು ಭಾರತವು ತನ್ನ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಸಿದ್ಧವಾಗಿದೆ: ಪ್ರಧಾನಮಂತ್ರಿ

ಗೌರವಾನ್ವಿತರೇ,

ಮಿತ್ರರೇ,

ಸಣ್ಣ ಪ್ರಯೋಗದೊಂದಿಗೆ ಆರಂಭಿಸೋಣ.

ನೀವು ನಿಮ್ಮ ವೈದ್ಯಕೀಯ ವರದಿಯನ್ನು ಎಐ ಆಪ್‌ ನಲ್ಲಿ ಅಪ್ ಲೋಡ್ ಮಾಡಿದರೆ, ಅದು ಯಾವುದೇ ಗೊಂದಲಗಳಿಲ್ಲದೆ ಅದು ಸರಳ ಭಾಷೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿವರಿಸುತ್ತದೆ. ಆದರೆ, ನೀವು ಅದೇ ಅಪ್ಲಿಕೇಶನ್ ಅನ್ನು ಎಡಗೈಯಿಂದ ಬರೆಯುವವರ ಚಿತ್ರವನ್ನು ಬರೆಯಲು ಕೇಳಿದರೆ, ಅಪ್ಲಿಕೇಶನ್ ಹೆಚ್ಚಾಗಿ ಬಲಗೈಯಿಂದ ಬರೆಯುವವರನ್ನು ಸೆಳೆಯುತ್ತದೆ. ಏಕೆಂದರೆ ತರಬೇತಿ ಡೇಟಾವು ಅದನ್ನೇ ಮೇಲುಗೈ ಆಗುವಂತೆ ಮಾಡುತ್ತದೆ.

ಕೃತಕ ಬುದ್ಧಿಮತ್ತೆಯ (ಎಐ) ಸಕಾರಾತ್ಮಕ ಸಾಮರ್ಥ್ಯವು ಸಂಪೂರ್ಣವಾಗಿ ಅದ್ಭುತವಾಗಿದ್ದರೂ ನಾವು ಎಚ್ಚರಿಕೆಯಿಂದ ಯೋಚಿಸಬೇಕಾದ ಹಲವು ಪೂರ್ವಾಗ್ರಹ ಅಂಶಗಳಿವೆ ಎಂಬುದನ್ನು ಇದು ತೋರಿಸುತ್ತದೆ. ಅದಕ್ಕಾಗಿಯೇ ಈ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ  ಮತ್ತು ಅದರ ಸಹ-ಅಧ್ಯಕ್ಷತೆ ವಹಿಸಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್‌ಗೆ ನಾನು ಕೃತಜ್ಞನಾಗಿದ್ದೇನೆ.

 

 
|

ಮಿತ್ರರೇ,

ಎಐ ಈಗಾಗಲೇ ನಮ್ಮ ರಾಜಕೀಯ, ನಮ್ಮ ಆರ್ಥಿಕತೆ, ನಮ್ಮ ಭದ್ರತೆ ಮತ್ತು ನಮ್ಮ ಸಮಾಜವನ್ನು ಪುನರ್ ರೂಪಿಸುತ್ತಿದೆ. ಈ ಶತಮಾನದಲ್ಲಿ ಮಾನವೀಯತೆಯ ಸಂಕೇತವನ್ನು ಎಐ  ಬರೆಯುತ್ತಿದೆ. ಆದರೆ, ಇದು ಮಾನವ ಇತಿಹಾಸದಲ್ಲಿನ ಇತರ ತಂತ್ರಜ್ಞಾನ ಮೈಲಿಗಲ್ಲುಗಳಿಗಿಂತ ಅತ್ಯಂತ ಭಿನ್ನವಾಗಿದೆ.

ಎಐ ಅಭೂತಪೂರ್ವ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಮತ್ತು ಇನ್ನೂ ವೇಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ನಿಯೋಜಿಸಲಾಗುತ್ತಿದೆ. ಗಡಿಗಳಲ್ಲಿ ಆಳವಾದ ಪರಸ್ಪರ ಅವಲಂಬನೆಯೂ ಇದೆ. ಆದ್ದರಿಂದ, ಆಡಳಿತ ಮತ್ತು ಮಾನದಂಡಗಳನ್ನು ಸ್ಥಾಪಿಸಲು ಸಾಮೂಹಿಕ ಜಾಗತಿಕ ಪ್ರಯತ್ನಗಳ ಅವಶ್ಯಕತೆಯಿದೆ, ಅದು ನಮ್ಮ ಹಂಚಿಕೆಯ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ, ಅಪಾಯಗಳನ್ನು ಪರಿಹರಿಸುತ್ತದೆ ಮತ್ತು ವಿಶ್ವಾಸವನ್ನು ವೃದ್ಧಿಸುತ್ತದೆ.

ಆದರೆ, ಆಡಳಿತವು ಅಪಾಯಗಳು ಮತ್ತು ಪೈಪೋಟಿಯನ್ನು ನಿರ್ವಹಿಸುವುದರ ಬಗ್ಗೆ ಮಾತ್ರವಲ್ಲ. ಇದು ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಒಳಿತಿಗಾಗಿ ಅದನ್ನು ನಿಯೋಜಿಸುವುದರ ಬಗ್ಗೆಯೂ ಆಗಿದೆ. ಆದ್ದರಿಂದ, ನಾವು ಆಳವಾಗಿ ಯೋಚಿಸಬೇಕು ಮತ್ತು ನಾವೀನ್ಯತೆ ಮತ್ತು ಆಡಳಿತದ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು.

ಆಡಳಿತವು ಎಲ್ಲರಿಗೂ ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಸುಲಭ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವುದು. ಇಲ್ಲಿಯೇ ಸಾಮರ್ಥ್ಯಗಳ ಹೆಚ್ಚು ಕೊರತೆ ಇವೆ - ಅದು ಕಂಪ್ಯೂಟ್ ಪವರ್, ಪ್ರತಿಭೆ, ಡೇಟಾ ಅಥವಾ ಹಣಕಾಸು ಸಂಪನ್ಮೂಲಗಳಾಗಿರಬಹುದು.

ಮಿತ್ರರೇ,

ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಇನ್ನೂ ಹೆಚ್ಚಿನದನ್ನು ಸುಧಾರಿಸುವ ಮೂಲಕ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಲು ಕೃತಕ ಬುದ್ಧಿಮತ್ತೆ (ಎಐ) ಸಹಾಯ ಮಾಡುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪಯಣವನ್ನು ಸುಲಭಗೊಳಿಸುವುದು ಮತ್ತು ವೇಗದ ಜಗತ್ತನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ.

ಈ ಕಾರ್ಯವನ್ನು ಮಾಡಲು, ನಾವು ಸಂಪನ್ಮೂಲಗಳು ಮತ್ತು ಪ್ರತಿಭೆಗಳನ್ನು ಒಗ್ಗೂಡಿಸಬೇಕು. ನಂಬಿಕೆ ಮತ್ತು ಪಾರದರ್ಶಕತೆಯನ್ನು ವೃದ್ಶಿಸುವ ಮುಕ್ತ ಮೂಲ ವ್ಯವಸ್ಥೆಗಳನ್ನು ನಾವು ಅಭಿವೃದ್ಧಿಪಡಿಸಬೇಕು. ನಾವು ಪೂರ್ವಾಗ್ರಹಗಳಿಂದ ಮುಕ್ತವಾಗಿ ಗುಣಮಟ್ಟದ ಡೇಟಾ ಸೆಟ್‌ಗಳನ್ನು ನಿರ್ಮಿಸಬೇಕು. ನಾವು ತಂತ್ರಜ್ಞಾನವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು ಮತ್ತು ಜನ-ಕೇಂದ್ರಿತ ಅಪ್ಲಿಕೇಶನ್‌ಗಳನ್ನು ಸೃಷ್ಟಿಸಬೇಕು. ಸೈಬರ್ ಭದ್ರತೆ, ತಪ್ಪು ಮಾಹಿತಿ ಮತ್ತು ಡೀಪ್ ಫೇಕ್ ಗಳಿಗೆ ಸಂಬಂಧಿಸಿದ ಆತಂಕಗಳನ್ನು ನಾವು ಪರಿಹರಿಸಬೇಕು. ಮತ್ತು ತಂತ್ರಜ್ಞಾನವು ಪರಿಣಾಮಕಾರಿ ಮತ್ತು ಉಪಯುಕ್ತವಾಗಲು ಸ್ಥಳೀಯ ಪೂರಕ ವ್ಯವಸ್ಥೆಗಳಲ್ಲಿ ಬೇರೂರಿದೆ ಎಂದು ನಾವು ಖಾತ್ರಿಪಡಿಸಿಕೊಳ್ಳಬೇಕು.

 

 
|

ಮಿತ್ರರೇ,

ಉದ್ಯೋಗ ನಷ್ಟವು ಎಐನ ಅತ್ಯಂತ ಅಪಾಯಕಾರಿ ಅಡಚಣೆಯಾಗಿದೆ. ಆದರೆ, ತಂತ್ರಜ್ಞಾನದಿಂದಾಗಿ ಕೆಲಸವು ಕಣ್ಮರೆಯಾಗುವುದಿಲ್ಲವೆಂದು ಇತಿಹಾಸವು ತೋರಿಸಿಕೊಟ್ಟಿದೆ. ಅದರ ಸ್ವರೂಪ ಬದಲಾಗುತ್ತದೆ ಮತ್ತು ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎಐ-ಆಧರಿತ ಭವಿಷ್ಯಕ್ಕಾಗಿ ನಾವು ನಮ್ಮ ಜನರಲ್ಲಿ ಕೌಶಲ್ಯ ಮತ್ತು ಮರು-ಕೌಶಲ್ಯ ವೃದ್ಧಿಗೆ ಹಣ ಹೂಡಿಕೆ ಮಾಡಬೇಕಾಗಿದೆ.


ಮಿತ್ರರೇ,

ಎಐನ ಹೆಚ್ಚಿನ ಶಕ್ತಿಯ ತೀವ್ರತೆಯನ್ನು ಪರಿಶೀಲಿಸಬೇಕಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಅದಕ್ಕೆ ಅದರ ಭವಿಷ್ಯಕ್ಕಾಗಿ ಹಸಿರು ಇಂಧನ ಶಕ್ತಿಯ ಅಗತ್ಯವಿರುತ್ತದೆ.

ಭಾರತ ಮತ್ತು ಫ್ರಾನ್ಸ್ ಸೂರ್ಯನ ಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ಉಪಕ್ರಮಗಳ ಮೂಲಕ ವರ್ಷಗಳಿಂದ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ. ನಾವು ನಮ್ಮ ಪಾಲುದಾರಿಕೆಯನ್ನು ಎಐಗೆ ಮುನ್ನಡೆಸುತ್ತಿದ್ದಂತೆ, ಚುರುಕಾದ ಮತ್ತು ಜವಾಬ್ದಾರಿಯುತ ಭವಿಷ್ಯವನ್ನು ರೂಪಿಸಲು ಇದು ಸುಸ್ಥಿರತೆಯಿಂದ ನಾವೀನ್ಯತೆಗೆ ಸಾಗುವುದು ನೈಸರ್ಗಿಕ ಪ್ರಗತಿಯಾಗಿದೆ.

ಅದೇ ವೇಳೆ ಸುಸ್ಥಿರ ಎಐ ಎಂದರೆ ಶುದ್ಧ ಇಂಧನವನ್ನ  ಬಳಸುವುದು ಎಂದರ್ಥವಲ್ಲ. ಎಐ ಮಾದರಿಗಳ ಗಾತ್ರ, ದತ್ತಾಂಶ ಅಗತ್ಯತೆಗಳು ಮತ್ತು ಸಂಪನ್ಮೂಲ ಅವಶ್ಯಕತೆಗಳಲ್ಲಿಯೂ ಸಹ ಪರಿಣಾಮಕಾರಿ ಮತ್ತು ಸುಸ್ಥಿರವಾಗಿರಬೇಕು. ನಂತರ ಮಾನವ ಮೆದುಳು ಹೆಚ್ಚಿನ ಲೈಟ್‌ಬಲ್ಬ್‌ಗಳಿಗಿಂತ ಕಡಿಮೆ ಶಕ್ತಿಯನ್ನು ಬಳಸಿಕೊಂಡು ಕಾವ್ಯವನ್ನು ರಚಿಸಲು ಮತ್ತು ಬಾಹ್ಯಾಕಾಶ ಹಡಗುಗಳನ್ನು ವಿನ್ಯಾಸಗೊಳಿಸಲು ನಿರ್ವಹಿಸುತ್ತದೆ.

ಮಿತ್ರರೇ,

ಭಾರತವು 1.4 ಶತಕೋಟಿಗೂ ಅಧಿಕ ಜನರಿಗೆ ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಯಶಸ್ವಿಯಾಗಿ ನಿರ್ಮಿಸಿದೆ. ಅದನ್ನು ಮುಕ್ತ ಮತ್ತು ಲಭ್ಯತೆಯ ಜಾಲದ ಸುತ್ತಲೂ ನಿರ್ಮಿಸಲಾಗಿದೆ. ನಮ್ಮ ಆರ್ಥಿಕತೆಯನ್ನು ಆಧುನೀಕರಿಸಲು, ಆಡಳಿತವನ್ನು ಸುಧಾರಿಸಲು ಮತ್ತು ನಮ್ಮ ಜನರ ಜೀವನವನ್ನು ಪರಿವರ್ತಿಸಲು ಈ ನಿಯಮಗಳು ಮತ್ತು ವ್ಯಾಪಕ ಶ್ರೇಣಿಯಲ್ಲಿ ಅನ್ವಯಿಸಲಾಗುತ್ತಿದೆ.

ನಮ್ಮ ದತ್ತಾಂಶ ಸಬಲೀಕರಣ ಮತ್ತು ರಕ್ಷಣಾ ವಾಸ್ತುಶಿಲ್ಪದ ಮೂಲಕ ನಾವು ದತ್ತಾಂಶದ ಶಕ್ತಿಯನ್ನು ಸಮರ್ಪಕವಾಗಿ ಬಳಸುತ್ತಿದ್ದೇವೆ. ಮತ್ತು ನಾವು ಡಿಜಿಟಲ್ ವಾಣಿಜ್ಯವನ್ನು  ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದೇವೆ. ಈ ದೂರದೃಷ್ಟಿಯು ಭಾರತದ ರಾಷ್ಟ್ರೀಯ ಎಐ ಮಿಷನ್‌ನ ಅಡಿಪಾಯವಾಗಿದೆ.

ಅದಕ್ಕಾಗಿಯೇ ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ನಾವು ಜವಾಬ್ದಾರಿಯುತವಾಗಿ, ಒಳ್ಳೆಯದಕ್ಕಾಗಿ ಮತ್ತು ಎಲ್ಲರಿಗೂ ಎಐ ಅನ್ನು ಬಳಸಿಕೊಳ್ಳುವ ಬಗ್ಗೆ ಸಹಮತವನ್ನು ರೂಪಿಸಿದ್ದೇವೆ. ಇಂದು ಭಾರತವು ಎಐ ಅಳವಡಿಕೆಯಲ್ಲಿ ಮತ್ತು ದತ್ತಾಂಶ ಗೌಪ್ಯತೆಯ ಕುರಿತು ತಾಂತ್ರಿಕ-ಕಾನೂನು ಪರಿಹಾರಗಳಲ್ಲಿ ಮುಂಚೂಣಿಯಲ್ಲಿದೆ.

 

 
|

ಸಾರ್ವಜನಿಕ ಒಳಿತಿಗಾಗಿ ನಾವು ಕೃತಕ ಬುದ್ಧಿಮತ್ತೆ (ಎಐ) ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಮ್ಮಲ್ಲಿ ವಿಶ್ವದ ಅತಿದೊಡ್ಡ ಎಐ ಪ್ರತಿಭಾ ಸಂಪನ್ಮೂಲವಿದೆ. ನಮ್ಮ ವೈವಿಧ್ಯತೆಯನ್ನು ಪರಿಗಣಿಸಿ ಭಾರತ ತನ್ನದೇ ಆದ ದೊಡ್ಡ ಭಾಷಾ ಮಾದರಿಯನ್ನು ನಿರ್ಮಿಸುತ್ತಿದೆ. ಕಂಪ್ಯೂಟ್ ಪವರ್‌ನಂತಹ ಸಂಪನ್ಮೂಲಗಳನ್ನು ಸಂಗ್ರಹಿಸಲು ನಮ್ಮಲ್ಲಿ ವಿಶಿಷ್ಟವಾದ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯೂ ಇದೆ. ಅದನ್ನು ನಮ್ಮ ನವೋದ್ಯಮಗಳು ಮತ್ತು ಸಂಶೋಧಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಮತ್ತು ಎಐನ ಭವಿಷ್ಯವು ಎಲ್ಲರಿಗೂ ಒಳ್ಳೆಯದು ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಭಾರತ ತನ್ನ ಅನುಭವ ಮತ್ತು ನೈಪುಣ್ಯತೆಯನ್ನು ಹಂಚಿಕೊಳ್ಳಲು ಸಿದ್ಧವಾಗಿದೆ.

 

 
|

ಮಿತ್ರರೇ,

ಮಾನವೀಯತೆಯ ಹಾದಿಯನ್ನು ರೂಪಿಸುವ ಎಐ ಯುಗದ ಉದಯದಲ್ಲಿದ್ದೇವೆ. ಯಂತ್ರಗಳು ಮನುಷ್ಯರಿಗಿಂತ ಬುದ್ಧಿವಂತಿಕೆಯಲ್ಲಿ ಶ್ರೇಷ್ಠವಾಗುತ್ತಿವೆ ಎಂದು ಕೆಲವರು ಚಿಂತಿಸುತ್ತಾರೆ. ಆದರೆ, ನಮ್ಮ ಸಾಮೂಹಿಕ ಭವಿಷ್ಯ ಮತ್ತು ಹಂಚಿಕೆಯ ಹಣೆಬರಹದ ಕೀಲಿಕೈಯನ್ನು ಮನುಷ್ಯರಾದ ನಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಹೊಂದಿಲ್ಲ.

ಆ ಜವಾಬ್ದಾರಿಯ ಪ್ರಜ್ಞೆ ನಮಗೆ ಮಾರ್ಗದರ್ಶನ ನೀಡಬೇಕು.

ಧನ್ಯವಾದಗಳು.

 

  • Ratnesh Pandey April 10, 2025

    भारतीय जनता पार्टी ज़िंदाबाद ।। जय हिन्द ।।
  • Jitendra Kumar April 10, 2025

    🇮🇳🙏❤️
  • Gaurav munday April 09, 2025

    😘🤣🤣😛😛
  • प्रभात दीक्षित April 06, 2025

    वन्देमातरम वन्देमातरम वन्देमातरम
  • प्रभात दीक्षित April 06, 2025

    वन्देमातरम वन्देमातरम
  • प्रभात दीक्षित April 06, 2025

    वन्देमातरम
  • Dharam singh April 03, 2025

    जय श्री राम जय जय श्री राम
  • Dharam singh April 03, 2025

    जय श्री राम
  • Sekukho Tetseo March 29, 2025

    Elon Musk say's - I am a FAN of MODI.
  • Prasanth reddi March 21, 2025

    జై బీజేపీ జై మోడీజీ 🪷🪷🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Rs 1332 cr project: Govt approves doubling of Tirupati-Pakala-Katpadi single railway line section

Media Coverage

Rs 1332 cr project: Govt approves doubling of Tirupati-Pakala-Katpadi single railway line section
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಎಪ್ರಿಲ್ 2025
April 10, 2025

Citizens Appreciate PM Modi’s Vision: Transforming Rails, Roads, and Skies