ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ಕಲಾವತಿ ದೇವಿ ಅವರ ಜೀವನಗಾಥೆ ಅತ್ಯಂತ ಅಪ್ರತಿಮವಾದುದು, ಆಕೆ ಸಹಸ್ರಾರು ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಅವರು ಪ್ರಧಾನಮಂತ್ರಿ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಇಂದು ಬಳಸಿಕೊಂಡು, ಯಾರಿಗೆ ಶೌಚಾಲಯ ನಿರ್ಮಿಸುವ ಶಕ್ತಿ ಇಲ್ಲವೋ ಅಂತಹವರಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಸ್ಫೂರ್ತಿದಾಯಕ ಕತೆಯನ್ನು ಹಂಚಿಕೊಂಡಿದ್ದಾರೆ.
ಆಕೆ ತಮ್ಮ ಗ್ರಾಮದಲ್ಲಿ ಜನರಿಂದ ಹಣ ಸಂಗ್ರಹಿಸಿದ್ದಾರೆ ಮತ್ತು ಶುಚಿತ್ವದ ಪ್ರಾಮುಖ್ಯತೆ ಬಗ್ಗೆ ಜನರನ್ನು ಒಟ್ಟುಗೂಡಿಸಿ ಜಾಗೃತಿ ಮೂಡಿಸಿದ್ದಾರೆ. ಅವರು ತಮ್ಮ ದೃಢ ಸಂಕಲ್ಪದೊಂದಿಗೆ ಸಾವಿರಾರು ಶೌಚಾಲಯಗಳನ್ನು ನಿರ್ಮಿಸಿದ್ದಾರೆ ಮತ್ತು ಜನರಿಗೆ ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳಲು ಪ್ರೋತ್ಸಾಹ ನೀಡಿದ್ದಾರೆ. ಅವರು “ಆರೋಗ್ಯವಂತರಾಗಿರಲು ಶುಚಿತ್ವ ಅತ್ಯಗತ್ಯ” ಎಂದು ಹೇಳಿದ್ದಾರೆ.
ದೇಶದ ಎಲ್ಲ ಮಹಿಳೆಯರಿಗೆ ಕಲಾವತಿ ದೇವಿ ಸಂದೇಶ ನೀಡಿದ್ದಾರೆ. ಅವರು “ಸಮಾಜವನ್ನು ಮುನ್ನಡೆಸುವ ಯಾವುದೇ ಪ್ರಾಮಾಣಿಕ ಪ್ರಯತ್ನಗಳಿಗೆ ಎಂದಿಗೂ ಸೋಲಿಲ್ಲ, ನೀವು ಮನೆಯಿಂದ ಹೊರಬನ್ನಿ, ಕೆಲವರು ನಿಮ್ಮನ್ನು ವಿರೋಧಿಸಬಹುದು ಅಥವಾ ವಾದಿಸಬಹುದು, ಅವರನ್ನು ಬಿಟ್ಟುಬಿಡಿ, ನೀವು ನಿಮ್ಮ ಗುರಿ ಸಾಧಿಸಬೇಕೆಂಬ ಮನಸ್ಸನ್ನು ಹೊಂದಿದ್ದರೆ ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬೇಡಿ” ಎಂದರು.
मैं जिस जगह पे रहती थी, वहां हर तरफ गंदगी ही गंदगी थी। लेकिन दृढ़ विश्वास था कि स्वच्छता के जरिए हम इस स्थिति को बदल सकते हैं।
— Narendra Modi (@narendramodi) March 8, 2020
लोगों को समझाने का फैसला किया। शौचालय बनाने के लिए घूम-घूमकर एक-एक पैसा इकट्ठा किया।
आखिरकार सफलता हाथ लगी।
कलावती देवी, कानपुर #SheInspiresUs pic.twitter.com/t9b6deXt4g