ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವರ್ಷದ ಆಚರಣೆಯು ಇದರೊಂದಿಗೆ ಪ್ರಾರಂಭವಾಗುತ್ತದೆ
ಪ್ರಧಾನಮಂತ್ರಿಯವರು 6640 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಪ್ರಧಾನಮಂತ್ರಿಯವರು ಬುಡಕಟ್ಟು ಸಮುದಾಯಗಳ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಸಂರಕ್ಷಿಸಲು ಎರಡು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳು ಮತ್ತು ಎರಡು ಬುಡಕಟ್ಟು ಸಂಶೋಧನಾ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ
ಬುಡಕಟ್ಟು ಸಮುದಾಯಗಳ ಜೀವನ ಸೌಕರ್ಯವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವ ಬಹು ಯೋಜನೆಗಳಿಗೆ ಚಾಲನೆ
ಪ್ರಧಾನಮಂತ್ರಿಯವರು ಪಿಎಂ-ಜನ್‌ ಮನ್ ಅಡಿಯಲ್ಲಿ ನಿರ್ಮಿಸಲಾದ 11,000 ಮನೆಗಳ ಗೃಹಪ್ರವೇಶದಲ್ಲಿ ಭಾಗವಹಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 15 ರಂದು ಬುಡಕಟ್ಟು ಗೌರವ  ದಿನವನ್ನು ಆಚರಿಸಲು ಬಿಹಾರದ ಜಮುಯಿಗೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಧರ್ತಿ ಅಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಬಿರ್ಸಾ ಮುಂಡಾ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಪ್ರಧಾನಮಂತ್ರಿಯವರು ಅನಾವರಣಗೊಳಿಸಲಿದ್ದಾರೆ. ಅವರು ಬುಡಕಟ್ಟು ಸಮುದಾಯಗಳ ಉನ್ನತಿಗೆ ಮತ್ತು ಪ್ರದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ 6,640 ಕೋಟಿ ರೂಪಾಯಿಗಳ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನ್‌ ಮನ್) ಅಡಿಯಲ್ಲಿ ನಿರ್ಮಿಸಲಾದ 11,000  ಮನೆಗಳ ಪ್ರವೇಶದಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸಲಿದ್ದಾರೆ. ಅವರು ಪಿಎಂ-ಜನ್‌ ಮನ್ ಅಡಿಯಲ್ಲಿ ಪ್ರಾರಂಭಿಸಲಾದ 23 ಮೊಬೈಲ್ ವೈದ್ಯಕೀಯ ಘಟಕ (MMU)ಗಳನ್ನು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಪ್ರವೇಶವನ್ನು ಹೆಚ್ಚಿಸಲು ಧರ್ತಿ ಅಬಾ ಜಂಜಾಟಿಯ ಗ್ರಾಮ ಉತ್ಕರ್ಷ್ ಅಭಿಯಾನ (DAJGUA) ಅಡಿಯಲ್ಲಿ ಹೆಚ್ಚುವರಿ 30 MMU ಗಳನ್ನು ಉದ್ಘಾಟಿಸಲಿದ್ದಾರೆ.

ಬುಡಕಟ್ಟು ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಜೀವನೋಪಾಯಕ್ಕೆ ಸಹಾಯ ಮಾಡಲು 300 ವನ್ ಧನ್ ವಿಕಾಸ ಕೇಂದ್ರ ((VDVK)ಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ 10 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ. ಅವರು ಬುಡಕಟ್ಟು ಸಮುದಾಯಗಳ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ದಾಖಲಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಮಧ್ಯಪ್ರದೇಶದ ಛಿಂದ್ವಾರಾ ಮತ್ತು ಜಬಲ್ಪುರದಲ್ಲಿ ಎರಡು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಮತ್ತು ಶ್ರೀನಗರ , ಜಮ್ಮು ಮತ್ತು ಕಾಶ್ಮೀರ ಮತ್ತು ಸಿಕ್ಕಿಂನ ಗ್ಯಾಂಗ್‌ ಟಾಕ್ ಎರಡು ಬುಡಕಟ್ಟು ಸಂಶೋಧನಾ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ.

ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸಲು 500 ಕಿ. ಮೀ. ಹೊಸ ರಸ್ತೆಗಳು ಮತ್ತು ಪಿಎಂ-ಜನ್‌ ಮನ್ ಅಡಿಯಲ್ಲಿ ಸಮುದಾಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು 100 ಬಹು ಉದ್ದೇಶದ ಕೇಂದ್ರ (ಎಂಪಿಸಿ)ಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುವ 1,110 ಕೋಟಿ ರೂಪಾಯಿ ಮೌಲ್ಯದ 25 ಹೆಚ್ಚುವರಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪಿಎಂ-ಜನ್‌ ಮನ್‌ ಅಡಿಯಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ 25,000 ಹೊಸ ಮನೆಗಳು ಮತ್ತು ಧರ್ತಿ ಅಬಾ ಬುಡಕಟ್ಟು ಗ್ರಾಮ ಉತ್ಕರ್ಷ್ ಅಭಿಯಾನದ (DAJGUA) ಅಡಿಯಲ್ಲಿ 1,960 ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದಲ್ಲಿ 1.16 ಲಕ್ಷ ಮನೆಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿವರು ಅನುಮೋದನೆ ನೀಡಲಿದ್ದಾರೆ;  ಪಿಎಂ-ಜನ್‌ ಮನ್ ಅಡಿಯಲ್ಲಿ 66 ಹಾಸ್ಟೆಲ್‌ ಗಳು ಮತ್ತು DAJGUA ಅಡಿಯಲ್ಲಿ 304 ಹಾಸ್ಟೆಲ್‌ ಗಳ ನಿರ್ಮಾಣ, ಇದಕ್ಕೆ 1100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗುತ್ತವೆ.  ಪಿಎಂ-ಜನ್‌ ಮನ್ ಅಡಿಯಲ್ಲಿ 50 ಹೊಸ ಬಹುಪಯೋಗಿ ಕೇಂದ್ರಗಳು, 55 ಸಂಚಾರಿ ವೈದ್ಯಕೀಯ ಘಟಕಗಳು ಮತ್ತು 65 ಅಂಗನವಾಡಿ ಕೇಂದ್ರಗಳು; ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆಗಾಗಿ 6 ​​ಸ್ಪರ್ಧಾತ್ಮಕ ಕೇಂದ್ರಗಳು ಮತ್ತು DAJGUA ಅಡಿಯಲ್ಲಿ ಆಶ್ರಮ ಶಾಲೆಗಳು, ಹಾಸ್ಟೆಲ್‌ ಗಳು, ಸರ್ಕಾರಿ ವಸತಿ ಶಾಲೆಗಳ ಉನ್ನತೀಕರಣಕ್ಕಾಗಿ ಸುಮಾರು 500 ಕೋಟಿ ಮೌಲ್ಯದ 330 ಯೋಜನೆಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi