ಯುವಜನರಿಗಾಗಿ 'ಮೇರಾ ಯುವ ಭಾರತ್' (ಮೈ ಭಾರತ್) ವೇದಿಕೆಗೆ ಚಾಲನೆ ನೀಡಲು ಪ್ರಧಾನಮಂತ್ರಿಯವರು ದೇಶದ ಸಾವಿರಾರು ಅಮೃತ ಕಲಶ ಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಕರ್ತವ್ಯ ಪಥದಲ್ಲಿ ʼಮೇರಿ ಮಾಟಿ ಮೇರಾ ದೇಶ್‌ʼನ ಅಂತಿಮ ಕಾರ್ಯಕ್ರಮವು ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉತ್ಸಾಹಕರ ಭಾಗವಹಿಸುವಿಕೆಯನ್ನು ಕಂಡಿತು.
ದೇಶದ ಯುವಕರು ʼಏಕ ಭಾರತ ಶ್ರೇಷ್ಠ ಭಾರತʼದ ದೃಷ್ಟಿಯನ್ನು ಬಲಪಡಿಸುತ್ತಿದ್ದಾರೆ: ಅನುರಾಗ್ ಸಿಂಗ್ ಠಾಕೂರ್
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಅವರು ಈ ಸಂದರ್ಭದಲ್ಲಿ ದೇಶಾದ್ಯಂತದ ಸಾವಿರಾರು ಅಮೃತ ಕಲಶ ಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಪ್ರಧಾನಮಂತ್ರಿಯವರು ದೇಶದ ಯುವಕರಿಗಾಗಿ 'ಮೇರಾ ಯುವ ಭಾರತ್ (ಮೈ ಭಾರತ್) ವೇದಿಕೆಗೆ ಚಾಲನೆ ನೀಡಲಿದ್ದಾರೆ.
ದೇಶಾದ್ಯಂತ ಅಮೃತ ಕಲಶ ಯಾತ್ರೆಯನ್ನು ದಿನಪೂರ್ತಿ ಆಚರಿಸುವ ಕಾರ್ಯಕ್ರಮವು ದೇಶದ ಮೂಲೆ ಮೂಲೆಯಿಂದ ಅತ್ಯುತ್ಸಾಹದಿಂದ ವ್ಯಾಪಕವಾದ ಭಾಗವಹಿಸುವಿಕೆಯನ್ನು ಕಂಡಿತು. ಕಾರ್ಯಕ್ರಮವು ಬಿಎಸ್‌ಎಫ್‌, ಸಿಐಎಸ್‌ಎಫ್‌ ಮತ್ತು ಸಿಆರ್‌ ಪಿ ಎಫ್‌ ನ ನಮ್ಮ ವೀರ ಸೈನಿಕರಿಂದ ಬ್ಯಾಂಡ್ ಪ್ರದರ್ಶನಗಳನ್ನು ಒಳಗೊಂಡಿತ್ತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 31 ಅಕ್ಟೋಬರ್ 2023 ರಂದು ಸಂಜೆ 5 ಗಂಟೆಗೆ ಕಾರ್ತವ್ಯ ಪಥದಲ್ಲಿ ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್) ಅಭಿಯಾನದ ಅಮೃತ ಕಲಶ ಯಾತ್ರೆಯ ಸಮಾರೋಪವನ್ನು ಸೂಚಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಆಜಾದಿ ಕಾ ಅಮೃತ ಮಹೋತ್ಸವದ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಸಮಾರೋಪ ಸಮಾರಂಭವನ್ನು ಆಚರಿಸುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಅವರು ಈ ಸಂದರ್ಭದಲ್ಲಿ ದೇಶಾದ್ಯಂತದ ಸಾವಿರಾರು ಅಮೃತ ಕಲಶ ಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಪ್ರಧಾನಮಂತ್ರಿಯವರು ದೇಶದ ಯುವಕರಿಗಾಗಿ 'ಮೇರಾ ಯುವ ಭಾರತ್ (ಮೈ ಭಾರತ್) ವೇದಿಕೆಗೆ ಚಾಲನೆ ನೀಡಲಿದ್ದಾರೆ.

ಕರ್ತವ್ಯ ಪಥವು ಏಕ ಭಾರತ ಶ್ರೇಷ್ಠ ಭಾರತದ ಸ್ಪೂರ್ತಿಯೊಂದಿಗೆ ಪ್ರತಿಧ್ವನಿಸುತ್ತದೆ

ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್) ಅಭಿಯಾನದ ಅಂತಿಮ ಕಾರ್ಯಕ್ರಮವು ರಾಷ್ಟ್ರದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉತ್ಸಾಹಕರ ಭಾಗವಹಿಸುವಿಕೆಯನ್ನು ಕಂಡಿತು, ಇದು ʼಏಕ ಭಾರತ ಶ್ರೇಷ್ಠ ಭಾರತʼದ ನಿಜವಾದ ಮನೋಭಾವವನ್ನು ಸಾಕಾರಗೊಳಿಸಿತು. ದೇಶದ 766 ಜಿಲ್ಲೆಗಳ 7000 ಬ್ಲಾಕ್‌ಗಳಿಂದ 25,000 ಅಮೃತ ಕಲಶ ಯಾತ್ರಿಗಳು ಕರ್ತವ್ಯ ಪಥ, ವಿಜಯ್ ಚೌಕ್‌ ನಲ್ಲಿ ದೇಶಭಕ್ತಿಯ ಹಾಡುಗಳು ಮತ್ತು ಮನೋಹರವಾಗಿ ನೃತ್ಯ ಸಂಯೋಜನೆಯ ಸಾಂಸ್ಕೃತಿಕ ನೃತ್ಯ ಪ್ರಸ್ತುತಿಗಳೊಂದಿಗೆ ಮೆರವಣಿಗೆ ನಡೆಸಿದರು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಗಳು ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಮೃತ ಕಲಶದಿಂದ ಮಣ್ಣು ಮತ್ತು ಅಕ್ಕಿಯನ್ನು ಒಂದು ಬೃಹತ್‌ ಅಮೃತ ಕಲಶದೊಳಗೆ ಸುರಿದು ನಮ್ಮ ಮಹಾನ್ ರಾಷ್ಟ್ರದ ಬಹುತ್ವದಲ್ಲಿ ಏಕತೆಯನ್ನು ಸಾಕಾರಗೊಳಿಸಿದರು.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅಮೃತ ಕಲಶದೊಳಗೆ ಮಣ್ಣನ್ನು ಸುರಿದರು. ಈ ಸಂದರ್ಭದಲ್ಲಿ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ ಮಹೋತ್ಸವ) ವನ್ನು ಆಚರಿಸಿತು ಮತ್ತು ಅದರ ಅಡಿಯಲ್ಲಿ ಆಯೋಜಿಸಲಾದ ಲಕ್ಷಾಂತರ ಕಾರ್ಯಕ್ರಮಗಳಲ್ಲಿ ಕೋಟ್ಯಂತರ ಜನರು ಭಾಗವಹಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಮೇರಿ ಮಾಟಿ ಮೇರಾ ದೇಶ್” (ನನ್ನ ಮಣ್ಣು ನನ್ನ ದೇಶ) ಕಾರ್ಯಕ್ರಮದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಕರೆ ನೀಡಿದರು ಮತ್ತು ಭಾರತದ ಆರು ಲಕ್ಷ ಹಳ್ಳಿಗಳಲ್ಲಿ ಅಮೃತ ಕಲಶ ಯಾತ್ರೆಗಳನ್ನು ಆಯೋಜಿಸಲಾಗಿತ್ತು ಮತ್ತು ದೇಶದ ವಿವಿಧ ಮೂಲೆಗಳಿಂದ ಮಣ್ಣನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು. ಇಂದು ಕರ್ತವ್ಯ ಪಥದಲ್ಲಿ ಸೇರಿದ್ದ ಜನಸಾಗರವು ನೆಲದ ಮಣ್ಣಿಗೆ ಮತ್ತು ಹುತಾತ್ಮರಿಗೆ ನಮನ ಸಲ್ಲಿಸುವ ಮೂಲಕ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಿದರು. ದೇಶದ ಯುವಜನತೆ ಏಕ ಭಾರತ ಶ್ರೇಷ್ಠ ಭಾರತದ ದೃಷ್ಟಿಯನ್ನು ಬಲಪಡಿಸುತ್ತಿದ್ದಾರೆ ಎಂದು ಹೇಳಿದರು.

ದೇಶಾದ್ಯಂತ ಅಮೃತ ಕಲಶ ಯಾತ್ರೆಯನ್ನು ದಿನಪೂರ್ತಿ ಆಚರಿಸುವ ಕಾರ್ಯಕ್ರಮವು ದೇಶದ ಮೂಲೆ ಮೂಲೆಯಿಂದ ಅತ್ಯುತ್ಸಾಹದಿಂದ ವ್ಯಾಪಕವಾದ ಭಾಗವಹಿಸುವಿಕೆಯನ್ನು ಕಂಡಿತು. ಕಾರ್ಯಕ್ರಮವು ಬಿಎಸ್‌ಎಫ್‌, ಸಿಐಎಸ್‌ಎಫ್‌ ಮತ್ತು ಸಿಆರ್‌ ಪಿ ಎಫ್‌ ನ ನಮ್ಮ ವೀರ ಸೈನಿಕರಿಂದ ಬ್ಯಾಂಡ್ ಪ್ರದರ್ಶನಗಳನ್ನು ಒಳಗೊಂಡಿತ್ತು.

ಮೇರಿ ಮಾಟಿ ಮೇರಾ ದೇಶ್ ಅಭಿಯಾನವು ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದ ವೀರರು ಮತ್ತು ವೀರಾಂಗನೆಯರಿಗೆ ಸಲ್ಲಿಸುವ ಗೌರವವಾಗಿದೆ. ʼಜನರ ಭಾಗವಹಿಸುವಿಕೆʼಯ ಮುಖಾಮತರ ಅಭಿಯಾನವು ದೇಶದಾದ್ಯಂತ ಪಂಚಾಯತಿ / ಗ್ರಾಮ, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಸಲಾದ ಅನೇಕ ಚಟುವಟಿಕೆಗಳು ಮತ್ತು ಸಮಾರಂಭಗಳನ್ನು ಒಳಗೊಂಡಿದೆ.

ಮೇರಿ ಮಾಟಿ ಮೇರಾ ದೇಶ್ ಅಭಿಯಾನವನ್ನು 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂತಿಮ ಕಾರ್ಯಕ್ರಮವಾಗಿ ಆಯೋಜಿಸಲಾಗಿತ್ತು. ಆಜಾದಿ ಕಾ ಅಮೃತ ಮಹೋತ್ಸವವು (ಸ್ವಾತಂತ್ರ್ಯದ ಅಮೃತ ಮಹೋತ್ಸವ) 12 ಮಾರ್ಚ್ 2021 ರಂದು ಭಾರತದ ಸ್ವಾತಂತ್ರ್ಯ ಪಡೆದ 75 ವರ್ಷಗಳನ್ನು ಆಚರಿಸಲು ಪ್ರಾರಂಭವಾಯಿತು. ಅಂದಿನಿಂದ ಇದು ಉತ್ಸಾಹದಿಂದ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ಆಯೋಜಿಸಲಾದ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.

ಮೈ ಭಾರತ್ ಬಗ್ಗೆ

ಮೇರಾ ಯುವ ಭಾರತ್ (MY Bharat–ಮೈ ಭಾರತ್‌ ) ಅನ್ನು ದೇಶದ ಯುವಕರಿಗೆ ಒಂದು ಸಂಪೂರ್ಣವಾಗಿ ಸರ್ಕಾರದ ವೇದಿಕೆಯಾಗಿ ಸೇವೆ ಸಲ್ಲಿಸಲು ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಗುತ್ತಿದೆ. ಇದು ದೇಶದ ಪ್ರತಿಯೊಬ್ಬ ಯುವಕರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ʼಮೈ ಭಾರತ್ʼ ಸರ್ಕಾರದ ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥ ವ್ಯವಸ್ಥೆಯನ್ನು ಒದಗಿಸಲು, ಅವರು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಮತ್ತು 'ಅಭಿವೃದ್ಧಿ ಹೊಂದಿದ ಭಾರತ'ದ ನಿರ್ಮಾಣಕ್ಕೆ ಕೊಡುಗೆ ನೀಡಬಹುದು. ಮೈ ಭಾರತ್‌ ನ ಗುರಿಯು ಯುವಕರನ್ನು ಸಮುದಾಯ ಬದಲಾವಣೆಯ ಪ್ರತಿನಿಧಿ ಮತ್ತು ರಾಷ್ಟ್ರ ಕಟ್ಟುವವರಾಗಲು ಪ್ರೇರೇಪಿಸುವುದು ಮತ್ತು ಸರ್ಕಾರ ಮತ್ತು ನಾಗರಿಕರ ನಡುವೆ 'ಯುವ ಸೇತು' ಆಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ರೀತಿ, 'ಮೈ ಭಾರತ್' ದೇಶದಲ್ಲಿ 'ಯುವ ನೇತೃತ್ವದ ಅಭಿವೃದ್ಧಿ'ಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSME exports touch Rs 9.52 lakh crore in April–September FY26: Govt tells Parliament

Media Coverage

MSME exports touch Rs 9.52 lakh crore in April–September FY26: Govt tells Parliament
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2025
December 21, 2025

Assam Rising, Bharat Shining: PM Modi’s Vision Unlocks North East’s Golden Era