Quoteನೌಶೇರಾದ ಹೀರೊಗಳಾದ ಬ್ರಿಗೇಡಿಯರ್‌ ಉಸ್ಮಾನ್, ನಾಯ್ಕ್‌ ಜಾದುನಾಥ್ ಸಿಂಗ್, ಲೆಫ್ಟಿನೆಂಟ್ ಆರ್.ಆರ್. ರಾಣೆ ಮತ್ತು ಇತರರಿಗೆ ಗೌರವ ಸಲ್ಲಿಸಿದರು
Quote"ನಾನು ನಿಮಗಾಗಿ 130 ಕೋಟಿ ಭಾರತೀಯರ ಶುಭಾಶಯಗಳನ್ನು ತಂದಿದ್ದೇನೆ"
Quote"ಸ್ವಾತಂತ್ರ್ಯದ 'ಅಮೃತ್ ಕಾಲ'ದಲ್ಲಿರುವ ಇಂದಿನ ಭಾರತವು ಅದರ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಬಗ್ಗೆ ಜಾಗರೂಕವಾಗಿದೆ"
Quote"ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ, ಜೈಸಲ್ಮೇರ್‌ನಿಂದ ಅಂಡಮಾನ್ ನಿಕೋಬಾರ್‌ವರೆಗೆ ಗಡಿ ಪ್ರದೇಶಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ಸಂಪರ್ಕಜಾಲವನ್ನು ಅಭಿವೃದ್ಧಿಪಡಿಸಲಾಗಿದೆ, ಇದು ಮೂಲಸೌಕರ್ಯದಲ್ಲಿ ಅಭೂತಪೂರ್ವ ಸುಧಾರಣೆ ಮತ್ತು ಸೈನಿಕರ ಅನುಕೂಲಕ್ಕೆ ದಾರಿ ಮಾಡಿದೆ"
Quote"ದೇಶದ ರಕ್ಷಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೊಸ ಎತ್ತರಕ್ಕೆ ತಲುಪುತ್ತಿದೆ"
Quote"ಭಾರತೀಯ ಸಶಸ್ತ್ರ ಪಡೆಗಳು ವಿಶ್ವದ ಶ್ರೇಷ್ಠ ಸಶಸ್ತ್ರ ಪಡೆಗಳಂತೆ ವೃತ್ತಿಪರವಾಗಿವೆ, ಆದರೆ ನಮ್ಮ ಯೋಧರು ತಮ್ಮ ಮಾನವೀಯ ಮೌಲ್ಯಗಳಿಂದಾಗಿ ವಿಭಿನ್ನ ಮತ್ತು ಅಸಾಧಾರಣರೆನಿಸಿದ್ದಾರೆ"
Quote"ನಾವು ರಾಷ್ಟ್ರವನ್ನು ಕೇವಲ ಸರಕಾರ, ಅಧಿಕಾರ ಅಥವಾ ಸಾಮ್ರಾಜ್ಯ ಎಂದು ಗ್ರಹಿಸುವುದಿಲ್ಲ. ನಮ್ಮ ಪಾಲಿಗೆ ಅದೊಂದು ಜೀವ, ಅದಕ್ಕೊಂದು ಆತ್ಮವಿದೆ. ಇದನ್ನು ರಕ್ಷಿಸುವುದು ಎಂದರೆ ಕೇವಲ ಭೌಗೋಳಿಕ ಗಡಿಗಳನ್ನು ಕಾಯುವುದಕ್ಕಷ್ಟೇ ಸೀಮಿತವಾಗಿಲ್ಲ. ನಮಗೆ ರಾ

ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿದ ಬಳಿಕ ತಮ್ಮ ಹಿಂದಿನ ಎಲ್ಲಾ ವರ್ಷಗಳಂತೆಯೇ ಈ ವರ್ಷವೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸಿದರು. ಅವರು ಇಂದು ಜಮ್ಮು ಕಾಶ್ಮೀರದ ನೌಶೇರಾ ಜಿಲ್ಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಭೇಟಿ ಮಾಡಿದರು.

|

 

|

 

|

 

|

 

|

 

|

ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ  ಆಚರಿಸುವುದೆಂದರೆ, ತಮಗೆ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸುವ ಭಾವನೆಯೇ ಉಂಟಾಗುತ್ತದೆ ಎಂದು ಹೇಳಿದರು.

|

ಅದಕ್ಕಾಗಿಯೇ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಂಡ ನಂತರ ಗಡಿಯಲ್ಲಿ ಸಶಸ್ತ್ರ ಪಡೆಗಳೊಂದಿಗೆ ತಮ್ಮ ಎಲ್ಲಾ ದೀಪಾವಳಿಗಳನ್ನು ಆಚರಿಸಿದ್ದಾಗಿ ಎಂದು ಅವರು ಹೇಳಿದರು. ತಾವು ಏಕಾಂಗಿಯಾಗಿ ಬಂದಿಲ್ಲ, ಬದಲಿಗೆ 130 ಕೋಟಿ ಭಾರತೀಯರ ಶುಭಾಶಯಗಳನ್ನು ತಮ್ಮೊಂದಿಗೆ ತಂದಿರುವುದಾಗಿ ಅವರು ಹೇಳಿದರು. ಇಂದು ಸಂಜೆ ಪ್ರತಿಯೊಬ್ಬ ಭಾರತೀಯರೂ ದೇಶದ ವೀರ ಯೋಧರಿಗೆ ತಮ್ಮ ಶುಭಾಶಯಗಳನ್ನು ತಿಳಿಸಲು ದೀಪವನ್ನು ಬೆಳಗಲಿದ್ದಾರೆ ಎಂದು ಅವರು ಹೇಳಿದರು. ಸೈನಿಕರನ್ನು ದೇಶದ ಜೀವಂತ ಭದ್ರತಾ ಕವಚ ಎಂದು ಪ್ರಧಾನಿ ಬಣ್ಣಿಸಿದರು. ದೇಶದ ದಿಟ್ಟ ಪುತ್ರರು ಮತ್ತು ಹೆಣ್ಣುಮಕ್ಕಳ ಮಾದರಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಸೌಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ ಹೇಳಿದರು.

|
|

ನೌಶೇರಾದಿಂದಲೇ ಶ್ರೀ ಮೋದಿ ಅವರು ದೀಪಾವಳಿ ಮತ್ತು ಮುಂಬರುವ ಹಬ್ಬಗಳಾದ ʻಗೋವರ್ಧನ ಪೂಜೆʼ, ʻಭಯ್ಯಾ ದೂಜ್‌ಚಾತ್‌ʼಗಾಗಿ ದೇಶವಾಸಿಗಳಿಗೆ ಶುಭ ಕೋರಿದರು. ಗುಜರಾತಿ ಜನರಿಗೂ ಅವರ ಹೊಸ ವರ್ಷಕ್ಕಾಗಿ ಶುಭ ಹಾರೈಸಿದರು.

|

ನೌಶೇರಾದ ಇತಿಹಾಸದಲ್ಲಿ ಭಾರತದ ಶೌರ್ಯದ ಆಚರಣೆಯನ್ನು ಕಾಣಬಹುದು. ಪ್ರಸ್ತುತ ಅದು ಸೈನಿಕರ ಧೈರ್ಯ ಮತ್ತು ದೃಢನಿರ್ಧಾರದ ಸಾಕಾರ ರೂಪವಾಗಿದೆ ಎಂದು ಅವರು ಹೇಳಿದರು. ಈ ಪ್ರದೇಶವು ಆಕ್ರಮಣಕಾರ ಮತ್ತು ಅತಿಕ್ರಮಣದಾರರ ಎದುರು ಸದೃಢವಾಗಿ ನಿಂತಿದೆ ಎಂದರು. ಮಾತೃಭೂಮಿಯ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ನೌಶೇರಾದ ಹೀರೊಗಳಾದ ಬ್ರಿಗೇಡಿಯರ್‌ ಉಸ್ಮಾನ್ ಮತ್ತು ನಾಯ್ಕ್‌ ಜಾದುನಾಥ್ ಸಿಂಗ್ ಅವರಿಗೆ ಶ್ರೀ ಮೋದಿ ಅವರು ಗೌರವ ನಮನ ಸಲ್ಲಿಸಿದರು. ಶೌರ್ಯ ಮತ್ತು ದೇಶಭಕ್ತಿಗೆ ಅಭೂತಪೂರ್ವ ಉದಾಹರಣೆಗಳಾಗಿ ನಿಂತ ಲೆಫ್ಟಿನೆಂಟ್ ಆರ್.ಆರ್. ರಾಣೆ ಮತ್ತು ಇತರ ಕೆಚ್ಚೆದೆಯ ವೀರರಿಗೆ ಅವರು ನಮನ ಸಲ್ಲಿಸಿದರು. ಸಶಸ್ತ್ರ ಪಡೆಗಳಿಗೆ ಸ್ಥಸ್ಥಿರವಾಗಿ ಬೆನ್ನೆಲುಬಾಗಿ ನಿಂತ ಶ್ರೀ ಬಲದೇವ್ ಸಿಂಗ್ ಮತ್ತು ಶ್ರೀ ಬಸಂತ್ ಸಿಂಗ್ ಅವರಿಂದ ಆಶೀರ್ವಾದ ಪಡೆದಾಗ ತಮಗಾದ ಭಾವನೆಗಳನ್ನು ಪ್ರಧಾನಿ ವಿವರಿಸಿದರು. ಪ್ರಸ್ತುತ ಅಲ್ಲಿ ನೆಲೆಸಿರುವ ಬ್ರಿಗೇಡ್‌ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು. ಎಲ್ಲಾ ವೀರ ಸೈನಿಕರು ದಾಳಿಯ ಬಳಿಕ ಸುರಕ್ಷಿತವಾಗಿ ಹಿಂದಿರುಗಿದಾಗ ಸಮಾಧಾನದಿಂದ ನಿಟ್ಟುಸಿರು ಬಿಟ್ಟ ಕ್ಷಣವನ್ನು ಅವರು ನೆನಪಿಸಿಕೊಂಡರು.

|

ಸ್ವಾತಂತ್ರ್ಯದ ʻಅಮೃತ್ ಕಾಲʼದಲ್ಲಿ ನಾವಿದ್ದೇವೆ. ದೇಶದ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಒಬ್ಬರ ಮೇಲೂ ಇದೆ ಮತ್ತು ಇಂದಿನ ಭಾರತವು ತನ್ನ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಬಗ್ಗೆ ಜಾಗರೂಕವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಹಿಂದೆ ರಕ್ಷಣಾ ಸಂಪನ್ಮೂಲಗಳ ವಿಚಾರದಲ್ಲಿ ವಿದೇಶಗಳ ಮೇಲಿನ ಅವಲಂಬನೆಯಿತ್ತು. ಆ ಅವಧಿಗೆ ಹೋಲಿಸಿದರೆ, ಪ್ರಸ್ತುತ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ವಾವಲಂಬನೆ ಬಗ್ಗೆಯೂ ಅವರು ಮಾತನಾಡಿದರು. ರಕ್ಷಣಾ ಬಜೆಟ್‌ನ ಶೇಕಡಾ 65ರಷ್ಟನ್ನು ದೇಶದಲ್ಲೇ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶೀಯವಾಗಿ ಮಾತ್ರ ಖರೀದಿಸಲಾಗುವ 200 ಉತ್ಪನ್ನಗಳ ಪಟ್ಟಿ, ಧನಾತ್ಮಕ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪಟ್ಟಿಯನ್ನು ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.  ವಿಜಯ ದಶಮಿಯಂದು ಪ್ರಾರಂಭಿಸಲಾದ 7 ಹೊಸ ರಕ್ಷಣಾ ಕಂಪನಿಗಳ ಬಗ್ಗೆಯೂ ಅವರು ಮಾತನಾಡಿದರು. ಹಳೆಯ ಶಸ್ತ್ರಾಸ್ತ್ರ ಕಾರ್ಖಾನೆಗಳು ಈಗ ವಿಶೇಷ ವಲಯದ ನಿರ್ದಿಷ್ಟ ಉಪಕರಣಗಳು ಮತ್ತು ಮದ್ದುಗುಂಡುಗಳನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.  ರಕ್ಷಣಾ ಕಾರಿಡಾರ್‌ಗಳು ಸಹ ತಲೆ ಎತ್ತಲಿವೆ. ಭಾರತದ ಯುವಕರು ಬಲಿಷ್ಠ ರಕ್ಷಣಾ ಸಂಬಂಧಿತ ನವೋದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಇವೆಲ್ಲವೂ ರಕ್ಷಣಾ ರಫ್ತುದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

|

ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಭಾರತೀಯ ಮಿಲಿಟರಿ ಶಕ್ತಿಯನ್ನು ವಿಸ್ತರಿಸುವ ಮತ್ತು ಪರಿವರ್ತಿಸುವ ಅಗತ್ಯವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಪರಿಸರವು ಹೊಸ ಬದಲಾವಣೆಗಳನ್ನು ಅನಿವಾರ್ಯವಾಗಿಸಿದೆ, ಅದಕ್ಕಾಗಿಯೇ ಸಮಗ್ರ ಮಿಲಿಟರಿ ನಾಯಕತ್ವದಲ್ಲಿ ಸಮನ್ವಯವನ್ನು ಖಾತರಿಪಡಿಸಿಕೊಳ್ಳುವುದು ನಿರ್ಣಾಯಕ ಎಂದು ಅವರು ಹೇಳಿದರು. ʻಸಿಡಿಎಸ್ʼ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯು ಈ ನಿಟ್ಟಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆಗಳಾಗಿವೆ. ಅದೇ ರೀತಿ, ಆಧುನಿಕ ಗಡಿ ಮೂಲಸೌಕರ್ಯವು ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗಿನ ಗಡಿ ಪ್ರದೇಶಗಳಲ್ಲಿ, ಜೈಸಲ್ಮೇರ್‌ನಿಂದ ಅಂಡಮಾನ್- ನಿಕೋಬಾರ್ ವರೆಗೆ ಆಧುನಿಕ ಮೂಲಸೌಕರ್ಯದೊಂದಿಗೆ ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮೂಲಸೌಕರ್ಯದಲ್ಲಿ ಅಭೂತಪೂರ್ವ ಸುಧಾರಣೆ ಮತ್ತು ಸೈನಿಕರ ಅನುಕೂಲಕ್ಕೆ ದಾರಿ ಮಾಡಿದೆ ಎಂದು ಅವರು ಹೇಳಿದರು.

|

ದೇಶದ ರಕ್ಷಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಹೊಸ ಎತ್ತರವನ್ನು ಮುಟ್ಟುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ನೌಕಾಪಡೆ ಮತ್ತು ವಾಯುಪಡೆಯ ಮುಂಚೂಣಿ ಸ್ಥಾನಗಳಲ್ಲಿ ನಿಯೋಜಿಸಲ್ಪಟ್ಟ ನಂತರ, ಈಗ ಸೇನೆಯಲ್ಲೂ ಮಹಿಳೆಯರ ಪಾತ್ರವನ್ನು ವಿಸ್ತರಿಸಲಾಗುತ್ತಿದೆ. ಕಾಯಂ ಸ್ಥಾನಮಾನ, ಎನ್‌ಡಿಎ, ರಾಷ್ಟ್ರೀಯ ಮಿಲಿಟರಿ ಶಾಲೆ, ಮಹಿಳೆಯರಿಗಾಗಿ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು ತೆರೆಯುವುದರ ಜೊತೆಗೆ, ಬಾಲಕಿಯರಿಗಾಗಿ ಸೈನಿಕ ಶಾಲೆಗಳನ್ನು ತೆರೆಯುವ ಬಗ್ಗೆ ಸ್ವಾತಂತ್ರ್ಯ ದಿನದಂದು ಮಾಡಿದ ಘೋಷಣೆಯನ್ನು ಪ್ರಧಾನಿ ಉಲ್ಲೇಖಿಸಿದರು.

|

ಸಶಸ್ತ್ರ ಪಡೆಗಳಲ್ಲಿ, ಅಪರಿಮಿತ ಸಾಮರ್ಥ್ಯಗಳನ್ನು ಮಾತ್ರವಲ್ಲದೆ ಅಚಲ ಸೇವಾ ಮನೋಭಾವ, ಬಲವಾದ ದೃಢನಿಶ್ಚಯ ಮತ್ತು ಸರಿಸಾಟಿಯಿಲ್ಲದ ಸಂವೇದನೆಯನ್ನು ಸಹ ತಾವು ಕಂಡಿರುವುದಾಗಿ ಪ್ರಧಾನಿ ಹೇಳಿದರು. ಈ ಗುಣಗಳು ಭಾರತೀಯ ಸಶಸ್ತ್ರ ಪಡೆಗಳನ್ನು ವಿಶ್ವದ ಸಶಸ್ತ್ರ ಪಡೆಗಳಳ ನಡುವೆ ಅನನ್ಯಗೊಳಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ವಿಶ್ವದ ಯಾವುದೇ ಉನ್ನತ ಸಶಸ್ತ್ರ ಪಡೆಗಳಂತೆ ವೃತ್ತಿಪರವಾಗಿವೆ. ಆದರೆ ನಮ್ಮ ಯೋಧರ ಮಾನವೀಯ ಮೌಲ್ಯಗಳು ಅವರನ್ನು ವಿಭಿನ್ನ ಮತ್ತು ಅಸಾಧಾರಣರನ್ನಾಗಿಸಿವೆ ಎಂದು ಪ್ರಧಾನಿ ಬಣ್ಣಿಸಿದರು.  "ನಿಮಗೆ ಇದು ಕೇವಲ ಸಂಬಳದ ಕೆಲಸವಲ್ಲ, ನಿಮಗೆ ಇದು ನಿಮ್ಮ ಹೃದಯದ ಕರೆ ಮತ್ತು ಆರಾಧನೆ, 130 ಕೋಟಿ ಜನರ ಮನೋಭಾವವನ್ನು ನಿಮ್ಮತ್ತ ಹರಿಸುವ ಆರಾಧನೆ" ಎಂದು ಪ್ರಧಾನಿ ಹೇಳಿದರು. ಮಾತು ಮುಂದುವರಿಸಿದ ಅವರು, "ಸಾಮ್ರಾಜ್ಯಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಭಾರತವು ಸಾವಿರಾರು ವರ್ಷಗಳ ಹಿಂದೆ ಅಮರವಾಗಿತ್ತು ಮತ್ತು ಇಂದಿಗೂ ಮತ್ತು ಸಾವಿರಾರು ವರ್ಷಗಳ ನಂತರವೂ ಅಮರವಾಗಿಯೇ ಇರುತ್ತದೆ. ನಾವು ರಾಷ್ಟ್ರವನ್ನು ಸರ್ಕಾರ, ಅಧಿಕಾರ ಅಥವಾ ಸಾಮ್ರಾಜ್ಯ ಎಂದು ಗ್ರಹಿಸುವುದಿಲ್ಲ. ನಮ್ಮ ಪಾಲಿಗೆ ಅದು ಜೀವಂತ. ಅದಕ್ಕೊಂದು ಆತ್ಮವಿದೆ. ಹಾಗಾಗಿ ದೇಶವನ್ನು ರಕ್ಷಿಸುವುದು ಎಂದರೆ ಕೇವಲ ಭೌಗೋಳಿಕ ಗಡಿಗಳನ್ನು ರಕ್ಷಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ನಮಗೆ ರಾಷ್ಟ್ರೀಯ ರಕ್ಷಣೆ ಎಂದರೆ ಈ ಜೀವಂತ ರಾಷ್ಟ್ರೀಯ ಚೈತನ್ಯ, ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ರಕ್ಷಿಸುವುದು," ಎಂದರು.

|

 

|

 

|

 

|

"ನಮ್ಮ ಸಶಸ್ತ್ರ ಪಡೆಗಳು ಆಕಾಶದೆತ್ತರದ ಶೌರ್ಯದಿಂದ ಆಶೀರ್ವದಿಸಲ್ಪಟ್ಟರೆ, ಅವರ ಹೃದಯಗಳು ಮಾನವೀಯ ದಯಾಸಾಗರಗಳಾಗಿವೆ ಆಗಿವೆ, ಅದಕ್ಕಾಗಿಯೇ ನಮ್ಮ ಸಶಸ್ತ್ರ ಪಡೆಗಳು ಗಡಿಗಳನ್ನು ರಕ್ಷಿಸುವುದಲ್ಲದೆ ವಿಪತ್ತು ಮತ್ತು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹಾಯ ಮಾಡಲು ಯಾವಾಗಲೂ ಸನ್ನದ್ಧವಾಗಿರುತ್ತವೆ. ಇದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಬಲವಾದ ನಂಬಿಕೆಯಾಗಿ ಬೆಳೆದಿದೆ. ನೀವು ಭಾರತದ ಏಕತೆ ಮತ್ತು ಸಮಗ್ರತೆ ಹಾಗೂ ʻಏಕ್ ಭಾರತ್ ಶ್ರೇಷ್ಠ ಭಾರತ್‌ʼ ಭಾವನೆಯ ಪಾಲಕರು ಮತ್ತು ರಕ್ಷಕರು. ನಿಮ್ಮ ಶೌರ್ಯದ ಸ್ಫೂರ್ತಿಯಿಂದ ನಾವು ಭಾರತವನ್ನು ಬೆಳವಣಿಗೆ ಮತ್ತು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,ʼʼ ಎಂದು ಹೇಳಿ ಪ್ರಧಾನಿ ಮಾತು ಮುಗಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • Dr Chanda patel February 04, 2022

    Jay Hind Jay Bharat🇮🇳
  • SHRI NIVAS MISHRA January 23, 2022

    यही सच्चाई है, भले कुछलोग इससे आंखे मुद ले। यदि आंखे खुली नही रखेंगे तो सही में हवाई जहाज का पहिया पकड़ कर भागना पड़ेगा।
  • G.shankar Srivastav January 03, 2022

    नमो
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Govt saved 48 billion kiloWatt of energy per hour by distributing 37 cr LED bulbs

Media Coverage

Govt saved 48 billion kiloWatt of energy per hour by distributing 37 cr LED bulbs
NM on the go

Nm on the go

Always be the first to hear from the PM. Get the App Now!
...
PM Modi greets the people of Mauritius on their National Day
March 12, 2025

Prime Minister, Shri Narendra Modi today wished the people of Mauritius on their National Day. “Looking forward to today’s programmes, including taking part in the celebrations”, Shri Modi stated. The Prime Minister also shared the highlights from yesterday’s key meetings and programmes.

The Prime Minister posted on X:

“National Day wishes to the people of Mauritius. Looking forward to today’s programmes, including taking part in the celebrations.

Here are the highlights from yesterday, which were also very eventful with key meetings and programmes…”