ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 21 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠ ಸಾಧನೆಗಾಗಿ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡುವರು.
ಸಾಮಾನ್ಯ ಪ್ರಜೆಗಳ ಕಲ್ಯಾಣಕ್ಕಾಗಿ ಜಿಲ್ಲೆಗಳು/ಅನುಷ್ಠಾನ ಘಟಕಗಳು ಮತ್ತು ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ನವೀನ ಕಾರ್ಯಗಳನ್ನು ಗುರುತಿಸುವ ದೃಷ್ಟಿಯಿಂದ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆ ಕುರಿತ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳು ಮತ್ತು ನವೀನ ವಿಧಾನಗಳ ಮೂಲಕ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು.
ಈ ಕೆಳಗಿನ ಐದು ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳಲ್ಲಿ ಮಾಡಿದ ಅಸಾಧಾರಣ ಕಾರ್ಯಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು, ಅವುಗಳನ್ನು ನಾಗರಿಕ ಸೇವಾ ದಿನ 2022 ರಂದು ನೀಡಲಾಗುವುದು: ಅವುಗಳೆಂದರೆ (i) “ಜನ ಭಾಗಿದರಿ” ಗೆ ಉತ್ತೇಜನ ಅಥವಾ ಪೋಷಣ್ ಅಭಿಯಾನದಲ್ಲಿ ಜನರ ಒಳಗೊಳ್ಳುವಿಕೆ, (ii) ಖೇಲೋ ಇಂಡಿಯಾ ಯೋಜನೆ ಮೂಲಕ ಕ್ರೀಡೆ ಮತ್ತು ಯೋಗಕ್ಷೇಮದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸುವುದು (iii) ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಡಿಜಿಟಲ್ ಪಾವತಿಗಳು ಮತ್ತು ಉತ್ತಮ ಆಡಳಿತ (iv) ಒಂದು ಜಿಲ್ಲೆ- ಒಂದು ಉತ್ಪನ್ನ ಯೋಜನೆಯ ಮೂಲಕ ಸಮಗ್ರ ಅಭಿವೃದ್ಧಿ, (v) ಮಾನವರ ಮಧ್ಯಪ್ರವೇಶ ವಿಲ್ಲದೆಯೇ ಆರಂಭದಿಂದ ಅಂತ್ಯದಿಂದ ತಡೆರಹಿತ ಸೇವೆಗಳ ವಿತರಣೆ.
ಗುರುತಿಸಲ್ಪಟ್ಟ 5 ಆದ್ಯತಾ ಕಾರ್ಯಕ್ರಮಗಳಿಗೆ ಮತ್ತು ಸಾರ್ವಜನಿಕ ಆಡಳಿತ/ಸೇವೆಗಳ ವಿತರಣೆ ಇತ್ಯಾದಿ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳಿಗೆ ಒಟ್ಟು 16 ಪ್ರಶಸ್ತಿಗಳನ್ನು ಈ ವರ್ಷ ನೀಡಲಾಗುವುದು.