·          ದೇಶಭೃಷ್ಟ  ಆರ್ಥಿಕ ಅಪರಾಧಿಗಳ ಹಾವಳಿಯನ್ನು ಸಮಗ್ರವಾಗಿ ಮತ್ತು ಕ್ರಿಯಾಶೀಲವಾಗಿ  ತಡೆಯಲು ಜಿ-20 ದೇಶಗಳ ನಡುವೆ ಬಲಿಷ್ಟ ಮತ್ತು ಸಕ್ರಿಯ ಸಹಕಾರ.
 
·         ಅಪರಾಧಗಳ ಆಸ್ತಿಯನ್ನು ಕ್ರಿಯಾಶೀಲವಾಗಿ ಮುಟ್ಟುಗೋಲು ಹಾಕಿಕೊಳ್ಳುವಿಕೆ; ಅಪರಾಧಿಗಳ ತ್ವರಿತ ಹಸ್ತಾಂತರ ಮತ್ತು ಅಪರಾಧಗಳ ಆಸ್ತಿಯನ್ನು ಸಮರ್ಪಕವಾಗಿ ಹಸ್ತಾಂತರಿಸುವಿಕೆಯನ್ನು ತ್ವರಿತಗೊಳಿಸುವ ಮತ್ತು ವ್ಯವಸ್ಥಿತಗೊಳಿಸುವುದೂ ಸೇರಿದಂತೆ ಕಾನೂನು ಪ್ರಕ್ರಿಯೆಗಳಲ್ಲಿ ಸಹಕಾರ.
 
·         ಎಲ್ಲಾ ಆರ್ಥಿಕ ಅಪರಾಧಿಗಳಿಗೆ ಪ್ರವೇಶ ತಡೆಯುವ ಮತ್ತು ಸುರಕ್ಷಿತ  ಆಶ್ರಯತಾಣವೊದಗಿಸುವುದನ್ನುತಡೆಯುವ ವ್ಯವಸ್ಥೆಯೊಂದನ್ನು ರೂಪಿಸಲು ಜಿ-20 ರಾಷ್ಟ್ರಗಳಿಂದ ಸಂಯುಕ್ತ ಪ್ರಯತ್ನ.
 
·         ಭ್ರಷ್ಟಾಚಾರ ವಿರುದ್ದದ ವಿಶ್ವಸಂಸ್ಥೆ ಸಮಾವೇಶದ (ಯು.ಎನ್.ಸಿ.ಎ.ಸಿ. ) ತತ್ವಗಳು , ವಿಶ್ವಸಂಸ್ಥೆಯ ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳ ವಿರುದ್ದದ ಸಮಾವೇಶದ  (ಯು.ಎನ್.ಒ.ಟಿ.ಸಿ.) ತತ್ವಗಳು  , ವಿಶೇಷವಾಗಿ “ಅಂತಾರಾಷ್ಟ್ರೀಯ ಸಹಕಾರ” ಕ್ಕೆ ಸಂಬಂದಿಸಿದ ಅಂಶವನ್ನು ಪೂರ್ಣವಾಗಿ ಮತ್ತು ದಕ್ಷತೆಯಿಂದ ಜಾರಿಗೆ ತರಬೇಕು. 
 
·         ಸಮರ್ಪಕ ಪ್ರಾಧಿಕಾರಿಗಳು ಮತ್ತು ಎಫ್.ಐ.ಯು.ಗಳ ನಡುವೆ ಸಕಾಲದಲ್ಲಿ ಸಮಗ್ರ ಮಾಹಿತಿ ವಿನಿಮಯಕ್ಕೆ ಅವಕಾಶವಾಗುವಂತೆ ಅಂತಾರಾಷ್ಟ್ರೀಯ ಸಹಕಾರವನ್ನು ಸ್ಥಾಪಿಸಲು ಆದ್ಯತೆ ನೀಡಿ ಗಮನ ಕೇಂದ್ರೀಕರಿಸುವಂತೆ ಎಫ್.ಎ.ಟಿ.ಎಫ್. ಗೆ ಸೂಚಿಸುವುದು.
 
·         ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ವ್ಯಾಖ್ಯಾನಿಸಲು ಸಾಮಾನ್ಯ ವ್ಯಾಖ್ಯೆಯನ್ನು ರೂಪಿಸುವ ಕೆಲಸವನ್ನು ಎಫ್.ಎ.ಟಿ.ಎಫ್. ಗೆ ವಹಿಸುವುದು.
 
·         ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಗುರುತಿಸಲು, ಉಚ್ಚಾಟಿಸಿ ಅವರ ತವರು ದೇಶಕ್ಕೆ ಹಸ್ತಾಂತರಿಸಲು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿ ಸಾಮಾನ್ಯವಾಗಿ ಒಪ್ಪಿಗೆಯಾಗುವ ಮತ್ತು ಮಾನದಂಡಗಳನ್ನು ಒಳಗೊಂಡ ಪ್ರಕ್ರಿಯೆಗಳನ್ನು  ಎಫ್.ಎ.ಟಿ.ಎಫ್. ಅಭಿವೃದ್ದಿಪಡಿಸಬೇಕು. ಇದು ಜಿ-20 ರಾಷ್ಟ್ರಗಳಿಗೆ ತಮ್ಮ ದೇಶೀಯ ಕಾನೂನುಗಳಿಗೆ ಅನುಗುಣವಾಗಿ ಮಾರ್ಗದರ್ಶನ ಮತ್ತು ಸಹಾಯ ಒದಗಿಸುವಂತೆ ರೂಪಿಸಲ್ಪಟ್ಟಿರಬೇಕು.
 
·         ತನ್ನ ದೇಶದಿಂದ ತಪ್ಪಿಸಿಕೊಂಡು ಇನ್ನೊಂದು ದೇಶದಲ್ಲಿ ನೆಲೆಸಿರುವ ಆರ್ಥಿಕ ಅಪರಾಧಿಯನ್ನು ಯಶಸ್ವಿಯಾಗಿ ಉಚ್ಚಾಟಿಸಿ ಆತನ ದೇಶದ ಕೈಗೆ ಒಪ್ಪಿಸುವುದಕ್ಕೆ ಸಂಬಂಧಿಸಿದ ಉತ್ತಮ ಪದ್ದತಿಗಳು ಹಾಗು ಅದರ ಪರಿಣತಿಯನ್ನು ಹಂಚಿಕೊಳ್ಳುವುದು, ಈಗಿರುವ ವ್ಯವಸ್ಥೆಗಳಲ್ಲಿ  ಇದಕ್ಕೆ ಸಂಬಂಧಿಸಿ ಇರುವ ನ್ಯೂನತೆಗಳನ್ನು , ಕಾನೂನು ಸಹಾಯ ಇತ್ಯಾದಿಗಳನ್ನು ನಿಭಾಯಿಸಲು ಸಾಮಾನ್ಯ ವೇದಿಕೆಯ ಸ್ಥಾಪನೆ.
 
·         ಆರ್ಥಿಕ ಅಪರಾಧಿಗಳು ತಮ್ಮ ನಿವಾಸಿ/ತವರು  ದೇಶದಲ್ಲಿ ತೆರಿಗೆ ಬಾಕಿಯನ್ನು ಹೊಂದಿದ್ದಲ್ಲಿ  ಅದನ್ನು ವಸೂಲಿ ಮಾಡಲು ಅನುಕೂಲವಾಗುವಂತೆ ಅವರ ಆಸ್ತಿಗಳನ್ನು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದರ ಬಗ್ಗೆ ಜಿ-20 ವೇದಿಕೆಯು ಪರಿಗಣಿಸಬೇಕು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Khadi products witnessed sale of Rs 12.02 cr at Maha Kumbh: KVIC chairman

Media Coverage

Khadi products witnessed sale of Rs 12.02 cr at Maha Kumbh: KVIC chairman
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮಾರ್ಚ್ 2025
March 09, 2025

Appreciation for PM Modi’s Efforts Ensuring More Opportunities for All