ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಪುಷ್ಪಾ ಕಮಾಲ್ ದಹಲ್ ‘ಪ್ರಚಂಡ’ ಇಂದು ದೂರವಾಣಿ ಕರೆ ಮಾಡಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು.
ಇಬ್ಬರೂ ಪ್ರಧಾನಮಂತ್ರಿಯವರು ಇತ್ತೀಚೆಗೆ ನೇಪಾಳ ಅಧ್ಯಕ್ಷೆ ಗೌರವಾನ್ವಿತ ಬಿಂದ್ಯಾ ದೇವಿ ಭಂಡಾರಿ ಅವರ ಯಶಸ್ವೀ ಭಾರತ ಭೇಟಿ ಸೇರಿದಂತೆ ಭಾರತ-ನೇಪಾಳ ಬಾಂಧವ್ಯದ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಚರ್ಚಿಸಿದರು.
ಸಂವಿಧಾನ ಜಾರಿ ಪ್ರಕ್ರಿಯೆಯಲ್ಲಿ ಎಲ್ಲ ಬಾಧ್ಯಸ್ಥರನ್ನೂ ಸೇರಿಸಿಕೊಳ್ಳಲು ತಮ್ಮ ಸರ್ಕಾರ ನಡೆಸುತ್ತಿರುವ ಕ್ರಮಗಳ ಕುರಿತಂತೆ ಮಾತನಾಡಿದರು. ನೇಪಾಳ ಹತ್ತಿರ ಹತ್ತಿರ 20 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಸ್ಥಳೀಯ ಚುನಾವಣೆಯನ್ನು ನಡೆಸುತ್ತಿರುವ ಬಗ್ಗೆಯೂ ಚರ್ಚಿಸಿದರು ಮತ್ತು ಈ ನಿಟ್ಟಿನಲ್ಲಿ ಭಾರತದ ನೆರವಿಗೆ ಅವರು ಮನವಿ ಮಾಡಿದರು.
ಸ್ಥಳೀಯ ಚುನಾವಣೆಗಳಿಗೆ ಎಲ್ಲ ಸಾಧ್ಯ ನೆರವು ನೀಡುವ ಭರವಸೆ ನೀಡಿದ ಪ್ರಧಾನಮಂತ್ರಿ ಶ್ರೀ. ಮೋದಿ ಅವರು, ನೇಪಾಳದ ಸ್ನೇಹಪರ ಜನತೆಗೆ ಮತ್ತು ಸರ್ಕಾರಕ್ಕೆ ಶಾಂತಿ, ಸ್ಥಿರತೆ ಮತ್ತು ಸಾಮಾಜಿಕ ಆರ್ಥಿಕ ಪರಿವರ್ತನೆಯ ಸಾಧನೆಗೆ ನಡೆಸುತ್ತಿರುವ ಪ್ರಯತ್ನಗಳಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಭಾರತ-ನೇಪಾಳದ ಬಹುಶ್ರುತ ಸಹಕಾರ ಬಾಂಧವ್ಯಗಲನ್ನು ಎರಡೂ ದೇಶಗಳ ಜನತೆಗೆ ಲಾಭಕ್ಕಾಗಿ ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.