ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂತ್ರಜ್ಞಾನದ ಶಕ್ತಿ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ. ವ್ಯವಹಾರಿಕವಾಗಿ ಮತ್ತು ವೈಯ್ಯಕ್ತಿಕವಾಗಿ ಸಮಾಜಕ್ಕೆ ಅಗತ್ಯದ ಮತ್ತು ಆರ್ಥಿಕತೆ, ವೇಗತೆ, ಸರಳತೆ ಮತ್ತು ಸೇವೆಗಳಿಗೆಲ್ಲ ತಂತ್ರಜ್ಞಾನ ಅತ್ಯಧಿಕ ಪ್ರಯೋಜನಕಾರಿ ಎಂಬ ನಿಲುವು ಹೊಂದಿದ್ದಾರೆ. ತಂತ್ರಜ್ಞಾನ ಪ್ರಕ್ರಿಯೆಯನ್ನು ಕ್ಷಿಪ್ರವೇಗದಲ್ಲಿ ನಿರ್ವಹಿಸಬಲ್ಲುದು. ಪ್ರತಿಯೊಂದರಲ್ಲೂ ಪಾರದರ್ಶಕತೆ, ಸುಧಾರಣೆ ಜೊತೆ ಬದಲಾವಣೆ ತರಬಲ್ಲುದು.
2014ರಲ್ಲಿ ಪ್ರಧಾನ ಮಂತ್ರಿ ಯಾಗಿ ಶ್ರೀ ನರೇಂದ್ರ ಮೋದಿ ಅವರು ಅಧಿಕಾರಸ್ವೀಕರಿಸಿದ ನಂತರ ಸರಕಾರದ ಾಡಳಿತದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಜನಸಾಮಾನ್ಯರ ಸಮಸ್ಯೆ ನೀಗಲು, ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ಡಿಜಿಟಲ್ ಭಾರತ ಯೋಜನೆ ಹಾಗೂ ಪ್ರಗತಿ (PRAGATI) ಪ್ರಾರಂಭಿಸಿದರು. ಇವುಗಳು ಸಕಾರಾತ್ಮಕ ವ್ಯತ್ಯಾಸ ತೋರಿಸಲಾರಂಭಿಸಿವೆ.
ಭಾರತ ಸರಕಾರ ಜನತೆಯ ಆರೋಗ್ಯ ಮತ್ತು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒಲವು ತೋರಿದೆ. ಕೋಟಿಗಟ್ಟಲೆ ಗ್ರಾಮೀಣ ಕೃಷಿಕರು ಕೃಷಿ ಸಂಬಂಧ ಮಾಹಿತಿ SMS ಮೂಲಕ ಪಡೆಯುತ್ತಿದ್ದಾರೆ. ಕೃಷಿ-ತಂತ್ರಜ್ಞಾನ ಮೂಲವ್ಯವಸ್ಥೆ ನಿಧಿ (Agri-Tech Infrastructure Fund) ಮೂಲಕ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯ ಪ್ರಚಾರ ಯೋಜನೆಗಳು ನಡೆಯುತ್ತಿವೆ.ದೇಶದ ಕೃಷಿ ಮಾರುಕಟ್ಟೆಗಳೆಲ್ಲ ಏಕೀಕೃತಗೊಂಡು ಸಾಮಾನ್ಯ e-platform ಮೂಲಕ ವ್ಯವಹಾರ ನಡೆಸಲಿವೆ.ಇದರಿಂದ ದೇಶದ ಪ್ರತಿ ಮೂಲೆಯ ಕೃಷಿಕನ ಬೆಳೆಗಳಿಗೂ ಉತ್ತಮ ಬೆಲೆ ಸಾಧ್ಯವಿದೆ.
2014ರಲ್ಲಿ myGov ಜಾಲತಾಣ ಪ್ರರಂಭ. ಈ ಮೂಲಕ ಜನತೆ , ಸರಕಾರ ಪಾಲುದಾರರಾಗಿ ಸಹಕರಿಸಿ ಅಭಿಪ್ರಾಯ–ಚಿಂತೆಗಳನ್ನು ಹಂಚಿಕೊಂಡು ನೀತಿನಿಯಮಾವಳಿ ರೂಪಿಸುವಲ್ಲಿ ಯಶಸ್ಸಾಗಿದೆ. ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ -ಮನ್ ಕೀ ಬಾತ್ ಪ್ರಧಾನ ಮಂತ್ರಿ ಜನತೆ ಜೊತೆ ಸಂದೇಶ ವಿನಿಮಯ ಮತ್ತು ಸರಕಾರದ ವಿಚಾರ ತಲುಪಿಸಲು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.
2015ರಲ್ಲಿ USA ಪ್ರವಾಸ ವೇಳೆ ಸಿಲಿಕೋನ್ ವ್ಯಾಲಿ ಸಂದರ್ಶಿಸಿ ಅಲ್ಲಿನ ಬಹಳಷ್ಟು ಸಂಸ್ಥೆಗಳ ಮುಖ್ಯಸ್ಥರ ಭೇಟಿಮಾಡಿದ್ದರು. ಭಾರತದ ಡಿಜಿಟಲ್ ಭಾರತ ಯೋಜನೆ ಜೊತೆ ಕೈಜೋಡಿಸಲು ಪ್ರೇರೇಪಿಸಿದ್ದರು. ಕೇವಲ ತಂತ್ರಜ್ಞಾನ ನಗರ, ಪಟ್ಟಣವಲ್ಲದೆ ಗ್ರಾಮೀಣ ಜನತೆಗೆ ಹಾಗೂ ದೇಶದ ಮೂಲೆ ಮೂಲೆಯ ಕೃಷಿಕರಿಗೆ ಅಲ್ಲದೆ ಇತರ ಬಡಜನತೆ ತನಕ ತಲುಪಲು ಅಗತ್ಯ ಪ್ರಕ್ರಿಯೆಗಾಗಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರ ಪಾಲ್ಗೊಳ್ಳುವಿಕೆಗೆ ಆಹ್ವಾನಿಸಿದ್ದರು.
ಆಫ್ರಿಕಾ ಮತ್ತು ಭಾರತ ಸಮಾವೇಶದಲ್ಲಿ ಆಫ್ರಿಕಾ ಕ್ಕೆ ಭಾರತದ ತಂತ್ರಜ್ಞಾನ ಸಹಾಯದ ಬಗ್ಗೆ ಬಹಳ ಉದ್ದದ ಪಟ್ಟಿ ನೀಡಿದರು. ಆಫ್ರಿಕಾ ಜೊತೆ ತಂತ್ರಜ್ಞಾನ ಸಹಕಾರಕ್ಕೆ ಮುಂದಾದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು Facebook, Twitter, LinkedIn ಹಾಗೂ Instagram ಮುಂತಾದ ಸಾಮಾಜಿಕ ತಾಣಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ಜನತೆ ಮತ್ತು ಸಮಾಜ ಜೋತೆ ಅಭಿಪ್ರಾಯ ಹಂಚಿಕೊಳ್ಳುವ ಮಾಹಿತಿ ಸಂದೇಶ ವಿನಿಮಯ ಅವರಲ್ಲಿದೆ. ಭಾರತದ ವೈವಿಧ್ಯತೆಗಳ ವೈಷಿಷ್ಠತೆಗಳ ಅಥವಾ ತಮ್ಮ ಹೆಣ್ಣು ಮಕ್ಕಳ ಜೊತೆ ತೆಗೆದ ಸೆಲ್ಫಿ ಚಿತ್ರ ಕಳುಹಿಸಲು ಮಾಡಿದ ವಿನಂತಿಗೆ, ದೊರಕಿದ ಸಕಾರಾತ್ಮಕ ಸ್ಪಂದನ ಇದಕ್ಕೆ ಪ್ರತೀಕವಾಗಿದೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಮ್-ಆಡಳಿತ ಅಥವಾ ಮೊಬೈಲು ಆಡಳಿತಕ್ಕೆ ಹಚ್ಚು ಒಲವು ತೋರಿದ್ದಾರೆ. ಅವರ ಮೊಬೈಲು ಆಫ್ ‘NarendraModi Mobile App’ ಆಫಲ್ ಮತ್ತು ಎಂಡ್ರೋಯಿಡ್ ಫೋನ್ ಗಳಲ್ಲಿ ಲಭ್ಯ. ಇದರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇತ್ತೀಚಿಗಿನ ಸುದ್ದಿಗಳು, ಪರಿಷ್ಕೃತ ನವೀಕರಣಗಳು ಮತ್ತು ಅವರ ಜೊತೆ ಸಂಪರ್ಕಗಳು ಲಭ್ಯ.
ಭಾರತದ 1.25 ಕೋಟಿ ಜನತೆಗೆ ತಂತ್ರಜ್ಞಾನ ತಲುಪಿಸಲು, ಮತ್ತು ಅವರುಗಳು ಅದನರ ಸದುಪಯೋಗ ಪಡೆದು ಅಳವಡಿಕೆ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹರ್ನಿಶಿ ಪ್ರಯತ್ನಿಸುತ್ತಿದ್ದಾರೆ. ಇವರು ಡಿಜಿಟಲ್ ರಾಜಮಾರ್ಗ ಮೂಲಕ ಭಾರತವನ್ನು ಜೋಡಿಸಿ, ಡಿಜಿಟಲ್ ಸಶಕ್ತ ನಾಗರೀಕರನನ್ನಾಗಿ ಮಾಡುವ ಸದುದ್ದೇಶ ಹೊಂದಿದ್ದಾರೆ.
ಹಾಗೂ ನೋಡಿ: : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೊತೆ ಡಿಜಿಟಲ್ ಮಾತುಕತೆ