ಪ್ರಧಾನಮಂತ್ರಿ ಮುದ್ರಾ ಯೋಜನೆ ಪ್ರಾರಂಭವಾದಾಗಿನಿಂದ, ಈ ಯೋಜನೆಯು ಅಸಂಖ್ಯಾತ ಭಾರತೀಯರಿಗೆ ತಮ್ಮ ಉದ್ಯಮಶೀಲತೆಯ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಏಳು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಕರ್ತರಾಗಲು ಅವಕಾಶಗಳನ್ನು ಒದಗಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಈ ಏಳು ವರ್ಷಗಳಲ್ಲಿ ಮುದ್ರಾ ಯೋಜನೆಯು ಸಮೂಲಾಗ್ರ ಬದಲಾವಣೆಯನ್ನು ತಂದಿದೆ, ಹಾಗೂ ಘನತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಮೈಗೌಇಂಡಿಯಾ ಮಾಡಿದ ಟ್ವೀಟ್ ಗೆ ಸ್ಪಂದಿಸಿ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಅವರು ಈ ರೀತಿಯ ಸಂದೇಶ ಟ್ವೀಟ್ ಮಾಡಿದ್ದಾರೆ;
"ಸಾಲ ಪಡೆಯಲಾಗದವರಿಗೆ ಸಾಲದ ಸಹಾಯ ಎನ್ನುವ #ಫಂಡಿಂಗ್ ದ ಅನ್ ಫಂಡೆಡ್ ತತ್ವದಿಂದ ಮಾರ್ಗದರ್ಶಿತವಾದ ಮುದ್ರಾ ಯೋಜನೆಯು ಅಸಂಖ್ಯಾತ ಭಾರತೀಯರಿಗೆ ತಮ್ಮ ಉದ್ಯಮಶೀಲತೆಯ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಉದ್ಯೋಗ ಸೃಷ್ಟಿಕರ್ತರಾಗಲು ಅವಕಾಶವನ್ನು ಕಲ್ಪಿಸಿದೆ. ನಾವು ಈ ಯೋಜನೆಯ ಏಳು ವರ್ಷಗಳ ಸಾಧನೆಗಳನ್ನು #7ಈಯರ್ಸ್ ಆಫ್ ಪಿ.ಎಂ.ಎಂ.ವೈ. ಎಂದು ಗುರುತಿಸಿಕೊಳ್ಳುವಾಗ , ಈ ಯೋಜನೆಯು ಎಲ್ಲಡೆ ಸಮೂಲಾಗ್ರ ಬದಲಾವಣೆ ಹಾಗೂ ಘನತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಿರುವುದನ್ನು ಕಾಣಬಹುದು."
Guided by the principle of #FundingTheUnfunded, Mudra Yojana has given an opportunity to countless Indians to showcase their entrepreneurial skills and become job creators. As we mark #7YearsOfPMMY here is how it’s been a game changer and enhanced dignity as well as prosperity. https://t.co/h21i8kaknf
— Narendra Modi (@narendramodi) April 8, 2022