ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಕಸಿತ ಭಾರತ್ ಸಂಕಲ್ಪ ಯಾತ್ರೆಗೆ ಹಸಿರು ನಿಶಾನೆ ತೋರಿದರು.
ಕ್ಯಾಟರಿಂಗ್ ವ್ಯವಹಾರವನ್ನು ಹೊಂದಿರುವ ಮುಂಬೈನ ಒಂಟಿ ತಾಯಿ ಮತ್ತು ವಿಬಿಎಸ್ವೈ ಫಲಾನುಭವಿ ಮೇಘನಾ, ಮುದ್ರಾ ಯೋಜನೆಯ ಮೂಲಕ 90,000 ರೂ.ಗಳ ಸಾಲವನ್ನು ಪಡೆದ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು. ಮುದ್ರಾ ಯೋಜನೆ ಮತ್ತು ಸ್ವನಿದಿ ಯೋಜನೆಯ ಸಹಾಯದಿಂದ ತನ್ನ ಅಡುಗೆ ವ್ಯವಹಾರವನ್ನು ವಿಸ್ತರಿಸಿದ್ದರಿಂದ ಪ್ರಸ್ತುತ ಫ್ರಾನ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ತನ್ನ ಮಗನಿಗೆ ಶಿಕ್ಷಣ ಸಾಲ ಪಡೆಯುವ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಸಾಲದ ಅರ್ಜಿಯ ಸರಳೀಕೃತ ಪ್ರಕ್ರಿಯೆಯ ಬಗ್ಗೆ ಪ್ರಧಾನಿ ಅವರ ವಿಚಾರಣೆಯ ನಂತರ, ಶ್ರೀಮತಿ ಮೇಘನಾ ಅವರು ಅರ್ಜಿ ಸಲ್ಲಿಸಿದ 8 ದಿನಗಳಲ್ಲಿ ಸಾಲವನ್ನು ಸ್ವೀಕರಿಸಿದ್ದಾರೆ ಮತ್ತು ಅವರು ತಮ್ಮ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುತ್ತಾರೆ ಎಂದು ಮಾಹಿತಿ ನೀಡಿದರು. ಸ್ವನಿಧಿ ಯೋಜನೆಯಡಿ ಹಿಂದಿನ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬಡ್ಡಿದರಗಳನ್ನು ಕಡಿಮೆ ಮಾಡುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ ಪ್ರಧಾನಮಂತ್ರಿಯವರು, ಈ ಯೋಜನೆಯಡಿ ಅವರು ಯಾವುದೇ ಹೆಚ್ಚಿನ ಸಾಲಗಳಿಗೆ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ವಿಚಾರಿಸಿದರು. ಮೇಘನಾ ಅವರು ಭವಿಷ್ಯದ ಸಾಲಗಳಿಗೆ ಅರ್ಜಿ ಸಲ್ಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು ಮತ್ತು ತಮ್ಮ ಕ್ಯಾಟರಿಂಗ್ ವ್ಯವಹಾರದಲ್ಲಿ 25 ಮಹಿಳೆಯರನ್ನು ನೇಮಿಸಿಕೊಳ್ಳುವ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
100 ಮಹಿಳೆಯರು ಉದ್ಯೋಗದಲ್ಲಿರುವ ಪಿಎಂ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ಟೈಲರಿಂಗ್ ತರಬೇತಿ ಪಡೆಯುವ ಬಗ್ಗೆ ಮತ್ತು ಅಮೆರಿಕ ಮತ್ತು ಕೆನಡಾಕ್ಕೆ ಕೈಯಿಂದ ತಯಾರಿಸಿದ ಕವುದಿಗಳನ್ನು ರಫ್ತು ಮಾಡುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಲಭ್ಯವಿರುವ ಎಲ್ಲಾ ಸರ್ಕಾರಿ ಯೋಜನೆಗಳಿಗಾಗಿ ಶ್ರೀಮತಿ ಮೇಘನಾ ಅವರು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಸಮುದಾಯದ ಜನರು ಅವುಗಳನ್ನು ಬಳಸಿಕೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು. ಶ್ರೀಮತಿ ಮೇಘನಾ ಅವರ ಯಶಸ್ಸು ಅವರಿಗೆ ಮಾತ್ರವಲ್ಲ, ಇತರ ಮಹಿಳೆಯರಿಗೆ ವರದಾನವಾಗಿದೆ ಎಂದು ಪ್ರಧಾನಿ ಹೇಳಿದರು ಮತ್ತು ಅಂತಹ ದೃಢನಿಶ್ಚಯವುಳ್ಳ ಜನರ ಸೇವೆ ಮಾಡುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.