ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶ್ರೀ ತಿಲಕ್ ಮರಪಾನ ಅವರಿಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸೌಹಾರ್ದ ಭೇಟಿ ಮಾಡಿದ್ದರು.
ವಿದೇಶಾಂಗ ಸಚಿವ ತಿಲಕ್ ಮರಪಾನಾ ಅವರು ಮೂರು ದಿನಗಳ ದ್ವಿಪಕ್ಷೀಯ ಭಾರತ ಭೇಟಿ ಕೈಗೊಂಡಿದ್ದಾರೆ. ಪ್ರಧಾನಮಂತ್ರಿಯವರು ಶ್ರೀಲಂಕಾದ ವಿದೇಶಾಂಗ ಸಚಿವರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ತಿಲಕ್ ಮರಪಾನಾ ಅವರನ್ನು ಅಭಿನಂದಿಸಿದರು
ಈ ವರ್ಷ ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ವೇಶಕ್ ದಿನದಂದು ಶ್ರೀಲಂಕಾಗೆ ನೀಡಿದ್ದ ಫಲಪ್ರದ ಭೇಟಿಯ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪಿಸಿದರು.
ಶ್ರೀಲಂಕಾದೊಂದಿಗೆ ಭಾರತ ಹೊಂದಿರುವ ಉನ್ನತ ಮಹತ್ವದ ನಂಟನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಎರಡೂ ರಾಷ್ಟ್ರಗಳು ಆಳವಾದ ಮತ್ತು ವಿಸ್ತೃತ ಆಧಾರದ ಬಾಂಧವ್ಯವನ್ನು ಹೊಂದಿವೆ. ದ್ವಿಪಕ್ಷೀಯ ಬಾಂಧವ್ಯ ವಿಸ್ತರಿಸಲು ಮತ್ತು ಇನ್ನೂ ಹೆಚ್ಚು ಬಲಪಡಿಸಲು ಶ್ರೀಲಂಕಾದ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಯವರೊಂದಿಗೆ ಆಪ್ತವಾಗಿ ಶ್ರಮಿಸಲು ಎದುರು ನೋಡುತ್ತಿರುವುದಾಗಿ ಪ್ರಧಾನಮಂತ್ರಿಯವರು ತಿಳಿಯಪಡಿಸಿದರು.