ಸಿಂಗಾಪೂರದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಲೀ ಸೈನ್ ಲೂಂಗ್, ಅವರು 2016ರ ಅಕ್ಟೋಬರ್ ನಲ್ಲಿ ಭಾರತಕ್ಕೆ ನೀಡಿದ್ದ ಯಶಸ್ವೀ ಭೇಟಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು ಮತ್ತು ಶೃಂಗದಲ್ಲಿ ಕೈಗೊಂಡ ನಿರ್ಧಾರಗಳ ಕುರಿತಂತೆ ಎರಡೂ ಕಡೆಯವರು ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯಶಸ್ವಿಯಾಗಿ ಜಿಎಸ್ಟಿಯನ್ನು ಜಾರಿ ಮಾಡಿರುವುದಕ್ಕೆ ಪ್ರಧಾನಮಂತ್ರಿಯವರಿಗೆ ಶ್ರೀ ಷಣ್ಮುಖರತ್ನಂ ಅವರು ಅಭಿನಂದನೆ ಸಲ್ಲಿಸಿದರು. ದ್ವಿಪಕ್ಷೀಯ ಬಾಂಧವ್ಯದಲ್ಲಿ, ಅದರಲ್ಲೂ ಆರ್ಥಿಕ ರಂಗದಲ್ಲಿನ ಪ್ರಗತಿಯ ಕುರಿತಂತೆ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಹೂಡಿಕೆ, ನಗರಾಭಿವೃದ್ಧಿ, ನಾಗರಿಕ ವಿಮಾನಯಾನ ಮತ್ತು ಕೌಶಲ ಅಭಿವೃದ್ಧಿ ವಲಯಗಳಲ್ಲಿನ ಆಪ್ತ ದ್ವಿಪಕ್ಷೀಯ ಸಹಕಾರವನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು.
ಇಬ್ಬರೂ ನಾಯಕರು ಬ್ಯಾಂಕಿಂಗ್, ಡಿಜಿಟಲ್ ಫೈನಾನ್ಸ್, ಪ್ರವಾಸೋದ್ಯಮ ಮತ್ತು ನಾವಿನ್ಯತೆಯ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರದ ಸಾಮರ್ಥ್ಯದ ಕುರಿತಂತೆಯೂ ಚರ್ಚಿಸಿದರು.