ಕೆಂಟುಕಿಯ ರಾಜ್ಯಪಾಲರಾದ ಶ್ರೀ ಮಟ್ಟ್ ಬೆವಿನ್ ಅವರಿಂದು ಗಾಂಧಿನಗರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಭಾರತ ಮತ್ತು ಯು.ಎಸ್. ಗಳು ವ್ಯಾಪಾರೋದ್ಯಮ ಮತ್ತು ಹೂಡಿಕೆ ಸಹಿತ ಉಭಯದೇಶಗಳ ನಡುವೆ ವ್ಯೂಹಾತ್ಮಕ ಸಹಭಾಗಿತ್ವ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ನಿಕಟವಾಗುತ್ತಿರುವ ಬಗ್ಗೆ ಪ್ರಧಾನ ಮಂತ್ರಿ ಅವರು ಗಮನ ಸೆಳೆದರು. ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಅಮೇರಿಕಾ ದೊಡ್ಡ ಹೂಡಿಕೆ ಮಾಡುತ್ತಿರುವುದನ್ನು ಅವರು ಸ್ವಾಗತಿಸಿದರಲ್ಲದೆ ಮೇಕ್ ಇನ್ ಇಂಡಿಯಾದಲ್ಲಿ ಅವಕಾಶಗಳನ್ನು ಅನ್ವೇಷಣೆ ಮಾಡುವಂತೆ ಅವರು ಅಮೇರಿಕಾ ಕಂಪೆನಿಗಳಿಗೆ ಆಹ್ವಾನ ನೀಡಿದರು.
ಕೆಂಟುಕಿ ಮತ್ತು ಭಾರತದ ನಡುವೆ ವ್ಯಾಪಾರ ಮತ್ತು ಹೂಡಿಕೆ ಹೆಚ್ಚುತ್ತಿರುವ ಬಗ್ಗೆ ರಾಜ್ಯಪಾಲರು ಪ್ರಧಾನ ಮಂತ್ರಿ ಅವರಿಗೆ ವಿವರಿಸಿದರು. ಅವರು ಕೆಂಟುಕಿ ರಾಜ್ಯ ಸಹಿತ ಅಮೇರಿಕಾದಲ್ಲಿರುವ ಭಾರತೀಯ ವೃತ್ತಿಪರರ ಕೊಡುಗೆಯನ್ನು ಕೊಂಡಾಡಿದರು.