ಟೊಯೋಟ ಅಧ್ಯಕ್ಷ ಶ್ರೀ. ಅಕಿಯೋ ಟೋಯೋಡ ಮತ್ತು ಸುಜುಕಿ ಅಧ್ಯಕ್ಷ ಶ್ರೀ. ಓ. ಸುಜುಕಿ ಅವರು ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಟೋಯೋಟ – ಸುಜುಕಿ ವಾಣಿಜ್ಯ ಪಾಲುದಾರಿಕೆ ಮತ್ತು ಭವಿಷ್ಯದ ತಾಂತ್ರಿಕ ಅಭಿವೃದ್ಧಿ ಈ ಸಂದರ್ಭದಲ್ಲಿ ಚರ್ಚೆಗೆ ಬಂದವು. ಸಣ್ಣ ಕಾರುಗಳ ಅದರಲ್ಲೂ ಭಾರತದಲ್ಲಿ ತಯಾರಿಸುವ ಈ ಪಾಲುದಾರಿಕೆಯು ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಟಯೋಟಾದ ಜಾಗತಿಕ ನಾಯಕತ್ವವನ್ನು ಸುಜುಕಿಯ ಬಲದೊಂದಿಗೆ ಒಟ್ಟಿಗೆ ತರುವ ನಿರೀಕ್ಷೆ ಇದೆ. ಇದು ಭಾರತಕ್ಕೆ ಹೊಸ ತಂತ್ರಜ್ಞಾನ ಅಭಿವೃದ್ಧಿಗಳನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ದೊಡ್ಡ ಪ್ರಮಾಣವು ಈ ತಂತ್ರಜ್ಞಾನಕ್ಕೆ ಅಗತ್ಯವಾದ ಬಿಡಿಭಾಗಗಳ ಸ್ಥಳೀಯ ಉತ್ಪಾದಕರಿಗೆ ಅವಕಾಶ ನೀಡುತ್ತದೆ
ಹೀಗಾಗಿ, ಈ ಪಾಲುದಾರಿಕೆಯು ಮೇಕ್ ಇನ್ ಇಂಡಿಯಾವನ್ನೂ ಉತ್ತೇಜಿಸಲಿದೆ ಮತ್ತು ಉದ್ಯೋಗ ಸೃಷ್ಟಿಗೂ ಕೊಡುಗೆ ನೀಡಲಿದೆ. ಜೊತೆಗೆ ಇದು ಹೊಸ ತಂತ್ರಜ್ಞಾನದ ಕಾರುಗಳನ್ನು ಭಾರತದಿಂದ ರಫ್ತು ಮಾಡುವ ಅವಕಾಶವನ್ನೂ ತೆರೆಯಲಿದೆ.