ವಿಕಸಿತ ಭಾರತ ಸಂಕಲ್ಪ ಯಾತ್ರೆಯ (ವಿ.ಬಿ.ಎಸ್.ವೈ) ಫಲಾನುಭವಿಗಳೊಂದಿಗೆ ವಿಡಿಯೊ ಸಮಾವೇಶ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು. ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪುವುದನ್ನು ಖಾತ್ರಿಪಡಿಸುವ ಮೂಲಕ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಖಾತ್ರಿಪಡಿಸುವಿಕೆ ಸಾಧಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಕೈಗೊಳ್ಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಶೇಖ್ ಪುರದ ಹಾಲು ಮಾರಾಟಗಾರ್ತಿ ಮತ್ತು ವಿ.ಬಿ.ಎಸ್.ವೈ ಫಲಾನುಭವಿ ಶ್ರೀಮತಿ ನಾಡಿಯಾ ನಜೀರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಶ್ರೀಮತಿ ನಾಡಿಯಾ ನಜೀರ್ ಅವರ ಕುಟುಂಬದ ಸದಸ್ಯರ ಬಗ್ಗೆ ವಿಚಾರಿಸಿದರು. ತನ್ನ ಪತಿ ಆಟೋ ಚಾಲಕನಾಗಿದ್ದು, ತನ್ನ ಇಬ್ಬರು ಮಕ್ಕಳು ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಶ್ರೀಮತಿ ನಾಡಿಯಾ ನಜೀರ್ ಅವರು ಉತ್ತರಿಸಿದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಮ್ಮ ಹಳ್ಳಿಯಲ್ಲಿ ಕಂಡುಬರುವ ಬದಲಾವಣೆಗಳ ಕುರಿತಾಗಿ ಪ್ರಧಾನಮಂತ್ರಿಯವರು ವಿಚಾರಿಸಿದಾಗ, ಶ್ರೀಮತಿ ನಾಡಿಯಾ ನಜೀರ್ ಅವರು ಜಲ ಜೀವನ್ ಮಿಷನ್ ಶುದ್ಧ ಮತ್ತು ಸುರಕ್ಷಿತ ಟ್ಯಾಪ್ ಮಾಡಿದ ನೀರು ಸರಬರಾಜು ಮಾಡುವ ಮೂಲಕ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಯನ್ನು ಸಾಬೀತುಪಡಿಸಿದೆ ಎಂದು ಉತ್ತರಿಸಿದರು, ಅಲ್ಲಿ ಹಿಂದೆ ಬಹುಕಾಲ ನೀರಿನ ಸಮಸ್ಯೆಗಳು ಇದ್ದವು. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕಗಳ ಪ್ರಯೋಜನಗಳು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮತ್ತು ಪಿ.ಎಂ.ಜಿ.ಕೆ.ಎ.ವೈ. ಅನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದ್ದಕ್ಕಾಗಿ ಶ್ರೀಮತಿ ನಾಡಿಯಾ ನಜೀರ್ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ತಮ್ಮ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ (ವಿ.ಬಿ.ಎಸ್.ವೈ) ವ್ಯಾನ್ ಅನುಭವ ಮತ್ತು ಪ್ರಭಾವದ ಬಗ್ಗೆಯೂ ಶ್ರೀ ಮೋದಿಯವರು ಅವರಲ್ಲಿ ವಿಚಾರಿಸಿದರು. ಕಾಶ್ಮೀರಿ ಸಂಸ್ಕೃತಿಯ ಪ್ರಕಾರ ಮಂಳಕರ ವಿಧಿಪೂರ್ವಕ ನಡೆಸುವ ಆಚರಣೆಗಳಿಂದ ಜನರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ (ವಿ.ಬಿ.ಎಸ್.ವೈ) ವ್ಯಾನ್ ಗಳನ್ನು ಸ್ವಾಗತಿಸುತ್ತಿದ್ದಾರೆ ಎಂದು ಶ್ರೀಮತಿ ನಾಡಿಯಾ ನಜೀರ್ ಅವರು ಉತ್ತರಿಸಿದರು.
ಶ್ರೀಮತಿ ನಾಡಿಯಾ ನಜೀರ್ ಅವರೊಂದಿಗೆ ನಡೆಸಿದ ಸಂವಾದದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹಳ ಸಂತಸ ವ್ಯಕ್ತಪಡಿಸಿದರು. ಕಾಶ್ಮೀರದ ಮಹಿಳಾ ಶಕ್ತಿಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಮತ್ತು ರಾಷ್ಟ್ರದ ಅಭಿವೃದ್ಧಿಯ ಉದ್ದೇಶದಿಂದ ಮುನ್ನಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. "ನಿಮ್ಮ ಉತ್ಸಾಹವು ನನಗೆ ಶಕ್ತಿಯ ಮೂಲವಾಗಿದೆ" ಎಂದು ಅವರು ಹೇಳಿದರು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ (ವಿ.ಬಿ.ಎಸ್.ವೈ) ವ್ಯಾನ್ ಗಾಗಿನ ಜನತೆ ತೋರಿದ ಉತ್ಸಾಹವು ದೇಶದ ಉಳಿದ ಭಾಗಗಳಿಗೆ ಸಕಾರಾತ್ಮಕ ಸಂದೇಶವನ್ನು ಕಳುಹಿಸುತ್ತದೆ. ಇದು ಹೊಸ ಪೀಳಿಗೆಯ ಉಜ್ವಲ ಭವಿಷ್ಯದ ಭರವಸೆಯ ಲಕ್ಷಣ ಇದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ದೇಶಾದ್ಯಂತ ಜನರು ಅಭಿವೃದ್ಧಿಯ ಬ್ಯಾಂಡ್ ವ್ಯಾಗನ್ ಗೆ ಸೇರುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು ಹಾಗೂ ಜಮ್ಮು ಮತ್ತು ಕಾಶ್ಮೀರದ ಜನರ ಕೊಡುಗೆಗಳನ್ನು ಶ್ಲಾಘಿಸಿದರು.