ಓಮನ್ ಭಾರತ ಜಂಟಿ ವಾಣಿಜ್ಯ ಮಂಡಳಿಯ ಭಾಗವಾಗಿರುವ ಓಮನ್ ನ ಸುಮಾರು 30 ಯುವ ವಾಣಿಜ್ಯ ನಾಯಕರ ಗುಂಪು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ಅವರು ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಸಾಗರ ನಂಟು ಮತ್ತು ಇತಿಹಾಸದ ಮೇಲಿನ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂವಾದದ ವೇಳೆ, ಪ್ರಧಾನಿಯವರು ಎರಡೂ ದೇಶಗಳ ನಡುವಿನ ಇಂಧನ ಭದ್ರತೆ ಮತ್ತು ಆಹಾರ ಭದ್ರತೆ ಸಹಕಾರದ ವ್ಯಾಪ್ತಿಯನ್ನು ಒತ್ತಿ ಹೇಳಿದರು. ಪವಿತ್ರ ರಂಜಾನ್ ಮಾಸದ ಆರಂಭದ ಸಂದರ್ಭದಲ್ಲಿ ಓಮನ್ ನ ಸುಲ್ತಾನರಿಗೆ ತಮ್ಮ ಶುಭಾಶಯಗಳನ್ನೂ ಸಲ್ಲಿಸಿದರು.