2019ರ ನವೆಂಬರ್ 4ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ – ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆ 2019ರ ವೇಳೆ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸ್ಕಾಟ್ ಮಾರಿಸನ್ ಅವರನ್ನು ಬ್ಯಾಂಕಾಕ್ ನಲ್ಲಿ ಭೇಟಿ ಮಾಡಿದರು.
ಈ ಭೇಟಿಯ ವೇಳೆ ಇಬ್ಬರೂ ನಾಯಕರು, ದ್ವಿಪಕ್ಷೀಯ ಬಾಂಧವ್ಯದಲ್ಲಿ ಆಗಿರುವ ಪ್ರಗತಿಯ ಪರಾಮರ್ಶೆ ನಡೆಸಿ, ಎಲ್ಲಾ ಹಂತಗಳಲ್ಲಿ ನಿಯಮಿತವಾಗಿ ನಡೆಯುತ್ತಿರುವ ಉನ್ನತ ಮಟ್ಟದ ಸಭೆಗಳು ಮತ್ತು ವಿನಿಮಯಗಳು ಬಾಂಧವ್ಯದಲ್ಲಿ ಸಕಾರಾತ್ಮಕ ವೇಗವನ್ನು ರೂಪಿಸಿವೆ ಎಂಬುದನ್ನು ಗಮನಿಸಿ, ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ತಮ್ಮ ಇಚ್ಛೆಯನ್ನು ಪುನರುಚ್ಚರಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ಶಾಂತಿ, ಸ್ಥಿರತೆ ಮತ್ತು ಪ್ರಗತಿಗಾಗಿ ಮುಕ್ತ, ಪಾರದರ್ಶಕ ಮತ್ತು ಸಮಗ್ರ ಭಾರತ – ಪೆಸಿಫಿಕ್ ವಲಯದ ಬಗೆಗಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಎರಡೂ ರಾಷ್ಟ್ರಗಳ ವ್ಯೂಹಾತ್ಮಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತಿದ್ದು, ಇದು ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಬಹುಪಕ್ಷೀಯವಾಗಿ ಒಟ್ಟಾಗಿ ಶ್ರಮಿಸುವ ಅವಕಾಶ ಕಲ್ಪಿಸಿದೆ ಎಂಬುದನ್ನು ಉಲ್ಲೇಖಿಸಿದರು.
ರಕ್ಷಣೆ ಮತ್ತು ಭದ್ರತೆ ಕ್ಷೇತ್ರದಲ್ಲಿ ಹೆಚ್ಚಿನ ಮಾತುಕತೆಯನ್ನು ಉಲ್ಲೇಖಿಸಿದ ಎರಡೂ ಕಡೆಯವರು ಸಾಗರ ವಿಚಾರದಲ್ಲಿನ ಸಹಕಾರವರ್ಧನೆಗೆ ಸಮ್ಮತಿ ಸೂಚಿಸಿದರು. ಇಬ್ಬರೂ ನಾಯಕರು ವಿಧ್ವಂಸಕತೆ ಮತ್ತು ಭಯೋತ್ಪಾದನೆಯ ಭೀತಿಗಳ ಕುರಿತು ಚರ್ಚಿಸಿದರು ಮತ್ತು ಈ ಪಿಡುಗಿನ ವಿರುದ್ಧದ ಹೋರಾಟಕ್ಕೆ ಆಪ್ತವಾಗಿ ಶ್ರಮಿಸಲು ಸಮ್ಮತಿಸಿದರು.
ಜನವರಿ 2020ರಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮತ್ತು ರೈಸೀನಾ ಸಂವಾದದ ವೇಳೆ ಪ್ರಧಾನ ಭಾಷಣ ಮಾಡುವಂತೆ ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರಿಗೆ ಪ್ರಧಾನಮಂತ್ರಿ ಮೋದಿ ಮತ್ತೊಮ್ಮೆ ಆಹ್ವಾನ ನೀಡಿದರು. ಇಬ್ಬರೂ ನಾಯಕರು ಭೇಟಿಯ ಯಶಸ್ವೀ ಫಲಶ್ರುತಿಗಾಗಿ ಸಮಗ್ರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು.
Accelerating friendship with Australia.
— PMO India (@PMOIndia) November 4, 2019
Prime Ministers @narendramodi and @ScottMorrisonMP met on the sidelines of the @ASEAN related Summits in Bangkok. pic.twitter.com/JT1BeEFntt